‘ಗೃಹಲಕ್ಷ್ಮಿ’ ಯೋಜನೆ ಕಾಂಗ್ರೆಸ್ ಭರವಸೆ.

ಮುಂಬರುವ ವಿಧಸನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬೆಲೆ ಏರಿಕೆಯಿಂದ ನೊಂದಿರುವ ಮಹಿಳೆಯರಿಗೆ ನೆರವಾಗಲು ರಾಜ್ಯದ ಪ್ರತಿ ಮನೆಯ ಓರ್ವ ಗೃಹಿಣಿಗೆ ಶಕ್ತಿ ತುಂಬಲು ಪ್ರತಿ ತಿಂಗಳು 2 ಸಾವಿರ ರೂ ಸಹಾಯಧನ ನೀಡುವ ಗೃಹಲಕ್ಮಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.ಬೆಂಗಳೂರಿನ ಅರಮನೆ ಮೈದಾನದಲ್ಲಿಂದು  ನಾಯಕಿ ಸಮಾವೇಶದಲ್ಲಿ ಮಾತನಾಡಿದ ಅವರು,ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ. ಮಹಿಳೆಯರು ಯುವಕರಿಗೆ ಶಕ್ತಿ ತುಂಬಿದರೆ ದೇಶದಲ್ಲಿ ಬದಲಾವಣೆ ಖಂಡಿತವಾಗಿಯೂ ಆಗುತ್ತದೆ. ಈ ಕಾರ್ಯ ಈ ಭೂಮಿಯಿಂದ ಆಗಲಿ ಎಂದು ತಿಳಿಸಿದರು.ರಾಜೀವ್ ಗಾಂಧಿ ಅವರು ಇದೇ ಸ್ಥಳದಿಂದ ದೇಶದ ನಾಯಕತ್ವ ವಹಿಸಿದ್ದರು. ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಈ ಕಾರ್ಯಕ್ರಮದ ಮೂಲಕ ರಾಜಕೀಯವಾಗಿ ಕರ್ನಾಟಕಕ್ಕೆ ಮೊದಲ ಬಾರಿಗೆ ಆಗಮಿಸಿದ್ದು, ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು.ಇಂದಿರಾ ಗಾಂಧಿ ಅವರ ಮಾತನ್ನು ಸೋನಿಯಾ ಗಾಂಧಿ ಅವರು ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದು, ಕಾಂಗ್ರೆಸ್ ಒಂದು ವಿಶೇಷವಾದ ಸಂಸ್ಥೆ, ಕಾಂಗ್ರೆಸ್ ಆರಂಭದಿಂದಲೂ ನಮ್ಮ ಜನರ ಮೂಲಭೂತ ಸಮಸ್ಯೆ ಗುರುತಿಸಿಕೊಂಡು, ಅವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಜಾತ್ಯಾತೀತತೆ, ಪ್ರಜಾಪ್ರಭುತ್ವದ ಕಡೆ ನಿಂತಿದೆ. ಇವು ಈಗಲೂ ನಮ್ಮ ಪಾಲಿನ ಮಾರ್ಗದರ್ಶಿ. ನಾವು ಕೆಳ ಮಟ್ಟದಿಂದ ಕಾರ್ಯಕರ್ತರಿಗೆ ಮಾಡಬೇಕಾದ ಕೆಲಸದ ಜವಾಬ್ದಾರಿ ವಹಿಸಿದರೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ ಎಂದು ತಿಳಿಸಿದರು. ಪುರುಷರು ನೈಜ ಸಾಮರ್ಥ್ಯವನ್ನು ಅರಿವಾಗಿಸುವ ಮೊದಲು ಮಹಿಳೆಯರಿಗೆ ಪೂರ್ಣ ಪ್ರಮಾಣದ ಸಾಮರ್ಥ್ಯ ಬೆಳೆಸಿಕೊಳ್ಳಲು ಅನುವು ಮಾಡಿಕೊಡಬೇಕು. ಇದನ್ನು ಕಲ್ಪಿಸಿದ ಕ್ಷಣದಿಂದ ಆಕೆ ಶಿಕ್ಷಕಿ ಪಾತ್ರ ವಹಿಸುತ್ತಾಳೆ. ಆಕೆ ಉತ್ತಮ ಪತ್ನಿ ಹಾಗೂ ತಾಯಿಯಾಗಿರುತ್ತಾಳೆ. ಅವಳೇ  ನಾಯಕಿ ಎಂದು ಡಿಕೆಶಿ ಬಣ್ಣಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಗೆದ್ದರೆ ಕೈಗೆ ಸಿಗಲ್ಲ.

Tue Jan 17 , 2023
    ಕೋಲಾರ: ‘ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಅನುಮಾನ. ಆದರೆ, ಅವರನ್ನು ಗೆಲ್ಲಿಸಿ ಕಳುಹಿಸಿದರೆ ಮತ್ತೆ ಕೈಗೆ ಸಿಗಲ್ಲ. ಶ್ರೀನಿವಾಸಪುರದಲ್ಲಿ ತಮ್ಮ ಸೋಲಿನ ಭೀತಿಯಿಂದ ಅವರನ್ನು ಇಲ್ಲಿಗೆ ರಮೇಶ್‌ ಕುಮಾರ್‌ ಕರೆ ತರುತ್ತಿದ್ದಾರೆ. ಧೈರ್ಯವಿದ್ದರೆ ಕೆ.ಶ್ರೀನಿವಾಸಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿ’ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದರು. ತಾಲ್ಲೂಕು ಜೆಡಿಎಸ್‌ ಪಕ್ಷದಿಂದ ಸೋಮವಾರ ನಗರದ ಸಿಎಂಆರ್ ಮಂಡಿ ಬಳಿ ಕೋಲಾರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಹಾಗೂ […]

Advertisement

Wordpress Social Share Plugin powered by Ultimatelysocial