ಬಾಲಿವುಡ್ ಪಾರ್ಟಿಗಳಲ್ಲಿ ನಕಲಿತನವೇ ಹೆಚ್ಚು; ನಕಲಿಗಳ ನಡುವೆ ಇರಲು ಇಷ್ಟವಿಲ್ಲ ಎಂದ ನವಾಜುದ್ದೀನ್ ಸಿದ್ಧಿಕಿ;

ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಸಹಜ ಅಭಿನಯದಿಂದಲೇ ಸಾವಿರಾರು ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ವರ್ಷ ಸಿರಿಯಸ್ ಮೆನ್ ಮತ್ತು ರಾತ್ ಅಕೇಲಿ ಹೈ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ನೆಟ್‍ಫ್ಲಿಕ್ಸ್ ಚಲನಚಿತ್ರ ಸಿರಿಯಸ್ ಮೆನ್‍ನಲ್ಲಿನ ಪಾತ್ರಕ್ಕಾಗಿ ನವಾಜುದ್ದೀನ್ ಸಿದ್ದಿಕಿ ಈ ವರ್ಷ ಅಂತರರಾಷ್ಟ್ರೀಯ ಎಮ್ಮಿಗೆ ನಾಮನಿರ್ದೇಶನಗೊಂಡರು.

ಈ ವೇಳೆ 2022ರಲ್ಲಿನ ತಮ್ಮ ಪ್ರಾಜೆಕ್ಟ್‍ಗಳ ಬಗ್ಗೆ ಮಾತನಾಡುತ್ತಾ, 2022ರಲ್ಲಿ ಐದು ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.

ಇನ್ನು ಜನಪ್ರಿಯತೆಯಿಂದ ಸದಾ ದೂರ ಉಳಿಯುವ ನವಾಜುದ್ದೀನ್ ಸಿದ್ದೀಕಿ, ಎಲ್ಲಾ ರಾಜ್ಮತಾಜ್ ಅಂದರೆ ದೊಡ್ಡ ದೊಡ್ಡ ಪಾರ್ಟಿಗಳಿಂದ ದೂರು ಉಳಿಯಲು ಕಾರಣವೇನು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.

ನಾನು ಚಲನಚಿತ್ರದಲ್ಲಿ ಆಯ್ಕೆ ಮಾಡಿಕೊಳ್ಳುವ ರೀತಿಯಲ್ಲೇ ನೈಜ ಬದುಕಿನಲ್ಲೂ ಬದುಕುತ್ತಿದ್ದೇನೆ. ನನ್ನ ಪಾತ್ರಗಳು ನೈಜ, ಸಹಜತೆಯಿಂದ ಕೂಡಿವೆ. ನಾನು ಸ್ಥಳೀಯ ವ್ಯಕ್ತಿ, ಆದರೆ ಜಾಗತಿಕವಾಗಿರುತ್ತೇನೆ. ನೀವು ನಿಮ್ಮ ತತ್ವ, ಸಿದ್ಧಾಂತಗಳಿಗೆ ಅಂಟಿಕೊಂಡರೆ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಹೇಳಿದರು.

ನನ್ನ ಮನಸ್ಥಿತಿಯಲ್ಲೂ ಸಿನಿಮಾಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಪಾತ್ರದಲ್ಲೂ ಯಾವ ವ್ಯತ್ಯಾಸವೂ ಇರುವುದಿಲ್ಲ. ನನ್ನಲ್ಲಿ ನಕಲಿತನ ಇಲ್ಲ. ಹಾಗಾಗಿ ನಾನು ನಕಲಿ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ನನಗೆ ಸ್ಟಾರ್ ಡಮ್, ಗ್ಲಾಮರ್ ಸಿನಿಮಾಗಳಲ್ಲಿ ಅಭಿನಯಿಸಲು ಇಷ್ಟವಿಲ್ಲ. ನಾನು ಚಿತ್ರರಂಗದ ಸಮಾರಂಭಗಳು ಅಥವಾ ಪಾರ್ಟಿಗಳಲ್ಲಿ ಭಾಗವಹಿಸುವುದಕ್ಕಿಂತ ಸಾಮಾನ್ಯ ಜನರ ನಡುವೆ ಬದುಕಲು ಇಷ್ಟಪಡುತ್ತೇನೆ. ನಾನು ಅಲ್ಲಿ ಬಹಳಷ್ಟು ಬೂಟಾಟಿಕೆಗಳು, ನಕಲಿತನಗಳನ್ನು ಕಾಣುತ್ತೇನೆ. ಇಂತಹ ಬೂಟಾಟಿಕೆ, ನಕಲಿತನಗಳ ನಡುವೆ ಇರಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯಲ್ಲಿ ಚಿತ್ರಮಂದಿರಗಳು ಬಂದ್ ಇಕ್ಕಟ್ಟಿನಲ್ಲಿ 'ಆರ್‌ಆರ್‌ಆರ್‌';

Wed Jan 5 , 2022
ಮತ್ತೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅದರಲ್ಲಿಯೂ ಓಮಿಕ್ರಾನ್ ಭೀತಿ ರಾಜ್ಯಗಳನ್ನು ಹೈರಾಣ ಮಾಡಿದೆ. ಹಾಗಾಗಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಪ್ಯೂ ವಿಧಿಸಲಾಗಿದ್ದು, ಇನ್ನಿತರೆ ನಿಯಮಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಕೋವಿಡ್ ಪ್ರಕರಣಗಳು ಹೆಚ್ಚಿರುವ ದೆಹಲಿಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಜೊತೆಗೆ ಚಿತ್ರಮಂದಿರಗಳನ್ನು ಸಹ ಬಂದ್ ಮಾಡಲಾಗಿದೆ. ಇದು ಈಗಾಗಲೇ ಬಿಡುಗಡೆ ಆಗಿರುವ ಹಾಗೂ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಬೇಕಿರುವ […]

Advertisement

Wordpress Social Share Plugin powered by Ultimatelysocial