ಎಚ್.ಡಿ.ದೇವೇಗೌಡ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಏನು ತೀರ್ಪನ್ನು ನೀಡಲಿದ್ದಾನೆ !

ಮಂಗಳೂರು, ಫೆ 13: ರಾಜಕೀಯವನ್ನು ಅರಿದು ಕುಡಿದಿರುವ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠರೂ ಆಗಿರುವ ಎಚ್.ಡಿ.ದೇವೇಗೌಡ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಏನು ತೀರ್ಪನ್ನು ನೀಡಲಿದ್ದಾನೆ ಎನ್ನುವುದರ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.ನಗರದಲ್ಲಿ ಮಾಧ್ಯಮದವವರೊಂದಿಗೆ ಮಾತನಾಡುತ್ತಿದ್ದ ದೇವೇಗೌಡ್ರು, “ನನ್ನ ಹತ್ತಿರ ಯಾರು ಬೇಕಾದರೂ ಬರಬಹುದು, ಆದರೆ ನನ್ನ ನಿರ್ಧಾರವನ್ನು ಈಗ ಹೇಳುವುದಿಲ್ಲ”ಎಂದು ಹೇಳಿದ್ದಾರೆ.ಆ ಮೂಲಕ, ಬಿಜೆಪಿಯವರು ಬಂದರೂ ತಿರಸ್ಕರಿಸುವುದಿಲ್ಲ ಎನ್ನುವ ಮುನ್ಸೂಚನೆಯನ್ನು ಗೌಡ್ರು ನೀಡಿದ್ದಾರೆ.ಹಿಜಾಬ್, ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆ, ಮುಂಬರುವ ಚುನಾವಣೆಯ ವಿಚಾರದ ಬಗ್ಗೆ ಮಾತನಾಡಿದ ದೇವೇಗೌಡ್ರು, ಪ್ರಧಾನಿ ಮೋದಿಯವರ ಬಗ್ಗೆ ಉತ್ತಮ ಅಭಿಪ್ರಾಯವನ್ನು ಗೋಷ್ಠಿಯಲ್ಲಿ ವ್ಯಕ್ತ ಪಡಿಸಲಿಲ್ಲ.ಇದರ ಜೊತೆಗೆ, ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜ್ ವಿರುದ್ದ ಪರಾಭವಗೊಂಡ ನಂತರ, ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಹೇಗೆ ಎನ್ನುವುದರ ಬಗ್ಗೆಯೂ ದೇವೇಗೌಡ್ರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದಾರೆ.ಮೋದಿಯವರನ್ನು ಹಲವಾರು ಬಾರಿ ಅವರ ನಿವಾಸ/ಕಚೇರಿಯಲ್ಲಿ ಭೇಟಿಯಾಗಿದ್ದೇನೆ”ನಾನು ಪ್ರಧಾನಿ ಮೋದಿಯವರನ್ನು ಹಲವಾರು ಬಾರಿ ಅವರ ನಿವಾಸ/ಕಚೇರಿಯಲ್ಲಿ ಭೇಟಿಯಾಗಿದ್ದೇನೆ. ತುಂಬಾ ವಿಶ್ವಾಸದಿಂದ ನನ್ನನ್ನು ಬರ ಮಾಡಿಕೊಳ್ಳುತ್ತಾರೆ, ಜೊತೆಗೆ, ನನ್ನ ಎಲ್ಲಾ ಮಾತನ್ನು ಅವರು ಕಿವಿಗೊಟ್ಟು ಆಲಿಸುತ್ತಾರೆ. ಆದರೆ, ಏನು ಪ್ರಯೋಜನ? ವಿನಯತೆಯಿಂದ ಮಾತನಾಡುತ್ತಾರೆ ಅಷ್ಟೇ.. ಯಾವುದೇ ಉತ್ತರವನ್ನು ಅವರು ನೀಡುವುದಿಲ್ಲ, ಕೆಲಸವನ್ನೂ ಮಾಡಿಕೊಡುವುದಿಲ್ಲ. ಹಾಸನದಲ್ಲಿ ಐಐಟಿ ಸ್ಥಾಪನೆ ಸೇರಿದಂತೆ, ಅವರ ಮುಂದಿಟ್ಟ ಯಾವ ಅಹವಾಲು ಕೂಡಾ ಕಾರ್ಯರೂಪಕ್ಕೆ ಬಂದಿಲ್ಲ”ಎಂದು ದೇವೇಗೌಡ್ರು, ಪ್ರಧಾನಿಯ ಬಗ್ಗೆ ಬೇಸರವನ್ನು ವ್ಯಕ್ತ ಪಡಿಸಿದರು.ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿದ ದೇವೇಗೌಡ್ರು, “ಕುಮಾರಸ್ವಾಮಿಯವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು, ಅವರು ಅದಕ್ಕೆ ಸ್ವತಂತ್ರರು. ಆದರೆ, ಅವರು ರಾಮನಗರ ಬಿಟ್ಟು ಬೇರೆಲ್ಲೂ ಕಣಕ್ಕೆ ಇಳಿಯುವುದಿಲ್ಲ. ಕಳೆದ ಬಾರಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡಿದರು. ಇದರಿಂದ, ಹಾಸನ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಸೋಲುವಂತಾಯಿತು”ಎಂದು ಗೌಡ್ರು ಅಸಮಾಧಾನ ವ್ಯಕ್ತ ಪಡಿಸಿದರು.ಕಾಂಗ್ರೆಸ್ ಮತ್ತು ಬಿಜೆಪಿಯ ಬೆಂಬಲವೇ ಕಾರಣ”ನಾನು ಯಾವುದೇ ರಾಷ್ಟ್ರೀಯ ಪಕ್ಷಗಳ ಜೊತೆಗೆ ದ್ವೇಷಕ್ಕೆ ಹೋಗುವುದಿಲ್ಲ. ನಾನು ರಾಜ್ಯಸಭೆಗೆ ಆಯ್ಕೆಯಾಗಲು ಕಾಂಗ್ರೆಸ್ ಮತ್ತು ಬಿಜೆಪಿಯ ಬೆಂಬಲವೇ ಕಾರಣ. ಬಿಜೆಪಿಯವರು ಗೌಡ್ರು ನಿಂತರೆ ಕ್ಯಾಂಡಿಡೇಟ್ ಹಾಕುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದರು, ಸೋನಿಯಾ ಗಾಂಧಿಯವರೂ ವೈಯಕ್ತಿಕವಾಗಿ ಕರೆ ಮಾಡಿ ನಿಮಗೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದರು. ನಮ್ಮ ಪಕ್ಷಕ್ಕೆ ಇರುವ ಸಂಖ್ಯಾಬಲದ ಆಧಾರದ ಮೇಲೆ ಕೇವಲ ಮೂರು ನಿಮಿಷ ಮಾತನಾಡಲು ಅವಕಾಶ ನೀಡಲಾಯಿತು, ಇದು ನನಗೆ ಬಹಳ ನೋವನ್ನು ತಂದಿತು”ಎಂದು ದೇವೇಗೌಡ್ರು ಹೇಳಿದರು.ಮುಂದಿನ ಅಸೆಂಬ್ಲಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ”ಪಂಚ ರಾಜ್ಯದ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ದೇಶದ ರಾಜಕೀಯದಲ್ಲಿ ಕೆಲವು ಬದಲಾವಣೆಯಾಗಲಿದೆ. ಮುಂದಿನ ಕರ್ನಾಟಕ ಅಸೆಂಬ್ಲಿ ಚುನಾವಣೆಯನ್ನು ನಾವೇ ಗೆಲ್ಲುತ್ತೇವೆ ಎನ್ನುವವರ ಬಂಡವಾಳ ನಮಗೆ ಗೊತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಬೆಂಬಲ ಬೇಕೇ ಬೇಕು”ಎಂದು ದೇವೇಗೌಡ್ರು ಹೇಳುವ ಮೂಲಕ, ಮುಂದಿನ ಅಸೆಂಬ್ಲಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಭವಿಷ್ಯವನ್ನು ಎಚ್.ಡಿ.ದೇವೇಗೌಡ ನುಡಿದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರೋಜಿನಿ ನಾಯ್ಡು ಜನ್ಮ ವಾರ್ಷಿಕೋತ್ಸವ: ಭಾರತದ ನೈಟಿಂಗೇಲ್ ಅನ್ನು ನೆನಪಿಟ್ಟುಕೊಳ್ಳಲು ಸ್ಪೂರ್ತಿದಾಯಕ ಉಲ್ಲೇಖಗಳು

Sun Feb 13 , 2022
    ಸರೋಜಿನಿ ನಾಯ್ಡು ಜನ್ಮ ದಿನಾಚರಣೆ: ಮಹಿಳಾ ನಾಯಕರು ಶತಮಾನಗಳಿಂದ ಮಹಿಳೆಯರಿಗೆ ತಮ್ಮ ಧ್ವನಿಯಾಗುವಂತೆ ಪ್ರೇರೇಪಿಸಿದ್ದಾರೆ. ಅವರು ಯಾವಾಗಲೂ ತಮ್ಮ ಹಕ್ಕುಗಳಿಗಾಗಿ ನಿಲ್ಲುವಂತೆ ಮತ್ತು ದುಷ್ಟರ ವಿರುದ್ಧ ಮಾತನಾಡಲು ಮಹಿಳೆಯರನ್ನು ಕೇಳಿಕೊಳ್ಳುತ್ತಾರೆ. ಅಂತಹ ನಾಯಕರಲ್ಲಿ ಒಬ್ಬರು ಸ್ಫೂರ್ತಿ ಮತ್ತು ಪ್ರೇರಣೆಯ ಮೂಲವಾಗಿದೆ ಸರೋಜಿನಿ ನಾಯ್ಡು. ಸರೋಜಿನಿ ನಾಯ್ಡು ಸ್ತ್ರೀವಾದಿ, ಕಾರ್ಯಕರ್ತೆ, ಕವಿ ಮತ್ತು ರಾಜಕೀಯ ನಾಯಕಿ. ಅವರು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ […]

Advertisement

Wordpress Social Share Plugin powered by Ultimatelysocial