ತಲೆ ಕೂದಲು ಬೆಳ್ಳಗಾದವರಿಗೆ ಇಲ್ಲಿದೆ ಸುಲಭ ‘ಪರಿಹಾರ’

ಹಿಂದೆ ವಯಸ್ಸಾಗುತ್ತಲೇ ಕೂದಲು ಬೆಳ್ಳಗಾಗುತ್ತಿತ್ತು. ಆದರೆ ಈಗ ಹಾಗಲ್ಲ, ಹದಿಹರೆಯದವರ ಅಷ್ಟೇ ಯಾಕೆ ಮಕ್ಕಳ ಕೂದಲು ಕೂಡಾ ಬೆಳ್ಳಗಾಗುತ್ತಿದೆ. ಇದಕ್ಕೆ ಮನೆಮದ್ದುಗಳನ್ನು ಪ್ರಯತ್ನಿಸೋಣ.ಕಾದ ತೆಂಗಿನ ಎಣ್ಣೆಗೆ ಮೂರ್ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ ಆರಿಸಿದ ಮೇಲೆ ತಲೆಗೆ ಹಚ್ಚಿಕೊಂಡು ನಂತರ ರಾತ್ರಿ ಪೂರ್ತಿ ಹಾಗೆ ಬಿಟ್ಟು, ಮುಂಜಾನೆ ಸ್ನಾನ ಮಾಡುವುದರಿಂದ ವಿಟಮಿನ್ ಸಿ ಹೆಚ್ಚುತ್ತದೆ.ಇನ್ನು ನೆಲ್ಲಿಕಾಯಿ ಜೊತೆ ಮೆಂತೆ ಪುಡಿಯನ್ನು ಬೆರೆಸಿ ಹಚ್ಚಿಕೊಂಡರೆ ಬಿಳಿ ಕೂದಲ ಸಮಸ್ಯೆ ಮಾಯವಾಗುತ್ತದೆ.ತೆಂಗಿನ ಎಣ್ಣೆಗೆ ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಮೇಲೆ ಅದನ್ನು ಕೂದಲಿಗೆ ಮಸಾಜ್ ಮಾಡಿ 30 ರಿಂದ 45 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇದರಿಂದ ಕಾಂತಿಯುತವಾದ ಕಪ್ಪು ಕೂದಲು ನಿಮ್ಮದಾಗುತ್ತದೆ.ಈರುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿದರೆ ಕೂದಲು ಬೇಗ ಬೆಳ್ಳಗೆ ಆಗುವುದಿಲ್ಲ. ನೆಲ್ಲಿಕಾಯಿ ಹಾಗೂ ನಿಂಬೆ ಹಣ್ಣನ್ನು ಕೂದಲಿಗೆ ನಿಯಮಿತವಾಗಿ ಹಚ್ಚುತ್ತಿದ್ದರೆ ಕೂದಲು ಬಿಳಿಯಾಗದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೋಸ್ಮರಿ ಸಂಯುಕ್ತವು COVID-19 ಸೋಂಕು;

Wed Feb 2 , 2022
ಆಂಟಿಆಕ್ಸಿಡೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಕಾರ್ನೋಸಿಕ್ ಆಮ್ಲದ ಸಂಯುಕ್ತವು SARS-CoV-2 ಸ್ಪೈಕ್ ಪ್ರೋಟೀನ್ ಮತ್ತು ಗ್ರಾಹಕ ಪ್ರೋಟೀನ್ ACE2 ನಡುವಿನ ಪರಸ್ಪರ ಕ್ರಿಯೆಯನ್ನು ನಿರ್ಬಂಧಿಸುತ್ತದೆ ಎಂದು ಕಂಡುಹಿಡಿದಿದೆ. ಸ್ಪೈಕ್ ಪ್ರೋಟೀನ್ ಅನ್ನು SARS-CoV-2 ವೈರಸ್ ಜೀವಕೋಶಗಳಿಗೆ ಸೋಂಕು ತಗುಲಿಸಲು ಬಳಸುತ್ತದೆ, ಆದರೆ ACE2 ಜೀವಕೋಶಗಳನ್ನು ಪ್ರವೇಶಿಸಲು ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ. ತೀವ್ರವಾದ COVID-19 ಮತ್ತು ಆಲ್ಝೈಮರ್ ಸೇರಿದಂತೆ ಇತರ ಕಾಯಿಲೆಗಳಲ್ಲಿ ಸಕ್ರಿಯವಾಗಿರುವ ಪ್ರಬಲ ಉರಿಯೂತದ ಮಾರ್ಗವನ್ನು ಪ್ರತಿಬಂಧಿಸುವಲ್ಲಿ ಕಾರ್ನೋಸಿಕ್ ಆಮ್ಲವು […]

Advertisement

Wordpress Social Share Plugin powered by Ultimatelysocial