ಹಲಾಲ್ ಮಾಂಸದ ವಿರುದ್ಧ ದಿಢೀರನೆ ಆರಂಭವಾಗಿರುವ ಜಟ್ಕಾ ಕಟ್

 

 

ಹಲಾಲ್ ಮಾಂಸದ ವಿರುದ್ಧ ದಿಢೀರನೆ ಆರಂಭವಾಗಿರುವ ಜಟ್ಕಾ ಕಟ್ ಮತ್ತು ಹಿಂದವೀ ಮಾಂಸದಂಗಡಿಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.

ಅನಧಿಕೃತವಾಗಿ ಆರಂಭಗೊಂಡ ಮಾಂಸದಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವೇ ಅನುಮತಿ ಪಡೆದಿರಬೇಕು ಎಂದು ಬಿಬಿಎಂಪಿ ನೋಟಿಸ್ ನಲ್ಲಿ ತಿಳಿಸಿದೆ.

ಒಂದು ವಾರದ ಅವಧಿಯಲ್ಲಿ ಶುಲ್ಕ ಪಾವತಿಸಿ ಅನುಮತಿ ಪ್ರಮಾಣ ಪತ್ರ ಪಡೆಯಬೇಕು. ಇಲ್ಲದಿದ್ದರೆ ಅಂಗಡಿಗಳನ್ನು ಮುಚ್ಚಬೇಕು ಎಂದು ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರು ನೋಟಿಸ್ ಬಗ್ಗೆ ವಿವರಿಸಿದ್ದಾರೆ.

ಕೋಳಿ ಮಾಂಸ ಮಾರಾಟಕ್ಕೆ 2500 ರೂ. ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು. ಒಂದು ವೇಳೆ ಕುರಿ ಮಾಂಸ ಮತ್ತು ಮೀನು ಮಾರಾಟ ಮಾಡಬೇಕಾದರೆ 10,500 ವಾರ್ಷಿಕ ಶುಲ್ಕ ಪಾವತಿಸಬೇಕು ಎಂಬ ನಿಯಮ ಇದೆ.

ನಾವು ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ. ಶುಲ್ಕ ಪಾವತಿಸಿ ಅನುಮತಿ ಪಡೆಯುತ್ತೇವೆ ಎಂದು ಹಿಂದವೀ ಮಾರ್ಟ್ ಮಾಲೀಕ ಮುನೇಗೌಡ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿ, ಉತ್ತರ ಪ್ರದೇಶ, ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

Tue Apr 19 , 2022
ಬೆಂಗಳೂರು, ಏಪ್ರಿಲ್ 19 : ದೇಶದಲ್ಲಿ ಮತ್ತೆ ಕೊರೊನಾ ನಾಲ್ಕನೇ ಭೀತಿ ಶುರುವಾಗಿದ್ದು, ಈಗಾಗಲೇ ದೆಹಲಿ, ಉತ್ತರ ಪ್ರದೇಶ, ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲೂ ಕೊರೊನಾ ನಾಲ್ಕನೇ ಅಲೆ ಬರಬಹುದು ಎಂಬ ಭೀತಿ ಇರುವುದರಿಂದ ಪೋಷಕರು ಮಕ್ಕಳನ್ನ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಖಾಸಗಿ ಶಾಲೆಗಳಿಗೆ ಭಾರಿ ಹೊಡೆತ ಬಿದ್ದಿದ್ದು, ಮುಂಬರುವ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನ ದಾಖಲಿಸಿಕೊಳ್ಳಲು ಖಾಸಗಿ ಶಾಲೆಗಳು ಹೆಣಗಾಡುತ್ತಿವೆ. ಸಾರ್ವಜನಿಕ ಶಿಕ್ಷಣ […]

Advertisement

Wordpress Social Share Plugin powered by Ultimatelysocial