ನಾನು ಅಧಿಕಾರಕ್ಕೆ ಬಂದರೆ ಬಯಲು ಸೀಮೆಯ ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಪ್ರತಿ ವರ್ಷ ಒಂದು ಸಾವಿರ ಕೋಟಿ ಬಿಡುಗಡೆ.

ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ ಅಂತ ವ್ಯಾಪಕ ಚರ್ಚೆ ಮಾಡ್ತೀವಿ

ಅದಕ್ಕಿಂತ ಹೀನಾಯ ಪರಿಸ್ಥಿತಿಯಲ್ಲಿ ಮಧುಗಿರಿ, ಕೊರಟಗೆರೆ, ಪಾವಗಡ.

ರಾಜಧಾನಿಯಿಂದ ಕೇವಲ 70 ಕಿಮೀ ಅಂತರದಲ್ಲಿವೆ.

ಮೇಲ್ವರ್ಗದ ಜನ ಸುಸ್ಥಿತಿಯಲ್ಲಿದ್ದಾರೆ ಅಂತ ಹೇಳ್ತೀವಿ.

ಆದರೆ ಇಲ್ಲಿ ಎಲ್ಲ ವರ್ಗದ ಜನ ಬಡತನದ ಬೇಗೆಯಲ್ಲಿದ್ದಾರೆ.

ಅಭಿವೃದ್ಧಿಯಲ್ಲಿ ತುಂಬಾ ಕೆಟ್ಟ ಪ್ರದೇಶಗಳು.

ಹೈದರಾಬಾದ್ ಕರ್ನಾಟಕಕ್ಕಿಂತಲೂ ತುಂಬಾ ಹಿಂದುಳಿದಿವೆ.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಲ್ಲಿನ ನಾಲ್ಕೈದು ಗಡಿ ಜಿಲ್ಲೆಗಳ ಪ್ರತಿವರ್ಷ ಒಂದು ಸಾವಿರ ಕೋಟಿ ಅನುಧಾನ ಬಿಡುಗಡೆ.

ಈ ಭಾಗದ ಆರ್ಥಿಕ, ಶೈಕ್ಷಣಿಕ, ಮೂಲಭೂತ ಸೌಲಭ್ಯಗಳ ಅಭಿವೃದ್ದೀಗೆ ಅನುಧಾನ.

ಇದು ರಾಜಕಾರಣಿಗಳು ದುಡ್ಡು ಹೊಡೆಯಲು ಬಿಡುಗಡೆ ಮಾಡಲ್ಲ.

ನೆನ್ನೆ ಪುರವರ ಗ್ರಾಮದ ಗೊಲ್ಲರಹಟ್ಟಿ ವಿದ್ಯಾರ್ಥಿನಿ ಬಸ್ ವ್ಯವಸ್ಥೆ ಇಲ್ಲದೆ ಅಳಲು.

ಕರಡಿಕಾಟದಿಂದ ಆ ಬಾಲಕಿ ಹೇಗೆ ನಡೆದು ಹೋಗಬೇಕು.

ರಿಮೋಟ್‌ ವಿಲೇಜ್‌ಗಳಲ್ಲಿ ನನ್ನ ಕಣ್ತೆರೆಸಿದ್ದಾರೆ.

ಪ್ರವಾಸದ ವೇಳೆ ನನಗೆ ಜ್ಞಾನೋದಯವಾಗಿದೆ.

ಈ ಭಾಗದ ಜನರು ತಿಳುವಳಿಕೆ ಮೂಡಿಸಿದ್ದಾರೆ.

ಹೀಗಾಗಿ ನೆನ್ನೆ ರಾತ್ರಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ.

ನಾನು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಒಂದು ಸಾವಿರ ಕೋಟಿ ಬಿಡುಗಡೆ.

ನಾವು ರಾಜಕಾರಣಿಗಳು ಇದನ್ನ ಕಂಡು ಏನೂ ಮಾಡದಿದ್ದರೆ ಅಸಮರ್ಥರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಥಗ್ಸ್ ಆಫ್ ರಾಮಘಡ' ಮೊದಲ ಸಾಂಗ್ ಬಿಡುಗಡೆ- ಮುಂದಿನ ವರ್ಷ ಸಿನಿಮಾ ತೆರೆಗೆ !

Sun Dec 4 , 2022
ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಾರ್ತಿಕ್ ನಿರ್ದೇಶಿಸಿರುವ ಮೊದಲ ಸಿನಿಮಾ ಇದಾಗಿದ್ದು, ಹಾಡು ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಚಿತ್ರತಂಡ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ […]

Advertisement

Wordpress Social Share Plugin powered by Ultimatelysocial