ಓದಿದ್ದು 8ನೇ ಕ್ಲಾಸ್.. ಮಾಡಿದ್ದು ಮರ್ಡರ್.. ಫೇಮಸ್ ಆಗಿದ್ದು ಚೆಸ್ ಆಟದಲ್ಲಿ..!

ಕಣ್ಮುಚ್ಕೊಂಡೇ ಚೆಸ್ ಗೇಮ್ ಗೆಲ್ತಿದ್ದ ಈ ಅಕ್ಯೂಸ್ಡ್ ಸ್ಟೋರಿ ಕೇಳಿದ್ರೆ ಒಂದು ಮೂವೀನೇ ಮಾಡ್ಬೋದು..!

ಜೈಲಿಗೆ ಬಂದಿದ್ದು, ಚೆಸ್ ಕಲ್ತಿದ್ದು, ಎಸ್ಕೇಪ್ ಆದ್ಮೇಲೂ ಪ್ಲಾನ್ ಹಾಕಿದ್ದು ದೊಡ್ಡ ಬ್ಯುಸಿನೆಸ್ ಗೆ..!

ತ್ರಿಬಲ್ ರೋಲ್ ನಲ್ಲಿ ಲೈಫ್ ಹ್ಯಾಂಡಲ್ ಮಾಡ್ತಿರೋ ಆರೋಪಿಯ ಎಕ್ಸ್ ಕ್ಲೂಸಿವ್ ಸ್ಟೋರಿ ..

ಪೆರೋಲ್ ಕೇಸ್ ನಲ್ಲಿ ಪರಾರಿಯಾಗಿದ್ದ ಆರೋಪಿ ಹದಿನೈದು ವರ್ಷಗಳ ನಂತರ ಸಿಕ್ಕಿಬಿದ್ದ

ಟ್ಯಾಲೆಂಟೆಡ್ ಆರೋಪಿ ಸುಹೇಲ್ ನನ್ನ ಬಂಧಿಸಿ ಕರೆತಂದ ಮಡಿವಾಳ ಪೊಲೀಸರು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಂಥಾ ಲೆವೆಲ್ ಚೆಸ್ ಆಟವಾದ್ರೂ ಗೆದ್ಬಿಡ್ತಿದ್ದ ಚಾಲಾಕಿ

2000ದಲ್ಲಿ ಮಡಿವಾಳ ಲಿಮಿಟ್ಸ್ ನಲ್ಲಿ ಮರ್ಡರ್ ಮಾಡಿ ಡಕಾಯತಿ ಮಾಡಿದ್ದ ಸುಹೇಲ್

ಮಾಜಿ ಯೋಧರೊಬ್ಬರು ಲಾರಿ ಡ್ರೈವರ್ ಆಗಿದ್ದಾಗ ಮರ್ಡರ್ +ಡಕಾಯತಿ

ಈ ಸಂಬಂಧ 396 ಅಡಿ ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದ ಪೊಲೀಸರು

ಜೈಲಿನಲ್ಲೇ ಕೂತು ಮೈಂಡ್ ಗೆ ಕೆಲಸ ಕೊಟ್ಟಿದ್ದ ಆರೋಪಿ..!

ನಾಲ್ಕು ಗೋಡೆಗಳ ಮಧ್ಯೆ ಇದ್ದು ಏಳು ವರ್ಷ ಚೆಸ್ ಆಟದಲ್ಲಿ ನಿಸ್ಸೀಮನಾಗಿದ್ದ

ಜೈಲಿಗೆ ತಳ್ಳಿದ್ದೇ ತಡ ಚೆಸ್ ಆಟದ ಕಲಿಕೆಗೆ ಮುಂದಾಗಿದ್ದ ಸುಹೇಲ್

ಪುಸ್ತಕ ಓದೋದು.. ಒಬ್ಬನೇ ಕೂತು ಚೆಸ್ ಆಡೋದು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎದುರಾಳಿ ಇಲ್ಲದಿದ್ರೂ ಎರಡೂ ಕಡೆ ಆಟ

ಎರಡು ವರ್ಷದಲ್ಲಿ ಚೆಸ್ ಆಟ ಕಲಿತು ಪರ್ಫೆಕ್ಟ್ ಆಗಿದ್ದ ಸುಹೇಲ್

ಈತನ ಒಂಟಿ ಆಟ ನೋಡಿಯೇ ಬೆರಗಾಗಿದ್ದ ಜೈಲರ್

ಈತನ ಟ್ಯಾಲೆಂಟ್‌ ನೋಡಿ ಚೆಸ್ ಟೂರ್ನಿಗಳಿಗೆ ಕಳಿಸೋಕೆ ಶುರು ಮಾಡಿದ್ದ ಜೈಲು ಎಸ್ ಪಿ

ಅಂದಿನಿಂದ ಆಟ ಶುರು ಮಾಡಿದ್ದವ ಹಿಂತಿರುಗಿ ನೋಡೇ ಇಲ್ಲ

ಸತತ ದೊಡ್ಡ ದೊಡ್ಡ ಟೂರ್ನಮೆಂಟ್ ಗಳಲ್ಲಿ ಚೆಸ್ ಆಟ ಗೆದ್ದು ಬರ್ತಿದ್ದ ಸುಹೇಲ್

2007ರವರೆಗೂ ಟೂರ್ನಮೆಂಟ್ ಗೆದ್ದು ತಂದಿದ್ದ

ಅದೇ ನಂಬಿಕೆಯಲ್ಲಿ ಹಿರಿಯ ಅಧಿಕಾರಿಗಳ ಬಳಿ ಪೆರೋಲ್ ಕೇಳಿದ್ದ ಸುಹೇಲ್

ಹೆಣ್ತಿ ಮಕ್ಕಳನ್ನ ನೋಡ್ಬೇಕು ಸಾರ್.. ನೋಡ್ಕೊಂಡು ವಾಪಸ್ ಬರ್ತೀನಿ ಅಂತಾ ಕೇಳಿದ್ದ

ಚೆಸ್ ಆಟದಲ್ಲಿ ಗೆದ್ದು ಬಂದವನಿಗೆ ಫ್ಯಾಮಿಲಿ ನೋಡೋ ಅವಕಾಶ ಕೊಟ್ಟಿದ್ದ ಪೊಲೀಸರು

ಆದ್ರೆ 2007ರಲ್ಲಿ ಫ್ಯಾಮಿಲಿ ನೋಡೋಕೆ ಹೋದೋನು ಮತ್ತೆ ಬರಲೇ ಇಲ್ಲ

ವಾಪಸ್ ಬರ್ತಾನೆ ಅಂತಾ ಅಂದು ಕೂತಿದ್ದ ಪೊಲೀಸರಿಗೆ ಕೈ ಕೊಟ್ಟಿದ್ದ ಆರೋಪಿ

ಸ್ನೇಹಿತನ ಮೂಲಕ ಸತ್ತಿರೋದಾಗಿ ಸೀನ್ ಕ್ರಿಯೇಟ್

ಅನಾಥ ಶವವೊಂದು ತೋರಿಸಿ ತನ್ನದೇ ಸಾವು ಎಂದು ನಂಬಿಸಿದ್ದ ಆರೋಪಿ

ಆತ ಎಸ್ಕೇಪ್ ಆದ ಕೆಲ ತಿಂಗಳುಗಳ ನಂತರ ಹೆಣ್ಣೂರು ಲಿಮಿಟ್ಸ್ ನಲ್ಲಿ ಒಂದು ಶವ ಸಿಕ್ಕಿತ್ತು

ಸುಹೇಲ್ ಗೆ ಹೋಲಿಕೆಯಾಗುವಂತೆಯೇ ಇದ್ದ ಶವ

ಈ ಬಗ್ಗೆ ಸುಹೇಲ್ ಸ್ನೇಹಿತನಿಗೆ ಕೇಳಿದ್ದ ಪೊಲೀಸರು

ಈ ವೇಳೆ ಹೌದು ಇದು ಸುಹೇಲ್ ಎಂದಿದ್ದ ಸ್ನೇಹಿತ

ಅಲ್ಲಿಗೆ ಸುಹೇಲ್ ಸತ್ತೋಗಿರ್ಬೋದು ಎಂದುಕೊಂಡಿದ್ದ ಪೊಲೀಸರು

ಹದಿನೈದು ವರ್ಷಗಳ ಬಳಿಕ ಚಿಕ್ಕಮಗಳೂರಿನ ಉಪ್ಪಿನಂಗಡಿಯಲ್ಲಿ ಪತ್ತೆ

ಇತ್ತೀಚೆಗೆ ಉಪ್ಪಿನಂಗಡಿ ಕಡೆ ಹೋದಾಗ ಪೊಲೀಸರಿಗೆ ಪತ್ತೆ

ಸದ್ಯ ಆರೋಪಿಯನ್ನ ಬಂಧಿಸಿ ಮತ್ತೆ ಜೈಲಿಗಟ್ಟಿರೋ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬೈಕ್ ಅಪಘಾತದಲ್ಲಿ ಬಿಬಿಎಂಪಿ ಹೆಲ್ತ್ ಇನ್ಸ್'ಪೆಕ್ಟರ್ ಸಾವು.

Tue Dec 27 , 2022
ಬೈಕ್ ಅಪಘಾತದಲ್ಲಿ ಬಿಬಿಎಂಪಿ ಹೆಲ್ತ್ ಇನ್ಸ್’ಪೆಕ್ಟರ್ ಸಾವು. ಪ್ರಶಾಂತ್ ನಾಯ್ಕ್, (27) ಮೃತ ಬಿಬಿಎಂಪಿ ಹೆಲ್ತ್ ಇನ್ಸ್’ಪೆಕ್ಟರ್. ತಡರಾತ್ರಿ ಸ್ಯಾಂಕಿಕೆರೆಯ ಟಿ.ಚೌಡಯ್ಯ ರಸ್ತೆಯ ಪುಟ್ ಪಾತ್ ಗೆ ಬೈಕ್ ಡಿಕ್ಕಿ. ಪುಟ್ ಪಾತ್ ಗೆ ಬೈಕ್ ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಗಾಯ. ಜೆಪಿನಗರ ನಿವಾಸಿಯಾಗಿದ್ದ ಮೃತ ಪ್ರಶಾಂತ್ ನಾಯ್ಕ್. ನೆನ್ನೆ ತಡರಾತ್ರಿ ಸದಾಶಿವನಗರದಿಂದ ಜೆಪಿನಗರಕ್ಕೆ ತೆರಳೋ ವೇಳೆ ಅವಘಡ. ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಇತ್ತೀಚಿನ […]

Advertisement

Wordpress Social Share Plugin powered by Ultimatelysocial