ಮಕ್ಕಳ ಹೊಟ್ಟೆನೋವಿಗೆ ಇಲ್ಲಿದೆ ‘ಮದ್ದು’

ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ ತಂದೊಡ್ಡುತ್ತದೆ.ಹೊಟ್ಟೆ ಹಾಳಾಗುವುದರಿಂದ ಮಕ್ಕಳಿಗೆ ಕೆಲವೊಮ್ಮೆ ವಾಂತಿ, ಅತಿಸಾರ ಮತ್ತು ಜ್ವರದಂಥ ಲಕ್ಷಣಗಳು ಕಂಡು ಬಂದಾವು.ಮಗು ವಿನಾಕಾರಣ ವಿಪರೀತ ಅಳುತ್ತಿದ್ದರೆ ಆಗ ಮಗುವಿಗೆ ಸಾಕಷ್ಟು ದ್ರವಗಳನ್ನು ಸೇವಿಸಲು ಕೊಡಿ. ನಿರ್ಜಲೀಕರಣದಿಂದ ದೇಹ ಸೊರಗದಿರಲಿ.ಮಗುವಿಗೆ ಹಸಿವಾಗಿದ್ದರೆ ಅದಕ್ಕೆ ಲಘು ಆಹಾರಗಳನ್ನು ನೀಡಿ. ಒತ್ತಾಯಿಸಿ ಯಾವುದೇ ಆಹಾರ ಕೊಡದಿರಿ. ಶೌಚಾಲಯಕ್ಕೆ ಹೋಗುವಂತೆ ಪ್ರೋತ್ಸಾಹಿಸಿ. ಇದರಿಂದಲೂ ಹೊಟ್ಟೆ ನೋವು ಕಡಿಮೆಯಾಗುವುದುಂಟು.ಮಗುವಿನ ಹೊಟ್ಟೆಯನ್ನು ನಯವಾಗಿ ಮಸಾಜ್ ಮಾಡಿ. ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡಿ. ಇಷ್ಟದ ಕಾರ್ಟೂನ್ ಪ್ಲೇ ಮಾಡಿ.ತೀವ್ರವಾದ ನೋವು, ಜ್ವರ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ಮಲಪರೀಕ್ಷೆ, ಎಕ್ಸ್ ರೇ ಅಥವಾ ಆಲ್ಟ್ರಾಸೌಂಡ್ ಮೂಲಕ ಹೊಟ್ಟೆ ನೋವಿನ ಕಾರಣ ತಿಳಿಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಸೆರೋಟಿ MC ಆವೃತ್ತಿಯು ಟ್ರೈಡೆಂಟ್ನ ರೇಸಿಂಗ್ ಪ್ಯಾಶನ್ಗೆ ಥ್ರೋಬ್ಯಾಕ್ ಆಗಿದೆ;

Sat Feb 5 , 2022
ಎಂಸಿ ಎಡಿಷನ್ ಎಂಬ ಪದವು ಮಾಸೆರಾಟಿ ಕಾರ್ಸ್‌ನ ಸಂಕ್ಷಿಪ್ತ ರೂಪವಾಗಿದೆ, ಇದು ಮೋಟಾರ್‌ಸ್ಪೋರ್ಟ್‌ಗಳೊಂದಿಗಿನ ಅದರ ಶ್ರೀಮಂತ ಸಂಬಂಧದಿಂದಾಗಿ ಮಾಸೆರೋಟಿ ಉತ್ಸಾಹದ ಪರಿಚಿತ ಪದವಾಗಿರಬೇಕು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial