ಸನ್​​​ ಗ್ಲಾಸ್​​ ಧರಿಸುವುದು ಎಷ್ಟು ಮುಖ್ಯ?

ನ್ ಗ್ಲಾಸ್​​​ ಧರಿಸುವುದರಿಂದ ಕಣ್ಣುಗಳು ಆರೋಗ್ಯವಾಗಿರುವುದಲ್ಲದೆ, ಆರಂಭಿಕ ಕಣ್ಣಿನ ಪೊರೆ, ಕಾರ್ನಿಯಲ್ ಹಾನಿ, ಒಣ ಕಣ್ಣುಗಳು, ರೆಟಿನಾದ ಹಾನಿ ಮತ್ತು ಕಣ್ಣಿನ ಸುತ್ತ ಚರ್ಮದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು.ಸನ್​​ಗ್ಲಾಸ್ ​​​​ ಕೇವಲ ಫ್ಯಾಷನ್​​ ಆಗಿ ಮಾತ್ರ ಧರಿಸುವುದಲ್ಲ, ಬದಲಾಗಿ ಬಿಸಿಲಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸನ್​​​ ಗ್ಲಾಸ್ ಧರಿಸುವುದು ಅತ್ಯಂತ ಅಗತ್ಯವಾಗಿದೆ.

ಕೇವಲ ಹೊರಗಡೆ ಬಿಸಿಲಿನಿಂದ ಮಾತ್ರವಲ್ಲದೇ ಧೂಳು ಮಾಲಿನ್ಯಗಳಿಂದ ನಿಮ್ಮ ಕಣ್ಣುಗಳನ್ನುರಕ್ಷಿಸುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಶೈಲಿಗಳ ಸನ್​​​ ಗ್ಲಾಸ್​​ಗಳು ಲಭ್ಯವಿದೆ. ಇದು ನಿಮ್ಮ ಕಣ್ಣುಗಳಿಗೆ ರಕ್ಷಣೆ ನೀಡುವುದು ಮಾತ್ರವಲ್ಲದೇ ನಿಮಗೆ ಟ್ರೆಂಡಿ ಲುಕ್​​ ನೀಡುತ್ತದೆ. ಫರಿದಾಬಾದ್‌ನ ಅಮೃತಾ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರರಾದ ಡಾ ಅಮೃತಾ ಕಪೂರ್ ಅವರ ಪ್ರಕಾರ, ಸನ್‌ಗ್ಲಾಸ್ ಧರಿಸುವುದು ಕಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿದೆ. ವಿಶೇಷವಾಗಿ ತಮ್ಮ ದಿನದ ಹೆಚ್ಚಿನ ಸಮಯವನ್ನು ಹೊರಗಡೆ ಬಿಸಿಲಿನಲ್ಲಿ ಕಳೆಯುವವರಿಗೆ ಎಂದು ಸಲಹೆ ನೀಡುತ್ತಾರೆ.

ಸೂರ್ಯನ ಬೆಳಕಿನಲ್ಲಿರುವ ನೇರಳಾತೀತ ವಿಕಿರಣದ ಹಾನಿಕಾರಕ ವಸ್ತುಗಳಿಂದ ರಕ್ಷಣೆಯನ್ನು ಪಡೆಯಲು ಸಹಾಯಕವಾಗಿದೆ. ವಿಶೇಷವಾಗಿ ಹೆಚ್ಚು ಸಮಯ ಹೊರಗಡೆ ಉಳಿದುಕೊಳ್ಳುವರು, ಕೃಷಿ, ಮೀನುಗಾರಿಕೆ ಮತ್ತು ಕ್ರೀಡಾ ಚಟುವಟಿಕೆಗಳಂತಹ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿರುವವರು ಹೆಚ್ಚಾಗಿ ಕಣ್ಣಿನ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ಹೇಳುತ್ತಾರೆ. ಜೊತೆಗೆ ಸೂರ್ಯನ ಬಿಸಿಲಿಗೆ ಹೆಚ್ಚು ಒಗ್ಗಿಕೊಂಡಷ್ಟು ಕಣ್ಣಿನ ತೇವಾಂಶವನ್ನು ಒಣ ಕಣ್ಣಿಗೆ ಕಾರಣವಾಗಬಹುದು. ಕಾಲಾನಂತರದಲ್ಲಿ, ಕಣ್ಣಿನಲ್ಲಿ ಪೊರೆಗಳು ಉಂಟಾಗಲು ಕಾರಣವಾಗುತ್ತದೆ ಆದರಿಂದ ಪ್ರಾರಂಭದಲ್ಲಿಯೇ ಎಚ್ಚರ ವಹಿಸುವುದು ಅಗತ್ಯ ಎಂದು ಹೇಳುತ್ತಾರೆ.

 ಸೂರ್ಯನ ಕಿರಣಗಳು ನೇರವಾಗಿ ಅಥವಾ ನೀರಿನ ಪ್ರತಿಬಿಂಬದ ಮೂಲಕ ಕಣ್ಣಿಗೆ ಬೀಳುವುದರಿಂದ ಕಣ್ಣಿನ ರೆಟಿನಾದ ಅತ್ಯಂತ ಸೂಕ್ಷ್ಮ ಭಾಗಗಳು ಹಾನಿಗೊಳಗಾಗುತ್ತದೆ. ಇದು ಅನೇಕರ ಜನರ ಕಣ್ಣಿನ ಬಿಳಿಭಾಗಗಳು ಹಳದಿ ಬಣ್ಣಕ್ಕೆ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಲೆನ್ಸ್‌ನಲ್ಲಿ ಯುವಿ ಫಿಲ್ಟರ್ ಹೊಂದಿರುವ ಸನ್‌ಗ್ಲಾಸ್‌ಗಳನ್ನು ಆರಿಸಿಕೊಳ್ಳಬೇಕು ಎಂದು ಹೇಳುತ್ತಾರೆ.
ಸನ್ ಗ್ಲಾಸ್​​​ ಧರಿಸುವುದರಿಂದ ಕಣ್ಣುಗಳು ಆರೋಗ್ಯವಾಗಿರುವುದಲ್ಲದೆ, ಆರಂಭಿಕ ಕಣ್ಣಿನ ಪೊರೆ, ಕಾರ್ನಿಯಲ್ ಹಾನಿ, ಒಣ ಕಣ್ಣುಗಳು, ರೆಟಿನಾದ ಹಾನಿ ಮತ್ತು ಕಣ್ಣಿನ ಸುತ್ತ ಚರ್ಮದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ನೇತ್ರವಿಜ್ಞಾನದ ಹಿರಿಯ ಸಲಹೆಗಾರ ಡಾ ಅರವಿಂದ್ ಕುಮಾರ್ ಹೇಳುತ್ತಾರೆ. ಜೊತೆಗೆ ನೀವು ಸನ್​​ ಗ್ಲಾಸ್​​ಗಳನ್ನು ಆಯ್ಕೆ ಮಾಡುವಾಗ ನಿಮ್ಮ ಕಣ್ಣಿಗಿಂತ ಸ್ವಲ್ಪ ದೊಡ್ಡ ಗಾತ್ರದಲ್ಲಿ ಇರಲಿ. ಯಾಕೆಂದರೆ ಇದು ಕಣ್ಣಿನ ಸುತ್ತಲಿನ ಪ್ರದೇಶವನ್ನು ಕೂಡ ಬಿಸಿಲಿನಿಂದ ರಕ್ಷಿಸುವಲ್ಲಿ ಸಹಾಯಕವಾಗಿದೆ ಎಂದು ತಜ್ಞರು ಹೇಳುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಳಿಯನ ಬಾಯಿಗೆ ಸಿಗರೇಟ್ ಇಟ್ಟು ಸ್ವಾಗತ ಕೋರಿದ ಅತ್ತೆ-ಮಾವ!

Fri Feb 17 , 2023
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಅದನ್ನು ಸಂಪೂರ್ಣವಾಗಿ ಅರ್ಥಹೀನವೆಂದು ಹೇಳುತ್ತಿದ್ದಾರೆ.ಭಾರತವು ಪ್ರಾಚೀನ ಕಾಲದಿಂದಲೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶವಾಗಿದೆ. ಭಾರತದ ವಿವಿಧ ಪ್ರದೇಶಗಳು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ಸಂಪ್ರದಾಯಗಳನ್ನು ಹೊಂದಿವೆ. ವಿವಿಧ ಸಮುದಾಯಗಳು ವಿಶೇಷವಾಗಿ ವಿವಾಹಗಳಿಗೆ ಸಂಬಂಧಿಸಿದ ವಿವಿಧ ಪದ್ಧತಿಗಳನ್ನು ಅನುಸರಿಸುತ್ತವೆ. ಇಲ್ಲಿಯೂ ಅಂತಹ ಒಂದು ವಿಚಿತ್ರ ಸಂಪ್ರದಾಯವನ್ನು ಅನುಸರಿಸಲಾಗಿದೆ. ಅತ್ತೆ-ಮಾವ ತಮ್ಮ ವರನಿಗೆ ಬಾಯಲ್ಲಿ ಸಿಗರೇಟ್  ಇಟ್ಟು, […]

Advertisement

Wordpress Social Share Plugin powered by Ultimatelysocial