ಅಡ್ಡದಾರಿ ಹಿಡಿದ ಚಾಲಕ

ಬೆಳ್ಳಂಬೆಳಗ್ಗೆ ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಚಾಲಕನ ಅಜಾಗರೂಕತೆಯಿಂದಾಗಿ ಭಾರಿ ಗಾತ್ರದ ವಾಹನವೊಂದು ಅಂಡರ್ಪಾಸ್ನಲ್ಲಿ ಸಿಲುಕಿಕೊಂಡಿದೆ.ದೊಡ್ಡ ಗಾತ್ರದ ವಾಹವನ್ನು ಅಂಡರ್ಪಾಸ್ ಮೂಲಕ ಚಲಾಯಿಸಲು ಚಾಲಕ ಪ್ರಯತ್ನಿಸಿರುವುದೇ ಘಟನೆಗೆ ಕಾರಣವಾಗಿದೆ. ಚಾಲಕನ ಅಜಾಗರೂಕತೆಯಿಂದ ಈ ಅವಘಡ ನಡೆದಿದೆ. ಮೆಟ್ರೋ ನಿಲ್ದಾಣದ ಅಂಡರ್ಪಾಸ್ನಲ್ಲಿ ಸಿಲುಕಿದ ಭಾರಿ ಗಾತ್ರದ ವಾಹನ ಬೆಳಗಿನ ಜಾವ 3.30 ರಿಂದ 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಮೆಟ್ರೋ ಅಧಿಕಾರಿಗಳು ವಾಹನವನ್ನು ತೆರವುಳಿಸುತ್ತಿದ್ದಾರೆ. TN-01 AQ-9079 ನಂಬರಿನ ತಮಿಳುನಾಡಿನ ರಿಜಿಸ್ಟ್ರೇಷನ್ ಹೊಂದಿರುವ ವಾಹನ ಇದಾಗಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ವಾಹನ ಯಾವ ಸಂಸ್ಥೆಗೆ ಸೇರಿದ್ದು, ಯಾವ ಉಪಕರಣಗಳನ್ನು ಸಾಗಿಸುತ್ತಿತ್ತು ಎಂಬ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅವಘಡದಿಂದ ಅಕ್ಕಪಕ್ಕದ ಕಟ್ಟಡದಲ್ಲಿರುವವರಿಗೆ ಭೂಮಿ ನಡುಗಿದ ಅನುಭವ ಉಂಟಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ರಸ್ತೆಯಲ್ಲಿ ರಾಗಿ, ಹುರುಳಿ ಒಕ್ಕಣೆ

Please follow and like us:

Leave a Reply

Your email address will not be published. Required fields are marked *

Next Post

ಉಂಡ ಮನೆಗೆ ಕನ್ನ ಹಾಕಿದ ಖದೀಮರು.!

Wed Feb 10 , 2021
ಮನೆ ಮಾಲೀಕ ಮತ್ತು ಕುಟುಂಬಸ್ಥರನ್ನು ಕೂಡಿ ಹಾಕಿ ಮನೆ ದರೋಡೆ ಮಾಡಿದ್ದ 7 ಮನೆ ಕೆಲಸದವರನ್ನು ಕೋರಮಂಗಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮದನ್ ಮೋಹನ್ ರೆಡ್ಡಿ ಎಂಬುವವರ ಮನೆಯಲ್ಲಿ ಕೆಲಸ ಮಾಡಿಕೊಂಡೇ ಚಿನ್ನಕ್ಕಾಗಿ ಸ್ಕೆಚ್ ಹಾಕಿದ್ದ ನೇಪಾಳ ಮೂಲದ ಟಿಕಾ ರಾಮ್, ಪ್ರೇಮ್ ಬಹದ್ದೂರ್, ಧನಾ ಬಿಸ್ಟಾ, ಜನಕ್ ಕುಮಾರ್,ಕಮಲ್ಜಾಜೋ, ಜನಕ್ ಜೈಶಿ, ಸುನೀಲ್ ಬಹದ್ದೂರ್ 60 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ […]

Advertisement

Wordpress Social Share Plugin powered by Ultimatelysocial