ಹುಣಸೂರಲ್ಲಿ ಆನೆ ದಾಳಿಗೆ ಮಹಿಳೆ ಸಾವು

ಹುಣಸೂರು ತಾಲೂಕಿನ ಚಿಕ್ಕಬೀಚನಹಳ್ಳಿಯಲ್ಲಿ ಆನೆ ದಾಳಿಗೆ ಸಿಲುಕಿ ಮಹಿಳೆ ಮೃತಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸಿದ್ದೇಗೌಡ ಎಂಬವರ ಪತ್ನಿ ಚಿಕ್ಕಮ್ಮ (60) ಮೃತಪಟ್ಟ ಮಹಿಳೆ. ಬಿಳಿಕೆರೆ ಗ್ರಾಮದ ರವಿ ಗಂಭೀರ ಗಾಯಗೊಂಡವರು.ಜಮೀನ ಬಳಿ ಹುರುಳಿ ಕಣದಲ್ಲಿ ಚಿಕ್ಕಮ್ಮ ಹಾಗೂ ಪತ್ನಿ ಸಿದ್ದೇಗೌಡ ಕೆಲಸ ಮಾಡುತ್ತಿದ್ದಾಗ ಇಬ್ಬರ ಮೇಲೆ ಆನೆ ದಾಳಿ ಮಾಡಿದೆ.ಸಿದ್ದೇಗೌಡ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ, ಚಿಕ್ಕಮ್ಮ ಅವರಿಗೆ ಅಲ್ಲಿಂದ ತಕ್ಷಣಕ್ಕೆ ಓಡಿಹೋಗಲು ಸಾಧ್ಯವಾಗದೆ ಆನೆ ಕಾಲಿಗೆ ಸಿಕ್ಕು ಮೃತಪಟ್ಟಿದ್ದಾರೆ.ಮೃತ ಕುಟುಂಬಸ್ಥರ ಭೇಟಿ ಮಾಡಿರುವ ಶಾಸಕ ಜಿ.ಟಿ.ದೇವೆಗೌಡ ಸಾಂತ್ವನ ಹೇಳಿದ್ದಾರೆ. ಆನೆ ಸೆರೆ ಹಿಡಿಯುವಂತೆ ಅರಣ್ಯಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಹೇಳಿಕೆ.

Fri Dec 30 , 2022
ಈ ಭಾಗದ ಜನರಿಗೆ ಸಂಘರ್ಷ ಮತ್ತು ಸವಾಲಿನ ಸಮಯ ಎದುರಾಗಿದೆ ಕೃಷ್ಣಾ ನದಿ ವಿಚಾರದಲ್ಲಿ ಬಿಜೆಪಿಯವರು ಜನರಿಗೆ ದ್ರೋಹ ಮಾಡುತ್ತಾ ಬಂದಿದ್ದಾರೆ ಮೂರು ತಿಂಗಳ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಕೃಷ್ಣಾ ಮೂರನೆಯ ಹಂತದ ಕಾಮಗಾರಿಗೆ ಪ್ರತಿ ವರ್ಷ 40ಸಾವಿರ ಕೋಟಿ ರೂಪಾಯಿ ಕೊಡುತ್ತೇವೆ ಇವತ್ತು ರಾಜ್ಯಕ್ಕೆ ಅಮಿತ್ ಷಾ ಬಂದಿದ್ದಾರೆ ಅವರು ಕೃಷ್ಣಾ ಮತ್ತು ಮಹದಾಯಿ ನೀರಿನ ಬಗ್ಗೆ ಮಾತನಾಡಲ್ಲಾ ಯಾಕಂದ್ರೆ ಅವರ ಮನಸ್ಸಲ್ಲಿ ಕಳ್ಳನಿದ್ದಾನೆ ಅಮಿತ್ […]

Advertisement

Wordpress Social Share Plugin powered by Ultimatelysocial