ಆಕಾಶಕ್ಕೇರಿದ ತರಕಾರಿ ದರ: ಕೆ.ಜಿ. ಬದನೆಕಾಯಿ ₹ 200, ಹಸಿ ಮೆಣಸಿನಕಾಯಿಗೆ ₹ 150

ಹುಬ್ಬಳ್ಳಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಮವಾರದ ಸಂತೆಯಲ್ಲಿ ತರಕಾರಿ ಬೆಲೆ ಕಳೆದ ವಾರಕ್ಕಿಂತ ದುಪ್ಪಟ್ಟಾಗಿದೆ. ಬದನೆಕಾಯಿ ಕೆ.ಜಿ.ಗೆ ₹ 200, ಹಸಿ ಮೆಣಸಿನಕಾಯಿ ₹ 150 ಹಾಗೂ ಬೆಂಡೆಕಾಯಿ ಬೆಲೆ ಕೆ.ಜಿ.ಗೆ ₹ 100ಕ್ಕೆ ಏರಿಕೆಯಾಗಿದೆ.

ಕಳೆದ ವಾರ ಒಂದು ಕೆ.ಜಿ ಬದನೆಕಾಯಿ ಹಾಗೂ ಹಸಿ ಮೆಣಸಿನಕಾಯಿ ಬೆಲೆ ಕೆ.ಜಿ.ಗೆ ತಲಾ ₹ 80-₹ 100 ಇತ್ತು. ಬೆಂಡೆಕಾಯಿ ₹ 60-₹ 70 ಇತ್ತು. ಆದರೆ ಈ ವಾರ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ದುಪ್ಪಟ್ಟಾಗಿದ್ದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

‘ಕಾಯಿಪಲ್ಯೆ ಬೆಲೆ ವಿಪರೀತ ಏರಿಕೆಯಿಂದಾಗಿ ಬದುಕು ಸಾಗಿಸುವುದೇ ಕಷ್ಟ ಆಗೈತಿ’ ಎಂದು ಸಂತೆಗೆ ಬಂದಿದ್ದ ಕಬ್ಬಲಗೇರಿ ಹನುಮವ್ವ ಬೇಸರ ವ್ಯಕ್ತಪಡಿಸಿದರು. ‘ರೊಕ್ಕಕ್ಕ ಈಗ ಕಿಮ್ಮತ್ತ ಇಲ್ಲದಂಗ ಆಗೈತಿ’ ಎಂದು ವೃದ್ಧೆ ನೀಲಮ್ಮ ಹೊಸಮನಿ ಅಳಲು ತೋಡಿಕೊಂಡರು.

ಮಾರುಕಟ್ಟೆಗೆ ತರಕಾರಿ ಆವಕದ ಪ್ರಮಾಣ ಕಡಿಮೆಯಾಗುತ್ತಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ಕಲಬುರಗಿಯಲ್ಲಿ ಕೆ.ಜಿ.ಗೆ ₹160 (ಕಲಬುರಗಿ ವರದಿ): ಜಿಲ್ಲೆಯಲ್ಲಿ ಬದನೆಕಾಯಿ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಪ್ರತಿ ಕೆ.ಜಿಗೆ ₹140ರಿಂದ ₹ 160ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ಈ ದರ ₹100 ಇತ್ತು.

ಮದುವೆ ಹಾಗೂ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ. ಆದರೆ, ಬೆಳೆಹಾನಿ ಕಾರಣದಿಂದ ಪೂರೈಕೆ ಕಡಿಮೆಯಾಗಿದ್ದು, ಇದು ಬೆಲೆ ಏರಿಕೆಗೆ ಕಾರಣ ಎಂದು ವರ್ತಕರು ಹೇಳುತ್ತಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ರೈತರಿಗೆ ಪ್ರತಿ ಕೆ.ಜಿಗೆ ₹100 ವರೆಗೆ ದರ ಸಿಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

FOOD CENTER:ಇಲ್ಲಿ "ದೊನ್ನೆ ಬಿರಿಯಾನಿ" ತಿಂದ್ರೆ ರುಚಿ ಮರೆಯೋಕೆ ಸಾಧ್ಯವೆ ಇಲ್ಲ

Tue Dec 28 , 2021
“ದೊನ್ನೆ ಬಿರಿಯಾನಿ” ಬೆಂಗಳೂರು ಮತ್ತು ಸುತ್ತಮುತ್ತಲಿನ ಜನರ ಅತ್ಯಂತ ಜನಪ್ರಿಯ ಬಿರಿಯಾನಿಯಾಗಿದೆ. ಅಂತಹದ್ದೆ ಒಂದು “ದೊನ್ನೆ ಬಿರಿಯಾನಿ ಅಂಗಡಿ ಮನೆ” ಹೊಟೆಲ್ ಇತ್ತಿಚಿಗೆ ಬೆಂಗಳೂರಿನ ಮತ್ತಿಕೇರೆ ರಸ್ತೆಯಲ್ಲಿರುವ ರಾಮಯ್ಯ ಆಸ್ಪತ್ರೆ ಬಸ್ ನಿಲ್ದಾಣ ಬಳಿ ಆರಂಭವಾಗಿದೆ. ಉದಯಗೌಡ ಹಾಗೂ ಅನುಪಲ್ಲವಿ ದಂಪತಿಗಳು ಆರಂಬಿಸಿರುವ “ದೊನ್ನೆ ಬಿರಿಯಾನಿ ಅಂಗಡಿ ಮನೆ” ಬಿರಿಯಾನಿ ಪ್ರಿಯರ ಅಚ್ಚುಮೆಚ್ಚಿನ ಹೊಟೆಲ್ ಆಗಿದೆ. ರುಚಿ ಹಾಗೂ ಶುಚಿತ್ವಕ್ಕೆ ಉದಯ ಗೌಡ ಹಾಗೂ ಅನುಪಲ್ಲವಿ ದಂಪತಿಗಳು ಅಷ್ಟೇ ಮಹತ್ವ ಕೊಡುತ್ತಾರೆ. ಒಮ್ಮೆ ಇಲ್ಲಿ ಬಿರಯಾನಿ ಸವಿದವರು […]

Advertisement

Wordpress Social Share Plugin powered by Ultimatelysocial