ಇಲ್ಲೆಲ್ಲವೂ ಥಂಡಾ ಥಂಡಾ.! ಇದು ಜಗತ್ತಿನ ಅತಿ ಕೋಲ್ಡ್ ಮಾರ್ಕೆಟ್

 

ಬೆಂಗಳೂರಿನ ಜನರು 12-14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಚಳಿ ಚಳಿ ಎಂದು ತತ್ತರಿಸಿ ಹೋಗುತ್ತಾರೆ. ಅಂಥವರು ಒಮ್ಮೆ ಸೈಬೀರಿಯಾದ ಯಾಕುಟ್ಸ್ಕ್ ಮಾರ್ಕೆಟ್ ಪ್ರದೇಶವನ್ನು ನೆನಪಿಸಿಕೊಂಡರೆ ಕೈಕಾಲು ಮರಗಟ್ಟಿ ಹೋಗಬಹುದು. ಏಕೆಂದರೆ ಇಲ್ಲಿನ ತಾಪಮಾನ -55 ಡಿಗ್ರಿ ಸೆಲ್ಸಿಯಸ್..!!!

ಹೌದು..ಅದಕ್ಕೇ ಇದು ಜಗತ್ತಿನ ಅತ್ಯಂತ ಕೋಲ್ಡ್ ಮಾರ್ಕೆಟ್ ಎಂದು ಹೆಸರಾಗಿದೆ. ಇಲ್ಲಿರುವ ಮೀನು, ಮಾಂಸ, ತರಕಾರಿ ಎಲ್ಲವೂ ಥಂಡಿಗೆ ಕಲ್ಲಾಗಿ ಬಿಟ್ಟಿರುತ್ತವೆ. ಇಲ್ಲಿರುವವರು ದಪ್ಪನೆಯ ಶೂ, ಮೈತುಂಬಾ ಬಟ್ಟೆ, ಜರ್ಕಿನ್ ಇಲ್ಲದೆ ಓಡಾಡುವುದು ಕಷ್ಟವೇ ಸರಿ.

ಆದರೂ ಇಲ್ಲಿನ ಜನರು ಮೈಕೊರೆಯವ ಚಳಿ/ಥಂಡಿಯಲ್ಲೂ ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ವರ್ಷದ ಬಹುತೇಕ ಸಮಯ ಇದೇ ರೀತಿ ವಾತಾವರಣ ಇರುತ್ತದೆ. ಇನ್ನೊಂದು ವಿಚಿತ್ರ ಎಂದರೆ ಈ ಸ್ಥಳದಲ್ಲಿ, ಬೇಸಿಗೆಯಲ್ಲಿನ ಉಷ್ಣಾಂಶವೇ -40 ಡಿಗ್ರಿ ಸೆಲ್ಸಿಯಸ್ ಅಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ 100 ಕ್ಕೂ ಹೆಚ್ಚು ಆಹಾರ ಪ್ಲಾಜಾಗಳು ಮತ್ತು ಬಹು-ತಿನಿಸು ರೆಸ್ಟೋರೆಂಟ್‌ಗಳನ್ನು ತೆರೆಯಲಿದೆ

Sun Mar 13 , 2022
ರೈಲ್ವೇ ಮಂಡಳಿ ಹೊರಡಿಸಿದ ಆದೇಶದ ಪ್ರಕಾರ, ರೈಲ್ವೇ ಈಗ ನಿಲ್ದಾಣಗಳಲ್ಲಿ ಫುಡ್ ಪ್ಲಾಜಾ, ಫಾಸ್ಟ್ ಫುಡ್ ಘಟಕಗಳು ಮತ್ತು ಮಲ್ಟಿ-ಕ್ಯುಸಿನ್ ರೆಸ್ಟೋರೆಂಟ್‌ಗಳನ್ನು ತೆರೆಯುತ್ತದೆ, ಶುಲ್ಕರಹಿತ ಆದಾಯವನ್ನು ಗಳಿಸುವ ಪ್ರಯತ್ನದಲ್ಲಿ ಅದರ ಅಡುಗೆ ಸಂಸ್ಥೆ IRCTC ಯಿಂದ ಸ್ವಾಧೀನಪಡಿಸಿಕೊಳ್ಳುತ್ತದೆ. ಭಾರತೀಯ ರೈಲ್ವೇ ಪ್ರವಾಸೋದ್ಯಮ ಮತ್ತು ಅಡುಗೆ ನಿಗಮ (IRCTC), ಬೋರ್ಡ್ ರೈಲುಗಳಲ್ಲಿ ಮತ್ತು ಅದರ ಸ್ಥಿರ ಘಟಕಗಳಲ್ಲಿ ಆಹಾರವನ್ನು ಪೂರೈಸುವ ಜವಾಬ್ದಾರಿಯನ್ನು ಹೊಂದಿದೆ, ಪ್ರಾಥಮಿಕವಾಗಿ ರೈಲ್ವೇಯೇತರ ಕೆಲಸಗಳನ್ನು ರೈಲ್ವೇಯಿಂದ ಪ್ರತ್ಯೇಕಿಸಲು ಸ್ಥಾಪಿಸಲಾಗಿದೆ, […]

Advertisement

Wordpress Social Share Plugin powered by Ultimatelysocial