ಬಾಹುಬಲಿ ನೋಡಬೇಕೆಂದು ಆಸೆಪಟ್ಟ ಇಳಯರಾಜಾ!

ಕ್ಷಿಣ ಭಾರತದ ಮಹಾನ್ ಸಂಗೀತ ನಿರ್ದೇಶಕ ಇಳಯರಾಜಾ  ಅವರು ಹಾರ್ಮೋನಿಯಂ ಮೇಲೆ ಕೈ ಇಟ್ಟರೆ ಸಾಕು. ಅವರು ಸಂಯೋಜನೆ ಮಾಡಿರೋ ಹಾಡುಗಳು (Super Hit Songs) ಸೂಪರ್ ಹಿಟ್ ಅನ್ನುವ ನಂಬಿಕೆ ಇವೆ. ಇದು ಉತ್ಪ್ರೇಕ್ಷೆ ಅಲ್ವೇ ಅಲ್ಲ.

ಇಳಯರಾಜಾ ಅವರ ಸಂಗೀತದಲ್ಲಿ ಅಂತಹ ಶಕ್ತಿ ಇದ್ದೇ ಇದೆ. ಇಳಯರಾಜಾ ಸಂಗೀತ ಮಾಡಿರೋ ಹಾಡುಗಳು (Ilayaraja Songs in Bollywood) ಬಾಲಿವುಡ್​ ನಲ್ಲೂ ಪಾಪ್ಯೂಲರ್ ಆಗಿವೆ. ಇಳಯರಾಜಾ ಅವರ ಸಂಗೀತದ ಸೆಳೆತದಲ್ಲಿ ಎಲ್ಲರೂ ಸಿಲುಕಿದವ್ರೇ, ತಮಿಳು ಭಾಷೆಯ ಹಾಡುಗಳೂ ಆಗಿರಬಹುದು, ಕನ್ನಡ ಚಿತ್ರಗಳ ಸಂಗೀತವೂ (Ilayaraja Kannada Hit Songs) ಅಷ್ಟೇ ವಿಶೇಷವಾಗಿಯೇ ಇವೆ. ಈಗಲೂ ಕೇಳುಗರಿಗೆ ಅದೇ ತಾಜಾತನದ ಭಾವ ಮೂಡಿಸುತ್ತವೆ.

ಮಹಾನ್ ಸಂಗೀತ ನಿರ್ದೇಶಕನಿಗೆ ಬಾಹುಬಲಿ ನೋಡೊ ಮಹದಾಸೆ!
ಇಳಯರಾಜಾ ಆ ದಿನಗಳಲ್ಲಿ ತಮ್ಮ ಸ್ವಂತ ಕಾರ್​​ನಲ್ಲಿಯೇ ಓಡಾಡುತ್ತಿದ್ದರು. ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿದ್ದರು. ರಾಗ ಸಂಯೋಜನೆ ಅಂತ ಏನಾದ್ರೂ ಇದ್ದರೂ ತಾಜ್​ ಹೋಟೆಲ್​​ನಲ್ಲಿ ರೂಮ್ ಮಾಡಿಕೊಂಡು ಉಳಿದುಕೊಳ್ಳುತ್ತಿದ್ದರು.

ಕ್ಷಿಣ ಭಾರತದ ಮಹಾನ್ ಸಂಗೀತ ನಿರ್ದೇಶಕ ಇಳಯರಾಜಾ  ಅವರು ಹಾರ್ಮೋನಿಯಂ ಮೇಲೆ ಕೈ ಇಟ್ಟರೆ ಸಾಕು. ಅವರು ಸಂಯೋಜನೆ ಮಾಡಿರೋ ಹಾಡುಗಳು ಸೂಪರ್ ಹಿಟ್ ಅನ್ನುವ ನಂಬಿಕೆ ಇವೆ. ಇದು ಉತ್ಪ್ರೇಕ್ಷೆ ಅಲ್ವೇ ಅಲ್ಲ.

ಇಳಯರಾಜಾ ಅವರ ಸಂಗೀತದಲ್ಲಿ ಅಂತಹ ಶಕ್ತಿ ಇದ್ದೇ ಇದೆ. ಇಳಯರಾಜಾ ಸಂಗೀತ ಮಾಡಿರೋ ಹಾಡುಗಳು (Ilayaraja Songs in Bollywood) ಬಾಲಿವುಡ್​ ನಲ್ಲೂ ಪಾಪ್ಯೂಲರ್ ಆಗಿವೆ. ಇಳಯರಾಜಾ ಅವರ ಸಂಗೀತದ ಸೆಳೆತದಲ್ಲಿ ಎಲ್ಲರೂ ಸಿಲುಕಿದವ್ರೇ, ತಮಿಳು ಭಾಷೆಯ ಹಾಡುಗಳೂ ಆಗಿರಬಹುದು, ಕನ್ನಡ ಚಿತ್ರಗಳ ಸಂಗೀತವೂ (Ilayaraja Kannada Hit Songs) ಅಷ್ಟೇ ವಿಶೇಷವಾಗಿಯೇ ಇವೆ. ಈಗಲೂ ಕೇಳುಗರಿಗೆ ಅದೇ ತಾಜಾತನದ ಭಾವ ಮೂಡಿಸುತ್ತವೆ.

ಮಹಾನ್ ಸಂಗೀತ ನಿರ್ದೇಶಕನಿಗೆ ಬಾಹುಬಲಿ ನೋಡೊ ಮಹದಾಸೆ!
ಇಳಯರಾಜಾ ಆ ದಿನಗಳಲ್ಲಿ ತಮ್ಮ ಸ್ವಂತ ಕಾರ್​​ನಲ್ಲಿಯೇ ಓಡಾಡುತ್ತಿದ್ದರು. ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿದ್ದರು. ರಾಗ ಸಂಯೋಜನೆ ಅಂತ ಏನಾದ್ರೂ ಇದ್ದರೂ ತಾಜ್​ ಹೋಟೆಲ್​​ನಲ್ಲಿ ರೂಮ್ ಮಾಡಿಕೊಂಡು ಉಳಿದುಕೊಳ್ಳುತ್ತಿದ್ದರು.ಅದೇ ದಿನಗಳಲ್ಲಿಯೇ ಒಂದು ದಿನ ಬೆಂಗಳೂರಿಗೆ ಬಂದಿದ್ದ ಇಳಯರಾಜಾ ಅವರಿಗೆ ಅದ್ಯಾಕೋ ಏನೋ, ಬಾಹುಬಲಿಯನ್ನ ನೋಡಬೇಕು ಅನಿಸಿತ್ತು. ಅದನ್ನ ಸಾಹಿತಿ ದೊಡ್ಡರಂಗೇಗೌಡರಿಗೂ ತಿಳಿಸಿದರು.

ನಾನು ಬಾಹುಬಲಿಯನ್ನ ಕಣ್ತುಂಬಿಕೊಳ್ಳಬೇಕು ಎಂದ ಇಳಯರಾಜಾ
ನೀವು ನನ್ನನ್ನ ಬಾಹುಬಲಿ ಕಡೆಗೆ ಕರೆದುಕೊಂಡು ಹೋಗುತ್ತೀರಾ ಅಂತಲೇ ಕೇಳಿದರು. ಆಗ ದೊಡ್ಡರಂಗೇಗೌಡರು ಅದಕ್ಕೆ ಸಂಬಂಧಿಸಿದಂತೆ ಏನು ಬೇಕೋ ಅದನ್ನೆಲ್ಲ ವ್ಯವಸ್ಥೆ ಮಾಡಿದರು.ಬೆಂಗಳೂರಿನಿಂದ ಶ್ರವಣಬೆಳಗೊಳದ ಕಡೆಗೆ ಇಳಯರಾಜಾ ಅವರ ಕಾರು ಹೊರಟಿತು. ಇಳಯರಾಜಾ ಅವರ ಜೊತೆಗೆ ಸಾಹಿತಿ ದೊಡ್ಡರಂಗೇಗೌಡರು ಕೂಡ ಹೊರಟರು.

ಶ್ರವಣಬೆಳಗೊಳದಲ್ಲಿ ಇಳಯರಾಜಾ ಅವರಿಗೆ ಭವ್ಯ ಸ್ವಾಗತ
ಹಾಗೆ ಶ್ರವಣಬೆಳಗೊಳಕ್ಕೆ ತಲುಪಿದರು. ಅಲ್ಲಿ ಸಂಗೀತದ ರಾಜನಿಗೆ ಭವ್ಯ ಸ್ವಾಗತ ಸಿಕ್ಕಿತು. ಆ ಕೂಡಲೇ ಅಲ್ಲಿ ಸನ್ಮಾನದ ವ್ಯವಸ್ಥೆ ಕೂಡ ಆಗಿತ್ತು. ಆದರೆ ಇಳಯರಾಜಾ ಅವರು ಸನ್ಮಾನ ಸ್ವೀಕರಿಸೋ ಮೂಡ್​​​ನಲ್ಲಿ ಇರಲೇ ಇಲ್ಲ.

ಅವರು ಬಾಹುಬಲಿಯನ್ನ ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದರು. ಅದಕ್ಕೆ ಕಾರಣ ಏನು ಅನ್ನೋದು ತಿಳಿಯಲಿಲ್ಲ ಬಿಡಿ. ಆದರೆ ಬಾಹುಬಲಿಯನ್ನ ತದೇಕ ಚಿತ್ತದಿಂದ ಇಳಯರಾಜಾ ಅವರು ನೋಡ್ತಾನೇ ಇದ್ದರು.

ಭವ್ಯ ಬಾಹುಬಲಿಯನ್ನ ಕಣ್ತುಂಬಿಕೊಂಡರು ಇಳಯರಾಜಾ
ಭವ್ಯ ಬಾಹುಬಲಿಯನ್ನ ಕಂಡು ಪುಳಕಿತರಾದರು. ಅದೆಷ್ಟು ಹೊತ್ತು ಬಾಹುಬಲಿಯನ್ನ ನೋಡಿದ್ರು ಅಂದ್ರೆ, ಮನದಲ್ಲಿ ಆ ಬಾಹುಬಲಿಯನ್ನ ತುಂಬಿಕೊಂಡ್ರು. ಎಲ್ಲವೂ ಮುಗಿದ ಮೇಲೆ ಒಂದಷ್ಟು ಫೋಟೋಗಳನ್ನ ತೆಗೆದರು.

ಹಾಗೆ ಬಾಹುಬಲಿಯನ್ನ ನೋಡಿದ ಇಳಯರಾಜಾ ಅವರು, ಶ್ರವಣಬೆಳಗೊಳದಲ್ಲಿ ಸನ್ಮಾನಿಸಲ್ಪಟ್ಟರು. ಇಳಯರಾಜಾ ಅವರ ಜೊತೆಗೆ ದೊಡ್ಡರಂಗೇಗೌಡರಿಗೂ ಇಲ್ಲಿ ಸನ್ಮಾನಿಸಲಾಯಿತು.
ಶ್ರವಣಬೆಳಗೊಳದ ಬಾಹುಬಲಿ ಕಂಡು ಪುಳಕಗೊಂಡ ರಾಜಾ!ಶ್ರವಣಬೆಳಗೊಳದಲ್ಲಿ ಬಾಹುಬಲಿಯನ್ನ ನೋಡಿ ಬಂದ ಇಳಯರಾಜಾ ಅವರು, ಬೆಂಗಳೂರು ತಲುಪುವವರೆಗೂ ಕಾರಿನಲ್ಲಿ ಅದೇ ವಿಷಯದ ಬಗ್ಗೆ ಮಾತನಾಡಿದರು.

ದೊಡ್ಡರಂಗೇಗೌಡರು ತಮ್ಮ ಮತ್ತು ಇಳಯರಾಜಾ ಅವರ ಒಡನಾಟದ ಬಗ್ಗೆ ಮಾತನಾಡೋವಾಗ ಈ ಒಂದು ವಿಷಯವನ್ನ ಆಗಾಗ ನೆನಪಿಸಿಕೊಳ್ತಾರೆ. ಅದೇ ರೀತಿ ಇಳಯರಾಜಾ ಅವರು ಒಬ್ಬ ಒಳ್ಳೆ ಫೋಟೋಗ್ರಾಫರ್ ಅನ್ನೋದನ್ನ ಕೂಡ ದೊಡ್ಡರಂಗೇಗೌಡರು ಹೇಳುತ್ತಾರೆ.ದೊಡ್ಡರಂಗೇಗೌಡರು-ಇಳಯರಾಜಾ ಒಡನಾಟ
ದೊಡ್ಡರಂಗೇಗೌಡರು ಮತ್ತು ಇಳಯರಾಜಾ ಅವರ ಒಟ್ಟಿಗೆ ಅನೇಕ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಇಳಯರಾಜಾ ಅವರ ಸಂಗೀತಕ್ಕೆ ದೊಡ್ಡರಂಗೇಗೌಡರು ಸಾಕಷ್ಟು ಗೀತರಚನೆ ಮಾಡಿಕೊಟ್ಟಿದ್ದಾರೆಹಾಗೆ ದೊಡ್ಡರಂಗೇಗೌಡರು ಒಂದು ಪುಸ್ತಕವನ್ನ ಇಳಯರಾಜಾ ಅವರಿಗೆ ಡೆಡಿಕೇಟ್ ಮಾಡಿರೋದು ಇದೆ. ಹಾಗೆ ತಮ್ಮ ಗೀತ ರಚನೆಯ ಜೀವನದಲ್ಲಿ ಇಳಯರಾಜಾ ಅವರು ಅದೆಷ್ಟು ಮಹತ್ವದ ವ್ಯಕ್ತಿ ಆಗಿದ್ದಾರೆ ಅನ್ನೋದನ್ನ ಕೂಡ ದೊಡ್ಡರಂಗೇಗೌಡರು ಹೇಳಿಕೊಳ್ತಾರೆ. ಹಾಗೇನೆ ತಮ್ಮ ಮತ್ತು ಇಳಯರಾಜಾ ಅವರ ಒಡನಾಟದ ಕಥೆಗಳನ್ನು ನೆನಪಿಸಿಕೊಳ್ತಾರೆ.

 

 

 

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ ಸ್ಟೇಷನ್, ಕೃಷಿ ಇಲಾಖೆಗೆ ಸೇರಿ ಎಲ್ಲಿಗೆ ಹೋದರೂ ಲಂಚ ಕೇಳುತ್ತಾರೆ.

Wed Mar 1 , 2023
ಗದಗ: ಪೊಲೀಸ್ ಸ್ಟೇಷನ್, ಕೃಷಿ ಇಲಾಖೆಗೆ ಸೇರಿ ಎಲ್ಲಿಗೆ ಹೋದರೂ ಲಂಚ ಕೇಳುತ್ತಾರೆ. ಒಟ್ಟಾರೆ ಈ ಸರ್ಕಾರ ಲಂಚ ಲಂಚ ಅಂತಿದೆ. ಹೋಟೆಲ್ ಮೆನುವಿನಲ್ಲಿ ಇದ್ದಂತೆ ಇವರು ಲಂಚ ಕೇಳುತ್ತಾರೆ. ವಿಧಾನಸೌಧದೊಳಗೆ ಎಲ್ಲ ಮಂತ್ರಿಗಳು ಲಂಚದ ಬೋರ್ಡ್ ಹಾಕಿಕೊಂಡಿದ್ದು, ಗೋಡೆಗಳಿಗೆ ಕಿವಿಕೊಟ್ಟರೆ ಅವು ಕೂಡ ಲಂಚ ಲಂಚ ಎಂದು ಪಿಸುಗುಡುತ್ತಿವೆ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸರ್ಕಾರ ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ […]

Advertisement

Wordpress Social Share Plugin powered by Ultimatelysocial