ಇಮ್ರಾನ್​ ಖಾನ್ ಸೋತರೆ ಏನಾಗಬಹುದು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪಾಕ್​ ಸಚಿವ​!

 

ಇಸ್ಲಮಾಬಾದ್​: ಇಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆಯುತ್ತಿರುವ ಅವಿಶ್ವಾಸ ನಿರ್ಣಯದಲ್ಲಿ ಸೋತರೆ ಪ್ರಧಾನಿ ಇಮ್ರಾನ್​ ಖಾನ್​ ಅಧಿಕಾರದಿಂದ ಕೆಳಗೆ ಇಳಿಯಲಿದ್ದು, ಬಂಧನವಾಗುವ ಸಾಧ್ಯತೆ ಇದೆ ಎಂದು ಪಾಕ್​ ಆಂತರಿಕ ಸಚಿವ ಶೇಖ್​ ರಶೀದ್​ ಅಹ್ಮದ್​ ಭಾನುವಾರ ತಿಳಿಸಿದ್ದಾರೆ.

ಇಂಡಿಯಾ ಟುಡೆ ಜತೆ ಮಾತನಾಡಿರುವ ಸಚಿವ ಶೇಖ್​ ರಶೀದ್ ಅಹ್ಮದ್​, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನೇತೃತ್ವದ ಆಡಳಿತಾರೂಢ ಒಕ್ಕೂಟದ 155 ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಮುನ್ನ ಸಾಮೂಹಿಕ ರಾಜೀನಾಮೆ ನೀಡಬಹುದು ಎಂದಿದ್ದಾರೆ. ವಿಶ್ವಾಸ ಮತಯಾಚನೆಯಲ್ಲಿ ಇಮ್ರಾನ್ ಖಾನ್ ಸೋತರೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವುದರ ಹಿಂದೆ ವಿದೇಶಿ ಪಿತೂರಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಂತರಿಕ ಸಚಿವರು, ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಪ್ರಸ್ತುತ ಎದುರಾಗಿರುವ ಎಲ್ಲ ಗೊಂದಲಗಳಿಂದ ಹೊರಬರುವ ಏಕೈಕ ಪರಿಹಾರವೆಂದರೆ ಅವಧಿಪೂರ್ವ ಚುನಾವಣೆಗಳನ್ನು ನಡೆಸುವುದು ಎಂದರು.

ಇಮ್ರಾನ್​ ಖಾನ್​ ಸರ್ಕಾರ ಮುಂದುವರಿಯಬೇಕೇ? ಅಥವಾ ಬೇಡವೇ? ಎಂಬುದು ಇಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಧಾರವಾಗಲಿದೆ. ಪಾಕಿಸ್ತಾನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಲು ಪ್ರತಿಪಕ್ಷಕ್ಕೆ 172 ಮತಗಳ ಅಗತ್ಯವಿದೆ. ಹಾಗೇ ಪ್ರತಿಪಕ್ಷದ ಪ್ಲಾನ್​ ಅನ್ನು ತಲೆಕೆಳಗಾಗಿಸಲು ಇಮ್ರಾನ್​ಗೂ 172 ಮತಗಳ ಅವಶ್ಯಕತೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಪ್ರಿಲ್ ತಿಂಗಳಲ್ಲೇ ನಡೆಯಲಿದೆ ರಣಬೀರ್ ಕಪೂರ್- ಆಲಿಯಾ ಭಟ್ ವಿವಾಹ!

Sun Apr 3 , 2022
ಬಾಲಿವುಡ್ ನ ಬಹು ನಿರೀಕ್ಷಿತ ಮದುವೆಯೊಂದು ಶೀಘ್ರದಲ್ಲೇ ನಡೆಯಲಿದೆ. ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಪತಿ-ಪತ್ನಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ. ಒಂದು ಮೂಲದ ಪ್ರಕಾರ, ರಣಬೀರ್ ಮತ್ತು ಆಲಿಯಾ ಏಪ್ರಿಲ್ ತಿಂಗಳಲ್ಲೇ ವಿವಾಹವಾಗಲಿದ್ದಾರೆ. ಖಾಸಗಿ ವಿವಾಹ ಸಮಾರಂಭದಲ್ಲಿ ಕೆಲವು ಅತಿಥಿಗಳು ಹಾಗೂ ನಿಕಟ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿ ತಿಳಿಸಿದೆ. ಈ ಹಿಂದೆ, ರಣಬೀರ್ ಮತ್ತು ಆಲಿಯಾ ಮದುವೆಯ […]

Advertisement

Wordpress Social Share Plugin powered by Ultimatelysocial