ಶಿವಣ್ಣನ ಹೊಸ ಸಿನಿಮಾ ಘೋಷಣೆ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಂದು ಹೊಸ ಚಿತ್ರವನ್ನ ಘೋಷಣೆ ಮಾಡಿದ್ದಾರೆ.

ವೇದ ಸಿನಿಮಾದ ನಂತರ ತಮ್ಮದೇ ಗೀತಾ ಪಿಚ್ಚರ್ಸ್​ ನಿರ್ಮಾಣ ಸಂಸ್ಥೆಯಲ್ಲಿ ಎರಡನೇ ಚಿತ್ರ ಶುರು ಮಾಡ್ತಿದ್ದು, ಶಿವರಾತ್ರಿ ಹಬ್ಬದ ವಿಶೇಷವಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಚಿತ್ರಕ್ಕೆ ಬೈರತಿ ರಣಗಲ್​ ಎಂದು ಹೆಸರಿಟ್ಟಿದ್ದು, ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ನಿರ್ದೇಶಿಸುತ್ತಿದ್ದಾರೆ. ಇದು ಶಿವಣ್ಣನ 126ನೇ ಸಿನಿಮಾ.

ಪ್ರಾಜೆಕ್ಟ್​ಕೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್

ಟಾಲಿವುಡ್ ನಟ ಪ್ರಭಾಸ್​ ಅಭಿನಯದ ಪ್ರಾಜೆಕ್ಟ್​ಕೆ ಸಿನಿಮಾದ ರಿಲೀಸ್ ದಿನಾಂಕ ಘೋಷಣೆಯಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಪಿಕ್ಷನ್ ಸಿನಿಮಾ 2024ರ ಜನವರಿ 12ನೇ ತಾರೀಖು ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಪ್ರಭಾಸ್​ ಜೊತೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಕೂಡ ಆಯಕ್ಟ್ ಮಾಡ್ತಿದ್ದಾರೆ.

ಮೊನ್ನೆ ಅನೌನ್ಸ್.. ಈಗ ಕ್ಯಾನ್ಸಲ್

ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಮತ್ತು ಗೀತಾ ಗೋವಿಂದಂ ನಿರ್ದೇಶಕ ಪರುಶರಾಮ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. ಆದ್ರೀಗ, ಈ ಚಿತ್ರದಿಂದ ಪರುಶರಾಮ್ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ದಿಲ್ ರಾಜು ಮತ್ತು ಅಲ್ಲು ಅರವಿಂದ್ ನಡುವೆ ಮನಸ್ಥಾಪ ಉಂಟಾಗಿದ್ದು, ಇದ್ರಿಂದ ಬೇಸತ್ತ ನಿರ್ದೇಶಕ ಈ ಚಿತ್ರ ನಾನು ಮಾಡಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ.

‘ವೀರಂ’ ಚಿತ್ರದಲ್ಲಿ ಶಿವನ ಹಾಡು

ಮಹಾ ಶಿವರಾತ್ರಿ ಹಬ್ಬದ ವಿಶೇಷವಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ವೀರಂ ಚಿತ್ರದ ಸಾಂಗ್ ಟೀಸರ್​ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದು, ಮಹಾದೇವನ ಹಾಡನ್ನ ಬಳಸಿಕೊಂಡು ಹೊಸ ರೂಪ ಕೊಟ್ಟಿದ್ದಾರೆ. ಕುಮಾರ್ ರಾಜ್ ನಿರ್ದೇಶನದ ವೀರಂ ಸಿನಿಮಾದಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

RRRಗೆ ಆ ಚಿತ್ರವೇ ಸ್ಫೂರ್ತಿ ಎಂದ ರಾಜಮೌಳಿ

ಎಸ್​ ಎಸ್​ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್​ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ಸಸ್ ಆಗಿದ್ದು, ಆಸ್ಕರ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇಂಥಾ ಬ್ಲಾಕ್ ಬಸ್ಟರ್ ಸಿನಿಮಾ ಮಾಡೋಕೆ ಆ ಎರಡು ಚಿತ್ರಗಳು ನನಗೆ ಸ್ಫೂರ್ತಿ ಅಂತ ನಿರ್ದೇಶಕ ರಾಜಮೌಳಿ ಹೇಳಿಕೊಂಡಿದ್ದಾರೆ.1957ರಲ್ಲಿ ಬಂದಿರೋ ಮಾಯಾಬಜಾರ್ ಚಿತ್ರದ ಸ್ಫೂರ್ತಿಯಿಂದ ತ್ರಿಬಲ್ ಆರ್ ಆಯ್ತು ಎಂದರು. ಇನ್ನು ಹಾಲಿವುಡ್​ ನಿರ್ದೇಶಕ ಮಿಲ್​ ಗಿಬ್ಬನ್​ ಅವರ ಸಿನಿಮಾಗಳ ಸ್ಫೂರ್ತಿಯಿಂದ ಕೊಮ್ಮರಮ್ ಭೀಮ್​ನ ಕ್ಯಾರೆಕ್ಟರ್ ಡಿಸೈನ್ ಮಾಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮತ್ತೆ ಸುದ್ದಿಯಲ್ಲಿದ್ದಾರೆ.

Sun Feb 19 , 2023
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಹನ್ಸಿಕಾ ಮೋಟ್ವಾನಿ ಕಳೆದ ಡಿಸೆಂಬರ್​​ನಲ್ಲಿ ಸಪ್ತಪದಿ ತುಳಿದಿದ್ದರು. ಈ ಮದುವೆಯ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್ ಎಬ್ಬಿಸಿತ್ತು. ಆದರೆ ಈ ಮಧ್ಯೆ ಮತ್ತೊಂದು ವಿಚಾರ ಸುದ್ದಿಯಲ್ಲಿದೆ. ಏನೆಂದರೆ ನಟಿ ಹನ್ಸಿಕಾ ಯುವತಿಯಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಚಿಕ್ಕ ವಯಸ್ಸಿನಲ್ಲಿ ನಾಯಕಿಯಾಗಿ ನಟನೆ ಮಾಡಿ ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದರು. ಆದರೆ ಹನ್ಸಿಕಾ ವೇಗವಾಗಿ ಬೆಳೆಯಲು […]

Advertisement

Wordpress Social Share Plugin powered by Ultimatelysocial