ಮಾಲೂರು, ಬಿಜೆಪಿ ಪಕ್ಷದಲ್ಲಿ ಕಳ್ಳರಿಗೆ ಕಾಕರಿಗೆ ರೌಡಿಗಳಿಗೆ ಟಿಕೆಟ್ ನೀಡಿದ್ದಾರೆ..!

ಮಾಲೂರು, ಬಿಜೆಪಿ ಪಕ್ಷದಲ್ಲಿ ಕಳ್ಳರಿಗೆ ಕಾಕರಿಗೆ ರೌಡಿಗಳಿಗೆ ಟಿಕೆಟ್ ನೀಡಿದ್ದಾರೆ ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಗೆಲ್ಲಲ್ಲ ನಾಲ್ಕನೇ ಸ್ಥಾನಕ್ಕೆ ಹೋಗ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ಜಿ ಇ ರಾಮೇಗೌಡ ಸಂಸದ ಎಸ್ ಮುನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು, ಮಾಲೂರು ಪಟ್ಟಣದ ರಾಜೀವ್ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ ರಾಮೇಗೌಡರು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ.

ನರೇಂದ್ರ ಮೋದಿಯವರು, ಯಡಿಯೂರಪ್ಪನವರು ಮುನಿಸ್ವಾಮಿಯವರು ಬಂದ್ರು ಈ ಭಾರಿ ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡರು ಗೆಲ್ಲುವುದಿಲ್ಲ ಅವರು ನಾಲ್ಕನೇ ಸ್ಥಾನ ಪಡೆದುಕೊಳ್ಳತ್ತಾರೆ,
ಬಿ ಫಾರಂ ಹರಿದು ಹಾಕಿದ ಕೃಷ್ಣಯ ಶೆಟ್ಟರು ನ್ಯಾಷಿನಲ್ ಪಾರ್ಟಿ ಬೆಂಬಲ ಪಡೆದುಕೊಂಡ್ರು, ಬಿಜೆಪಿ ಪಕ್ಷಕ್ಕೆ ಯಾವುದೇ ಮಾನ ಮರ್ಯಾದೆ ಇಲ್ಲದೇ ಕಳ್ಳರಿಗೆ ಕಾಕರಿಗೆ ರೌಡಿಗಳಿಗೆ ಟಿಕೆಟ್ ನೀಡಿದ್ದಾರೆ, ಮಂಜುನಾಥ್ ಗೌಡರು ನಾಲ್ಕು ವರ್ಷ ಎಲ್ಲಿಗೆ ಹೋಗಿದ್ರು ರಾಜಕಾರಣಿಗಳಿಗೆ ರಜೆ ಕೊಡ್ತರ ಎಂದು ಮಂಜುನಾಥ್ ಗೌಡ ವಿರುದ್ಧ ಲೇವಡಿ ಮಾಡಿದರು,

ಐದು ವರ್ಷಗಳ ಶಾಸಕರಾಗಿ ಅಧಿಕಾರ ಅನುಭವಿಸಿದ ಮಂಜುನಾಥ್ ಗೌಡರಿಗೆ ಕನಿಕರ ಇಲ್ಲದೇ ಕೋವಿಡ್ ಸಂದರ್ಭದಲ್ಲಿ ರಜೇ ತೆಗೆದುಕೊಂಡಿದ್ರು, ನಾನು ಸೋತರೂ ಮಾಲೂರು ಕ್ಷೇತ್ರದಲ್ಲಿ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ ಮಾಲೂರಿನಲ್ಲಿ ಈ ಭಾರಿ ಜೆಡಿಎಸ್ ಪಕ್ಷ ಗೆಲ್ಲುತೆ ಎಂದು ಜೆಡಿಎಸ್ ಅಭ್ಯರ್ಥಿ ಜಿ ರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು,

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಚ್.ವಿ.ಚಂದ್ರೇಗೌಡ, ತಾಲ್ಲೂಕು ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ ಮುಖಂಡರಾದ ಗಂಗಪ್ಪ, ಎನ್.ವೆಂಕಟರಾಮ್, ತುರುಗಲೂರುಆಂಜಿನಪ್ಪ, ಯಶವಂತಪುರ ಡಿಎಂಎನ್ ನಾಗರಾಜ್, ಅಲ್ಲ ಬಕಾಶ್, ಚೋಟುಸಾಬ್, ನವೀನ್, ಸುಮ, ಲವ , ಕುಶ ಸೇರಿದಂತೆ ಇನ್ನಿತರರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಶ್ರೀ ಬಸವೇಶ್ವರ ದೇವಸ್ಥಾನದ ವೈಭವದ ಜಾತ್ರಾ ಮಹೋತ್ಸವ..!

Sat Apr 22 , 2023
ಶ್ರೀ ಬಸವೇಶ್ವರ ದೇವಸ್ಥಾನ, ಬಸವನಮೂಲೆ ಕುಲ್ಕುಂದ ಸುಬ್ರಹ್ಮಣ್ಯ ಇದರ ಜಾತ್ರಾ ಮಹೋತ್ಸವವು  ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವೈಭವದಿಂದ  ಎ.19 ಮತ್ತು ಎ.20 ರಂದು ನಡೆಯಿತು. ಎ.19 ರ ಬೆಳಗ್ಗೆ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಾಯಂಕಾಲ ಸಂಜೆ ದೇವಸ್ಥಾನದಲ್ಲಿ ಪ್ರಾಸಾದ ಶುದ್ಧಿ ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹವಾಚನ ನಡೆಯಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. […]

Advertisement

Wordpress Social Share Plugin powered by Ultimatelysocial