CRICKET:ಇಂಡಿಯಾಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್;

ಟೀಂ ಇಂಡಿಯಾಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್..!

ಕೆ.ಎಲ್.ರಾಹುಲ್ ಸದ್ಯ ಟೀಂ ಇಂಡಿಯಾ ನಯಾ ಬ್ಯಾಟಿಂಗ್ ಸಾರಥಿ.

ಟೆಸ್ಟ್, ಏಕದಿನ, ಟಿ 20 ಹೀಗೆ ಮೂರು ಮಾದರಿ ಕ್ರಿಕೆಟ್ ನಲ್ಲೂ ರಾಹುಲ್ ಟೀಂ ಇಂಡಿಯಾ ಪಾಲಿಗೆ ಬ್ಯಾಟಿಂಗ್ ಅಸ್ತ್ರ.

ರೋಹಿತ್ ರ ಮಾಸ್.. ವಿರಾಟ್ ರ ಕ್ಲಾಸ್ ಎರಡಲ್ಲೂ ಮೈಗೂಡಿಸಿಕೊಂಡಿರುವ ರಾಹುಲ್, ಸದ್ಯ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ.

ತಮ್ಮ ಉತ್ತಮವಾದ ಪ್ರದರ್ಶನದ ಮೂಲಕವೇ ಸದ್ಯ ಟೀಂ ಇಂಡಿಯಾ ಉಪನಾಯಕರಾಗಿರುವ ರಾಹುಲ್ ಗೆ ಇದೀಗ ನಾಯಕನ ಪಟ್ಟ ಸಿಗುವ ಸಾಧ್ಯತೆಗಳಿವೆ.

ಸೀಮಿತ ಓವರ್ ಗಳ ಟೀಂ ಇಂಡಿಯಾಗೆ ರಾಹುಲ್ ಕ್ಯಾಪ್ಟನ್ ಆಗುವ ಎಲ್ಲಾ ಸಾಧ್ಯತೆಗಳಿವೆ.

ಹೌದು..! ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿ ಬಳಿಕ ಭಾರತ ಏಕದಿನ ಸರಣಿಯಲ್ಲಿ ಗುದ್ದಾಡಲಿದೆ.

ಆದ್ರೆ ಭಾರತದ ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಸರಣಿಗೆ ದೂರ ಉಳಿಯುವ ಸಾಧ್ಯತೆಗಳಿವೆ.

ರೋಹಿತ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಅವರು ಇನ್ನೂ ಫಿಟ್ ಆಗಿಲ್ಲ ಎಂದು ಮೂಲಗಳು ತಿಳಿಸುತ್ತಿವೆ.

ಇದೇ ಕಾರಣಕ್ಕಾಗಿ ಬಿಸಿಸಿಐ ಕೂಡ ಏಕದಿನ ತಂಡವನ್ನು ಪ್ರಕಟಿಸಲು ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಅನ್ ಫಿಟ್ ಆಗಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಸರಣಿಗೆ ಲಭ್ಯವಾಗುವುದು ಅನುಮಾನವಾಗಿದೆ.

ಇನ್ನೇನು ಒಂದೆರಡು ದಿನಗಳಲ್ಲಿ ಬಿಸಿಸಿಐ ಏಕದಿನ ತಂಡವನ್ನು ಪ್ರಕಟಿಸಬೇಕಾಗಿದೆ.

ಈ ಒಂದೆರಡು ದಿನಗಳಲ್ಲಿ ರೋಹಿತ್ ಶರ್ಮಾ ಫಿಟ್ ಆಗದಿದ್ದರೇ ಕೆ.ಎಲ್.ರಾಹುಲ್ ಗೆ ತಂಡದ ನಾಯಕತ್ವ ನೀಡುವ ಸಾಧ್ಯತೆಗಳಿವೆ.

ಪ್ರಸ್ತುತ ಟೆಸ್ಟ್ ತಂಡದ ಉಪನಾಯಕರಾಗಿರುವ ಕೆ.ಎಲ್.ರಾಹುಲ್ ಆಫ್ರಿಕಾ ನೆಲದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ಇನ್ನು ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ಜನವರಿ 19 ರಂದು ಆರಂಭವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Viral News:ರಾಮದಾಸ್ ಅಠಾವಳೆ ಹೊಸ ಘೋಷಣೆ;

Tue Dec 28 , 2021
ಪುಣೆ, ಡಿಸೆಂಬರ್‌ 28: ಈ ಹಿಂದೆ ಗೋ ಕೊರೊನಾ ಕೊರೊನಾ ಗೋ ಹಾಗೂ ನೋ ಕೊರೊನಾ ಕೊರೊನಾ ನೋ ಎಂಬ ಘೋಷಣೆಗಳ ಮೂಲಕ ಸುದ್ದಿಯಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಈಗ ಹೊಸ ಘೋಷಣೆಯನ್ನು ಕೂಗಿದ್ದಾರೆ. ಆದರೆ ಅದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಘೋಷಣೆ ಅಲ್ಲ. ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೋ ಮಹಾ ವಿಕಾಸ್‌ ಅಘಾಡಿ ಗೋ ಎಂದಿದ್ದಾರೆ. ಈ ಮೂರು […]

Advertisement

Wordpress Social Share Plugin powered by Ultimatelysocial