ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಹಲಸಿನ ಹಣ್ಣು.

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಈ ಹಣ್ಣಿನ ಗಾತ್ರ ಬಹು ದೊಡ್ಡದು. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನ ಪಡೆದುಕೊಂಡಿದೆಯೋ ಹಾಗೆ ಆರೋಗ್ಯದ ವಿಷಯದಲ್ಲೂ ಮಹತ್ತರ ಪ್ರಯೋಜನಗಳನ್ನು ಪಡೆದುಕೊಂಡಿದೆ.

* ಮುಖದ ಮೇಲಿನ ಚರ್ಮ ಸುಕ್ಕುಗಟ್ಟುತ್ತಿದ್ದರೆ, ಹಲಸಿನ ಬೀಜವನ್ನು ತಣ್ಣಗಿರುವ ಹಸುವಿನ ಹಾಲಿನಲ್ಲಿ ನೆನೆಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿದರೆ ಚರ್ಮದ ಸುಕ್ಕು ಕಡಿಮೆಯಾಗುತ್ತದೆ.

* ದೇಹದಲ್ಲಿ ಗಾಯವಾಗಿದ್ದರೆ ಹಲಸಿನ ಮರದ ತೊಗಟೆಯನ್ನು ಸುಟ್ಟು ಬೂದಿ ಮಾಡಿ ಆ ಬೂದಿಯನ್ನು ತೆಂಗಿನ ಎಣ್ಣೆ ಜೊತೆ ಕಲಸಿ ಹಚ್ಚಿದರೆ ಗಾಯ ಬೇಗ ಮಾಯುತ್ತದೆ.

* ಹಲಸಿನ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚುತ್ತದೆ.

* ಮುಖಕ್ಕೆ ಲಕ್ವ ಹೊಡೆದು ನೋವಿದ್ದರೆ ಹಲಸಿನ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಮುಖದ ಮೇಲೆ ಇಟ್ಟು ಕಟ್ಟಿದರೆ ನೋವು ಕಡಿಮೆಯಾಗುತ್ತದೆ.

* ಭೇದಿ ಆಗುತ್ತಿದ್ದರೆ ಹಲಸಿನ ಮರದ ತೊಗಟೆಯನ್ನು ನೀರಿನ ಜತೆ ಕಷಾಯ ಮಾಡಿ ಸೇವಿಸಿದರೆ ಭೇದಿ ನಿಲ್ಲುತ್ತದೆ. ಹಲಸಿನ ಕಾಯಿ ಪಲ್ಯ ಸೇವಿಸಿದರೂ ಭೇದಿ ನಿಲ್ಲುತ್ತದೆ.

* ಹಲಸಿನ ಎಲೆ ಮತ್ತು ಬೇರಿನ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಚರ್ಮದ ಸಮಸ್ಯೆ ಗುಣವಾಗುತ್ತದೆ.

* ಹೆಚ್ಚು ದಾಹವಾಗುವ ಸಮಸ್ಯೆ ಇದ್ದರೆ ಹಲಸಿನ ಹಣ್ಣನ್ನು ಸಕ್ಕರೆ ಜೊತೆ ಸೇವಿಸಿದರೆ ದಾಹ ನಿವಾರಣೆಯಾಗುತ್ತದೆ.

* ಹಲಸಿನ ಮರದ ಚಕ್ಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಮತ್ತು ಬಾಯಲ್ಲಿ ಹುಳವಾಗಿದ್ದರೆ ಹುಳಗಳು ಶಮನವಾಗುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ಕರೊನಾ ಪ್ರಕರಣಗಳು ಹೆಚ್ಚಳ !

Tue Apr 19 , 2022
ನವದೆಹಲಿ: ಚೀನಾ ಹಾಗೂ ಯುರೋಪ್​ನ ಹಲವು ದೇಶಗಳಲ್ಲಿ ಹೊಸ ಕರೊನಾ ಪ್ರಕರಣಗಳು ಹೆಚ್ಚಳ ಕಂಡು, ಆತಂಕ ಮೂಡಿಸಿರುವ ಬೆನ್ನಲ್ಲೇ, ಭಾರತದಲ್ಲೂ ದೈನಿಕ ಕೇಸ್​ಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಸೋಮವಾರ 1,150 ಕರೊನಾ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದರೆ, ಮಂಗಳವಾರ ಇದು 2,183ಕ್ಕೆ ಏರಿಕೆ ಕಂಡಿದೆ. ಅಂದರೆ ಹೊಸ ಪ್ರಕರಣಗಳಲ್ಲಿ ಶೇಕಡ 89.8 ಏರಿಕೆಯಾಗಿದ್ದು, ನಾಲ್ಕನೇ ಅಲೆ ಏಳಬಹುದೆಂಬ ಭಯಕ್ಕೂ ಕಾರಣವಾಗಿದೆ. ಸೋಮವಾರ ದೇಶದಲ್ಲಿ 214 ಜನರು ಮೃತಪಟ್ಟಿದ್ದು, ಆ ಪೈಕಿ ಕೇರಳದಲ್ಲೇ […]

Advertisement

Wordpress Social Share Plugin powered by Ultimatelysocial