ಜಮ್ಮು-ಕಾಶ್ಮೀರದ ಸುರಂಗದಲ್ಲಿ 9 ಮಂದಿ ಜೀವಂತ ಸಮಾಧಿ..!

ಬನಿಹಾಲ್/ಜಮ್ಮು, ಮೇ 21- ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಕುಸಿತದ ನಂತರ ಅವಶೇಷಗಳಡಿ ಸಿಲುಕಿರುವ ಒಂಬತ್ತು ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಶನಿವಾರ ಮುಂಜಾನೆ ಪುನರಾರಂಭವಾಗಿದೆ.

ಮೂವರನ್ನು ರಕ್ಷಿಸಲಾಗಿತ್ತು.

ಸುರಂಗದ ಅವಶೇಷಗಳೊಳಗೆ ಸಿಲುಕಿರುವ 9 ಮಂದಿಯನ್ನು ರಕ್ಷಿಸುವ ಕಾರ್ಯಾಚರಣೆ ಇಂದು ಮುಂಜಾನೆ 5.30 ಕ್ಕೆ ಪ್ರಾರಂಭವಾಗಿದೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ ಎಂದು ರಾಂಬನ್ ಜಿಲ್ಲಾಧಿಕಾರಿ ಮುಸ್ಸರತ್ ಇಸ್ಲಾಂ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ರಾಮ್ಸು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ನಯೀಮ್-ಉಲ್-ಹಕ್ ಸೇರಿದಂತೆ 15 ಕ್ಕೂ ಹೆಚ್ಚು ರಕ್ಷಕರು ಶುಕ್ರವಾರ ಸಂಜೆ ಹೊಸ ಭೂಕುಸಿತದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದರಿಂದಾಗಿ ಇದು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಗುಡ್ಡದ ಮೇಲಿನ ಕಲ್ಲುಗುಂಡುಗಳು ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಉರುಳಿವೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಮಂದ ಬೆಳಕಿನಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಜಾದವ್ ರಾಯ್ (23), ಗೌತಮ್ ರಾಯ್ (22), ದೀಪಕ್ ರಾಯ್ (33) ಮತ್ತು ಪರಿಮಳ್ ರಾಯ್ (38), ಅಸ್ಸಾಂನ ಶಿವ ಚೌಹಾಣ್ (26), ನೇಪಾಳಿ ನಾಗರಿಕರಾದ ನವರಾಜ್ ಚೌಧರಿ (26) ) ಖುಷಿ ರಾಮ್ (25), ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಾದ ಮುಜಾಫರ್ (38) ಮತ್ತು ಇಸ್ರತ್ (30) ಸುರಂಗದಲ್ಲಿ ಸಿಲುಕಿದ್ದು, ಅವರು ಜೀವಂತವಾಗಿರುವದು ಅನುಮಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿತ್ರ ವಿಮರ್ಶೆ: ಫ್ಯಾಮಿಲಿ ಡ್ರಾಮಾದಲ್ಲಿ 'ಗರುಡ' ಪುರಾಣ

Sat May 21 , 2022
  ಆತ ಮೇಲ್ನೋಟಕ್ಕೆ ಸೈಲೆಂಟ್‌ ಹುಡುಗ. ಗೋವಾದಲ್ಲಿ ತಾನಾಯಿತು, ತನ್ನ ಹೋಟೆಲ್‌ ಆಯಿತು ಎಂದುಕೊಂಡಿದ್ದ ಆತನಿಗೊಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಅದ ಕ್ಕೆ ಕಾರಣ ಸೈಲೆಂಟ್‌ ಹುಡುಗನ ಹಿಂದಿರುವ ವೈಲೆಂಟ್‌ ಸ್ಟೋರಿ. ಅಷ್ಟಕ್ಕೂ ಆ ವೈಲೆಂಟ್‌ ಸ್ಟೋರಿ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ಗರುಡ’ ನೋಡಬಹುದು. “ಗರುಡ’ ಒಂದು ಔಟ್‌ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಫ್ಯಾಮಿಲಿ ಹಾಗೂ ಮಾಸ್‌ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕಾರಣ, ಇಲ್ಲಿ ಕಥೆಗಿಂತ ಸನ್ನಿವೇಶಗಳಿಗೆ ಹೆಚ್ಚಿನ […]

Advertisement

Wordpress Social Share Plugin powered by Ultimatelysocial