ಆಪಲ್‌ ಐಫೋನ್‌:ಆಪಲ್‌ನ ಟ್ಯಾಪ್-ಟು-ಪೇ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಆಪಲ್‌ ಕಂಪೆನಿ ತನ್ನ ಐಫೋನ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಐಫೋನ್‌ಗಳಲ್ಲಿ ಹೊಸ ಟ್ಯಾಪ್-ಟು-ಪೇ ಫೀಚರ್ಸ್‌ ಅನ್ನು ಪ್ರಕಟಿಸಿದೆ. ಈ ಹೊಸ ಫೀಚರ್ಸ್‌ ಐಫೋನ್‌ಗಳಲ್ಲಿ ಪಾವತಿ ಮಾಡುವುದಕ್ಕೆ ಅವಕಾಶ ನೀಡಲಿದೆ.

ಯಾವುದೇ ಹೆಚ್ಚುವರಿ ಹಾರ್ಡ್‌ವೇರ್ ಅಗತ್ಯವಿಲ್ಲದೇ ತಮ್ಮ ಡಿವೈಸ್‌ಗಳಿಗೆ ಸರಳ ಟ್ಯಾಪ್ ಮಾಡುವ ಮೂಲಕ ಆಪಲ್ ಪೇ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮತ್ತು ಇತರ ಡಿಜಿಟಲ್ ವ್ಯಾಲೆಟ್‌ಗಳನ್ನು ಸ್ವೀಕರಿಸಲು ಇದರಿಂದ ಅವಕಾಶ ಸಿಗಲಿದೆ.

ಟ್ಯಾಪ್‌ ಟು ಪೇ ಫೀಚರ್ಸ್‌
ಹೌದು, ಆಪಲ್‌ ಐಫೋನ್‌ಗಳಲ್ಲಿ ಹೊಸ ಟ್ಯಾಪ್‌ ಟು ಪೇ ಫೀಚರ್ಸ್‌ ಘೋಷಣೆ ಮಾಡಿದೆ. ಇದು ಹೆಸರೇ ಸೂಚಿಸುವಂತೆ ಡಿಜಿಟಲ್‌ ಪೇಮೆಂಟ್‌ ಟ್ರಾನ್ಸಫರ್‌ಗೆ ಸಹಕಾರಿಯಾಗಲಿದೆ. ಈ ಫೀಚರ್ಸ್‌ ಐಫೋನ್‌ XS ಮತ್ತು ನಂತರದ ಮಾದರಿಗಳಲ್ಲಿ ಲಭ್ಯವಿರುತ್ತದೆ. ಪಾವತಿ ಪ್ಲಾಟ್‌ಫಾರ್ಮ್‌ಗಳು ಮತ್ತು ಅಪ್ಲಿಕೇಶನ್ ಡೆವಲಪರ್‌ಗಳು ತಮ್ಮ iOS ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸಲು ಸಹಕಾರಿಯಾಗಿದೆ. ಹಾಗಾದ್ರೆ ಟ್ಯಾಪ್-ಟು-ಪೇ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ಯಾಪ್-ಟು-ಪೇ ಫೀಚರ್ಸ್‌

ಆಪಲ್‌ ಕಂಪೆನಿ ಐಫೋನ್‌ಗಳಲ್ಲಿ ಟ್ಯಾಪ್-ಟು-ಪೇ ಫೀಚರ್ಸ್‌ ಅನ್ನು ಘೋಷಿಸಿದೆ. ಜಸ್ಟ್‌ ಟ್ಯಾಪ್‌ ಮಾಡುವ ಮೂಲಕ ಹಣ ಪಾವವತಿಸುವುದಕ್ಕೆ ಇದು ಸಹಕಾರಿಯಾಗಲಿದೆ. ಸ್ಟ್ರೈಪ್ ತಮ್ಮ ಗ್ರಾಹಕರಿಗೆ ಐಫೋನ್‌ಗಳಲ್ಲಿ ಟ್ಯಾಪ್-ಟು-ಪೇ ಫೀಚರ್ಸ್‌ ನೀಡುವ ಮೊದಲ ಪಾವತಿ ವೇದಿಕೆಯಾಗಿದೆ ಎಂದು ಆಪಲ್‌ ಕಂಪನಿ ಹೇಳಿದೆ. ಇದು Shopify ಪಾಯಿಂಟ್ ಆಫ್ ಸೇಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ. ಈ ವರ್ಷದ ಕೊನೆಯಲ್ಲಿ ಯುಎಸ್‌ನಲ್ಲಿ ಹೆಚ್ಚುವರಿ ಪಾವತಿ ಪ್ಲಾಟ್‌ಫಾರ್ಮ್‌ಗಳು, ಅಪ್ಲಿಕೇಶನ್‌ಗಳು ಮತ್ತು ಆಪಲ್ ಸ್ಟೋರ್ ಸ್ಥಳಗಳಲ್ಲಿ ಈ ಫೀಚರ್ಸ್‌ ಬರಲಿದೆ ಎಂದು ಕಂಪನಿ ತಿಳಿಸಿದೆ. ಇದಲ್ಲದೆ, ಅಮೆರಿಕನ್ ಎಕ್ಸ್‌ಪ್ರೆಸ್, ಡಿಸ್ಕವರ್, ಮಾಸ್ಟರ್‌ಕಾರ್ಡ್ ಮತ್ತು ವೀಸಾ ಸೇರಿದಂತೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಕಂಟ್ಯಾಕ್ಟ್‌ ಲೆಸ್‌ ಪಾವತಿ ಮಾಡಬಹುದಾಗಿದೆ.

ಆಪಲ್‌ನ ಟ್ಯಾಪ್-ಟು-ಪೇ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಆಪಲ್‌ನ ಟ್ಯಾಪ್-ಟು-ಪೇ ಫೀಚರ್ಸ್‌ ಪಾವತಿಗಳನ್ನು ಸಕ್ರಿಯಗೊಳಿಸಲು NFC ಟೆಕ್ನಾಲಜಿಯನ್ನು ಬಳಸುತ್ತದೆ. ಒಮ್ಮೆ ಐಫೋನ್‌ಗಳಲ್ಲಿ ಟ್ಯಾಪ್-ಟು-ಪೇ ಫೀಚರ್ಸ್‌ ಲಭ್ಯವಾದ ನಂತರ, ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ಸಪೋರ್ಟಿಂಗ್‌ iOS ಅಪ್ಲಿಕೇಶನ್ ಮೂಲಕ ಕಂಟ್ಯಾಕ್ಟ್‌ಲೆಸ್‌ ಪಾವತಿಯನ್ನು ನಡೆಸಲು ಸಾಧ್ಯವಾಗಲಿದೆ ಎಂದು ಆಪಲ್‌ ಸಂಸ್ಥೆ ಹೇಳಿದೆ. ಆಪಲ್ ಪೇ, ಕಂಟ್ಯಾಕ್ಟ್‌ಲೆಸ್‌ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಥವಾ ಐಫೋನ್‌ನ ಬಳಿ ಇರುವ ಇತರ ಡಿಜಿಟಲ್ ವ್ಯಾಲೆಟ್‌ ಮೂಲಕ ಹಣ ಪಾವತಿಸಲು ಇದು ಅವಕಾಶ ನೀಡಲಿದೆ.

ಟ್ಯಾಪ್‌ ಟು‌ ಪೇ ಫೀಚರ್ಸ್‌ನ ಸೆಕ್ಯುರಿಟಿ ಹೇಗಿದೆ?

ಆಪಲ್ ಐಫೋನ್‌ನಲ್ಲಿ ಟ್ಯಾಪ್-ಟು-ಪೇ ಅನ್ನು ಸೆಕ್ಯುರ್‌ ಮಾಡುವುದಕ್ಕೆ ಆಪಲ್ ಪೇ ಹೊಂದಿರುವ ತಂತ್ರಜ್ಞಾನವನ್ನೇ ಬಳಸಲಾಗುತ್ತದೆ ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರ ಪಾವತಿ ಡೇಟಾವನ್ನು ರಕ್ಷಿಸಲಾಗುತ್ತದೆ. ಅಂದರೆ ಸುರಕ್ಷಿತ ಎಲಿಮೆಂಟ್ ಫೀಚರ್ಸ್‌ ಮೂಲಕ ನಿಮ್ಮ ಡೇಟಾ ಸೆಕ್ಯುರ್‌ ಮಾಡಲಾಗುತ್ತದೆ. ಸದ್ಯ ಟ್ಯಾಪ್‌ಟು ಪೇ ಫೀಚರ್ಸ್‌ ಪ್ರಾರಂಭದಲ್ಲಿ US ನಲ್ಲಿನ ವ್ಯಾಪಾರಿಗಳಿಗೆ ಲಭ್ಯವಾಗಲಿದೆ. ಜಾಗತಿಕವಾಗಿ ಇತರೆ ಭಾಗಗಳಲ್ಲಿ ಯಾವಾಗ ಲಭ್ಯವಾಗಲಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಐಫೋನ್ 14

ಇದಲ್ಲದೆ ಈ ವರ್ಷ ಆಪಲ್‌ ಕಂಪೆನಿಯ ಬಹು ನಿರೀಕ್ಷಿತ ಡಿವೈಸ್‌ಗಳಲ್ಲಿ ಐಫೋನ್ 14ಕೂಡ ಸೇರಿದೆ. ಈ ಫೋನ್ ದೊಡ್ಡ ವಿನ್ಯಾಸ ಮತ್ತು ಹಾರ್ಡ್‌ವೇರ್ ಬದಲಾವಣೆಗಳನ್ನು ನೋಡುವ ನಿರೀಕ್ಷೆಯಿದೆ. ಐಫೋನ್ 14 ಪಂಚ್-ಹೋಲ್ ಕ್ಯಾಮೆರಾದೊಂದಿಗೆ ಬರಲಿದೆ ಎನ್ನುವ ಸಾಕಷ್ಟು ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದಲ್ಲದೆ ಐಫೋನ್ 14 ಕ್ಯಾಮೆರಾ ವಿಭಾಗದಲ್ಲಿ ಹೊಸ ಅಪ್ಡೇಟ್‌ನಲ್ಲಿ ಬರಲಿದೆ ಎನ್ನಲಾಗಿದೆ. ಅದರಂತೆ ಇದರ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಲೆನ್ಸ್‌ನೊಂದಿಗೆ ಬದಲಾಯಿಸಲಾಗುತ್ತದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Redmi Note 11 ವಿಶೇಷತೆ ಏನು?

Wed Feb 9 , 2022
ಕಳೆದ ತಿಂಗಳು ಚೀನಾದಲ್ಲಿ Redmi Note 11, Redmi Note 11 Pro ಮತ್ತು Redmi Note 11S ಅನ್ನು ಬಿಡುಗಡೆ ಮಾಡಿತ್ತು. ಕಳೆದ ವರ್ಷ ಬಿಡುಗಡೆಯಾದ Redmi Note 10 ಸರಣಿಯ ನಂತರ Redmi Note 11 ಸರಣಿಯು ಈ ವರ್ಷ ಯಶಸ್ವಿಯಾಗಿ ಬಿಡುಗಡೆಯಾಗಿದೆ ಬಿಡುಗಡೆ ಕಾರ್ಯಕ್ರಮವು ಇಂದು ಮಧ್ಯಾಹ್ನ 12PM IST ಕ್ಕೆ ನಡೆದಿದ್ದು, Redmi ನ ಅಧಿಕೃತ YouTube ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಯಿತು. Redmi […]

Advertisement

Wordpress Social Share Plugin powered by Ultimatelysocial