SANDALWOOD:ಗೆಳೆಯ ರಾಜವರ್ಧನ್‌ಗಾಗಿ ಟೈಟಲ್ ಬಿಟ್ಟುಕೊಟ್ಟ ಡಾಲಿ ಧನಂಜಯ್!!

ಗೆಳೆಯ ರಾಜವರ್ಧನ್‌ಗಾಗಿ  ಟೈಟಲ್ ಬಿಟ್ಟುಕೊಟ್ಟ ಡಾಲಿ ಧನಂಜಯ್: ಯಾವುದು ಆ ಶೀರ್ಷಿಕೆ?

ಡಾಲಿ ಧನಂಜಯ್ ‘ಬಡವ ರಾಸ್ಕಲ್’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ನಿರೀಕ್ಷೆ ಮಾಡಿದಂತೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಈ ಸಿನಿಮಾದ ಮೂಲಕ ನಟರಾಕ್ಷಸನ ಸಿನಿಮಾ ಥಿಯೇಟರ್‌ನಲ್ಲಿ ಮತ್ತೆ ಸದ್ದು ಮಾಡಲು ಶುರುವಿಟ್ಟುಕೊಂಡಿದೆ.

ಇದರ ಹಿಂದೆನೇ ಸಾಕಷ್ಟು ಸಿನಿಮಾಗಳಲ್ಲಿಯೂ ಧನಂಜಯ್ ನಟಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಸ್ಯಾಂಡಲ್‌ವುಡ್‌ನಲ್ಲಿ ಅತೀ ಹೆಚ್ಚು ಬ್ಯುಸಿ ಇರುವ ನಟರ ಪಟ್ಟಿಯಲ್ಲಿ ಧನಂಜಯ್ ಕೂಡ ಇದ್ದಾರೆ.

ಧನಂಜಯ್ ಸಿನಿಮಾ ನಿರ್ಮಾಣದ ಕನಸು ಇಂದಿನದಲ್ಲ. ಈ ಹಿಂದೆನೇ ಸಿನಿಮಾ ನಿರ್ಮಾಣ ಮಾಡುವ ಕನಸು ಕಂಡಿದ್ದರು. ಅದಕ್ಕಾಗಿಯೇ ಒಂದಿಷ್ಟು ಟೈಟಲ್ ಅನ್ನು ರಿಜಿಸ್ಟರ್ ಮಾಡಿಟ್ಟುಕೊಂಡಿದ್ದರು. ಇಂತಹದ್ರಲ್ಲಿ ಒಂದು ಟೈಟಲ್ ಅನ್ನು ಗೆಳೆಯ ರಾಜವರ್ಧನ್ ಕೇಳಿದ್ದಕ್ಕೆ ಬಿಟ್ಟುಕೊಟ್ಟಿದ್ದಾರೆ. ಆ ಟೈಟಲ್ ಇಟ್ಟುಕೊಂಡು ನಾಳೆ(ಫೆ. 16) ಸಿನಿಮಾ ಸೆಟ್ಟೇರಿಸಲು ಹೊರಟಿದ್ದಾರೆ. ಹಾಗಿದ್ದರೆ ಆ ಟೈಟಲ್ ಯಾವುದು? ಈ ಟೈಟಲ್ ಹಿಂದಿರುವ ಕಹಾನಿ ಏನು ಅಂತ ತಿಳಿಯಲು ಮುಂದೆ ಓದಿ.

2 ವರ್ಷದ ಹಿಂದೆನೇ ಟೈಟಲ್ ರಿಜಿಸ್ಟರ್
ಡಾಲಿ ಧನಂಜಯ್ ಎರಡು ವರ್ಷಗಳ ಹಿಂದೆ ಫಿಲ್ಮ್ ಚೇಂಬರ್‌ನಲ್ಲಿ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿದ್ದರು. ಅದುವೇ ‘ಹಿರಣ್ಯ’. ಧನಂಜಯ್ ಮುಂದೊಂದು ದಿನ ಇದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. ಹೀಗಾಗಿ ‘ಹಿರಣ್ಯ’ ಅನ್ನುವ ಪವರ್‌ಫುಲ್ ಟೈಟಲ್ ಅನ್ನು ಮೊದಲೇ ರಿಜಿಸ್ಟರ್ ಮಾಡಿಸಿದ್ದರು. ಆದರೆ, ಈಗಿರುವ ಕಮಿಟ್ಮೆಂಟ್‌ಗೆ ಆ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಈ ಟೈಟಲ್ ಅನ್ನೇ ರಾಜವರ್ಧನ್‌ಗೆ ನೀಡಿದ್ದಾರೆ.

ರಾಜವರ್ಧನ್ ಟೈಟಲ್ ಸಿಕ್ಕಿದ್ದೇಗೆ?

ರಾಜವರ್ಧನ್ ಹೊಸ ಸಿನಿಮಾದ ಮಾತುಕತೆ ನಡೆಯುತ್ತಿತ್ತು. ಪ್ರವೀಣ್ ಅವ್ಯುಕ್ತ್ ಅನ್ನುವ ಯುವ ನಿರ್ದೇಶಕ ಮಾಸ್ ಸ್ಟೋರಿಯೊಂದನ್ನು ರೆಡಿ ಮಾಡಿಟ್ಟುಕೊಂಡಿದ್ದರು. ಈ ಸಿನಿಮಾಗೆ ಸಾಕಷ್ಟು ಹೆಸರುಗಳನ್ನು ಇಟ್ಟಿದ್ದೆವು. ಆದರೆ ನನಗೆ ಹಿರಣಯ್ ಅನ್ನುವ ಟೈಟಲ್ ಬೇಕಿತ್ತು. ಫಿಲ್ಮ್ ಚೇಂಬರ್‌ನಲ್ಲಿ ವಿಚಾರಿಸಿದಾಗ, ಅದು ಆಗಾಲೇ ರಿಜಿಸ್ಟರ್ ಆಗಿತ್ತು. ಬಳಿಕ ನಮ್ಮ ಮ್ಯಾನೇಜರ್ ಬಳಿಕ ಧನಂಜಯ್ ಅವರಿಗೆ ಕೇಳಿದ್ದೆವು. ಆಗ ಅವರಿಗೆ ಟೈಟಲ್ ಕೊಡುವ ಆಲೋಚನೆ ಇರಲಿಲ್ಲ. ಈ ವಿಷಯವನ್ನು ರಾಜವರ್ಧನ್ ಬಳಿಕ ಹೇಳಿದಾಗ, ನಾನೊಮ್ಮೆ ಕೇಳಿ ನೋಡುತ್ತೇನೆ ಅಂದರು. ರಾಜವರ್ಧನ್ ಕೇಳಿದ ಕೂಡಲೇ ಗೆಳೆಯನಿಗಾಗಿ ಟೈಟಲ್ ಕೊಟ್ಟುಬಿಟ್ಟರು.” ಎಂದು ನಿರ್ದೇಶಕ ಪ್ರವೀಣ್ ಅವ್ಯುಕ್ತ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

ಗ್ಯಾಂಗ್‌ಸ್ಟರ್ ಸಿನಿಮಾ ‘ಹಿರಣ್ಯ’

‘ಹಿರಣ್ಯ’ ಸಿನಿಮಾದ ಕಥೆ ಗ್ಯಾಂಗ್‌ಸ್ಟರ್ ಶೈಲಿಯಲ್ಲಿ ಇರುತ್ತೆ. ಸಸ್ಪೆನ್ಸ್, ಥ್ರಿಲ್ಲರ್ ಕೂಡ ಇರುತ್ತೆ. ಆದರೆ, ಸಿನಿಮಾದ ಸೆಂಟಿಮೆಂಟ್ ದೃಶ್ಯಗಳು ವಿಭಿನ್ನವಾಗಿರುತ್ತವೆ ಎಂದು ಭರವಸೆ ನೀಡುತ್ತಾರೆ. ರಾಜವರ್ಧನ್ ಪರ್ನಾಲಿಟಿಗೆ ತಕ್ಕಂತೆ ಅವರ ಪಾತ್ರವನ್ನು ಹೆಣೆಯಲಾಗಿದ್ದು, ಫೆಬ್ರವರಿ 16ಕ್ಕೆ ಸಿನಿಮಾ ಸೆಟ್ಟೇರಿಸಲಿದ್ದಾರೆ. ಜೂಡಾ ಸ್ಯಾಂಡಿ ಮ್ಯೂಸಿಕ್ ನೀಡುತ್ತಿದ್ದಾರೆ. ತಮಿಳಿನಲ್ಲಿ ‘ರೋಬೊ 2.0’ ಅಂತಹ ದುಬಾರಿ ಸಿನಿಮಾ ನಿರ್ಮಿಸಿದ್ದ ಲೈಕಾ ಪ್ರೋಡಕ್ಷನ್‌ನಲ್ಲಿ ಕೆಲಸ ಮಾಡಿದ್ದಾರೆ. ಗೋಕುಲ್ ಬೆನಾಯ್ ಎಂಬ ಸುಪ್ರಸಿದ್ದ ಕ್ಯಾಮರಾಮ್ಯಾನ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ.

ಪ್ರಣಯಂ ಸಿನಿಮಾದಲ್ಲಿ ರಾಜವರ್ಧನ್ ನಟನೆ

ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್. ಕನ್ನಡದ ‘ಬಿಚ್ಚುಗತ್ತಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದರು. ಸದ್ಯಕ್ಕೀಗ ‘ಪ್ರಣಯಂ’ ಅನ್ನುವ ಚಿತ್ರದಲ್ಲಿ ನಟಿಸ್ತಿದ್ದಾರೆ. ಈಗ ‘ಹಿರಣ್ಯ’ ಸಿನಿಮಾದ ಮೂಲಕ ರಾಜವರ್ಧನ್ ಮತ್ತೊಂದು ಹೊಸ ಚಿತ್ರಕ್ಕೆ ಜೈ ಎಂದಿದ್ದಾರೆ. ಈ ಹಿಂದೆ ರಾಜವರ್ಧನ್ ನಟಿಸಿದ ಸಿನಿಮಾಗಳಿಗಿಂತ ಈ ಚಿತ್ರ ಕೊಂಚ ವಿಭಿನ್ನವಾಗಿರುತ್ತೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಬಿಎಸ್‌ಇ ನೂತನ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ವಿನೀತ್ ಜೋಶಿ ನೇಮಕ

Tue Feb 15 , 2022
    ಹೊಸ CBSE ಅಧ್ಯಕ್ಷರಾಗಿ ವಿನೀತ್ ಜೋಶಿ ನೇಮಕ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿನೀತ್ ಜೋಶಿ ಅವರಿಗೆ ಸಿಬಿಎಸ್‌ಇ ಅಧ್ಯಕ್ಷರ ಉಸ್ತುವಾರಿ ವಹಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯಲ್ಲಿ OSD ಆಗಿ ನೇಮಕಗೊಂಡ ನಂತರ CBSE ಮಾಜಿ ಅಧ್ಯಕ್ಷ ಮನೋಜ್ ಅಹುಜಾ ಅವರು ಅಧಿಕಾರವನ್ನು ತ್ಯಜಿಸಿದ ನಂತರ ಈ ಬೆಳವಣಿಗೆಯು ಬಂದಿದೆ. “ಸಿಬಿಎಸ್‌ಇ ಅಧ್ಯಕ್ಷ ಸ್ಥಾನದಿಂದ ಮನೋಜ್ ಅಹುಜಾ ಅವರನ್ನು […]

Advertisement

Wordpress Social Share Plugin powered by Ultimatelysocial