10 ನೇ ತರಗತಿ ಪಾಸಾದವರಿಗೆ ಭರ್ಜರಿ ಬಂಪರ್:

ಭಾರತೀಯ ಅಂಚೆ ಇಲಾಖೆ 40,000ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇಂದಿನಿಂದಲೇ ಇದು ಶುರುವಾಗಿದೆ. ಒಟ್ಟು 40,889 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 16 ಕೊನೆಯ ದಿನಾಂಕವಾಗಿದೆ.

ಗ್ರಾಮೀಣ ಅಂಚೆ ಸೇವಕ, ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, 10ನೇ ತರಗತಿ (ಗಣಿತ ಹಾಗೂ ಇಂಗ್ಲಿಷ್ ವಿಷಯಗಳೊಂದಿಗೆ) ಪಾಸಾದ ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ವೆಬ್ಸೈಟ್ indiapostgdaonline.gov.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಮೊದಲಿಗೆ https://indiapostgdaonline.gov.in ವೆಬ್ ಸೈಟಿಗೆ ಭೇಟಿ ನೀಡಿ.

ರಿಜಿಸ್ಟರ್ ಮಾಡುವ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಬೇಕು.

ಇದನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ ನಂತರ ಅದರ ಒಂದು ಪ್ರತಿಯನ್ನು ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಬದಲಾವಣೆ ಮಾಡಬಯಸಿದಲ್ಲಿ ಫೆಬ್ರವರಿ 17 ರಿಂದ 19 ರ ವರೆಗೆ ಇದನ್ನು ಮಾಡಬಹುದಾಗಿದೆ.

18 ರಿಂದ 40 ವಯೋಮಿತಿಯವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ ದಾಖಲಾತಿ ವಿವರಗಳಿಗೆ ವೆಬ್ಸೈಟ್ ಗೆ ಭೇಟಿ ನೀಡಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿರಾ ಗಾಂಧಿ, ವಾಜಪೇಯಿ, ಮೋದಿ ; ಈ ಮೂವರಲ್ಲಿ 'ಅತ್ಯುತ್ತಮ ಪ್ರಧಾನಿ' ಯಾರು.?

Sat Jan 28 , 2023
ನವದೆಹಲಿ : ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ, ಈ ವರ್ಷ ಒಂಬತ್ತು ರಾಜ್ಯಗಳು ಚುನಾವಣೆಗೆ ಹೋಗಲಿದ್ದು, ಇದು ಬಿಜೆಪಿ ಮತ್ತು ಕಾಂಗ್ರೆಸ್ಗೆ ನಿರ್ಣಾಯಕ ಪರೀಕ್ಷೆಯಾಗಿದೆ. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಗೆಲುವು ಕೇಸರಿ ಪಕ್ಷದ ಬಲವರ್ಧನೆಯನ್ನ ತೋರಿಸಿದರೆ, ಕಾಂಗ್ರೆಸ್’ನ ಗೆಲುವು ಹೆಚ್ಚಾಗಿ ರಾಹುಲ್ ಗಾಂಧಿ ಅವರ ಪ್ರಯತ್ನ ಮತ್ತು ಭಾರತ್ ಜೋಡೋ ಯಾತ್ರೆಗೆ ಸಲ್ಲುತ್ತದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಬಲವಾದ ಸ್ಥಾನದಲ್ಲಿರಿಸುತ್ತದೆ. 2024ರ […]

Advertisement

Wordpress Social Share Plugin powered by Ultimatelysocial