ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌

 

ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂಬುದನ್ನು ನಾವು ಪ್ರತಿದಿನ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಇದರ ಜತೆಯಲ್ಲಿಯೇ ಇರುವ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಇಂದಿನ ಯುವಜನತೆ ಸರಿಯಾದ ಸಿದ್ಧತೆ ಮಾಡಿಕೊಳ್ಳುತ್ತಿಲ್ಲ. ಅಗತ್ಯ ಕೌಶಲಗಳನ್ನು ಕಲಿತುಕೊಳ್ಳುತ್ತಿಲ್ಲ ಎಂಬ ಮಾತೂ ಇದೆ. ಹೊಸ ಹೊಸ ಕೋರ್ಸ್‌ಗಳನ್ನು ಮಾಡಿ ನಾವು ನಮಗಿರುವ ಉದ್ಯೋಗಾಕವಾಶವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಆ ರೀತಿಯ ಕೋರ್ಸ್‌ಗಳಲ್ಲಿ ‘ಸಿಕ್ಸ್‌ ಸಿಗ್ಮಾ’ ಕೋರ್ಸ್‌ ಒಂದು.ಕೆಲವು ವರ್ಷಗಳ ಹಿಂದೆ ‘ಸಿಕ್ಸ್‌ ಸಿಗ್ಮಾ’ ಎಂಬ ಹೆಸರನ್ನು ಬಹುತೇಕರು ಕೇಳಿರಲಿಕ್ಕಿಲ್ಲ. ಈಗ ಇದು ಬಹುಬೇಡಿಕೆಯ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌. ಸಿಕ್ಸ್‌ ಸಿಗ್ಮಾ ಎಂದರೆ ವ್ಯವಹಾರದ ಪ್ರಕ್ರಿಯೆಯನ್ನು ಅಭಿವೃದ್ಧಿಗೊಳಿಸುವ ಟೆಕ್ನಿಕ್‌ ಮತ್ತು ಟೂಲ್‌ಗಳ ಗೊಂಚಲು. 1986ರಲ್ಲಿ ಬಿಲ್‌ ಸ್ಮಿತ್‌ ಎಂಬ ಎಂಜಿನಿಯರ್‌ ಮೊಟೊರೊಲಾದಲ್ಲಿ ಕೆಲಸ ಮಾಡುತ್ತಿರುವಾಗ ಈ ತಂತ್ರವನ್ನು ಪರಿಚಯಿಸಿದರು. 1995ರಲ್ಲಿ ಜಾಕ್‌ ಸ್ಮಿತ್‌ ಎಂಬವರು ಜನರಲ್‌ ಎಲೆಕ್ಟ್ರಿಕ್‌ ಕಂಪನಿಯಲ್ಲಿ ಈ ತಂತ್ರವನ್ನು ಹೆಚ್ಚು ಪ್ರಚಲಿತಗೊಳಿಸಿದರು. ಕಳೆದ ಕೆಲವು ವರ್ಷಗಳಿಂದ ಈ ಸರ್ಟಿಫಿಕೇಷನ್‌ ಕೋರ್ಸ್‌ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.ಸಿಕ್ಸ್‌ ಸಿಗ್ಮಾದಲ್ಲಿ ಹಲವು ಬೆಲ್ಟ್‌ಗಳಿವೆ. ಗ್ರೀನ್‌ ಬೆಲ್ಟ್‌, ಬ್ಲ್ಯಾಕ್‌ ಬೆಲ್ಟ್‌ ಮತ್ತು ಮಾಸ್ಟರ್‌ ಬ್ಲ್ಯಾಕ್‌ ಬೆಲ್ಟ್‌ಗಳೂ ಪ್ರಮುಖವಾದದ್ದು. ಎಲ್ಲೊ ಮತ್ತು ವೈಟ್‌ ಬೆಲ್ಟ್‌ನ ಸಿಕ್ಸ್‌ ಸಿಗ್ಮಾ ಕೋರ್ಸ್‌ಗಳೂ ಇವೆ. 2016ರ ಸರ್ಟಿಫಿಕೇಷನ್‌ ಕೋರ್ಸ್‌ಗಳಲ್ಲಿ ಗ್ರೀನ್‌ ಬೆಲ್ಟ್‌ಗೆ ಪ್ರಮುಖ ಸ್ಥಾನ ಇರುವುದರಿಂದ ಈಅಂಕಣದಲ್ಲಿ ಗ್ರೀನ್‌ ಬೆಲ್ಟ್‌ ಕುರಿತು ಮಾಹಿತಿ ನೀಡಲಾಗಿದೆ.ಆನ್‌ಲೈನ್‌ ಮತ್ತು ಕ್ಲಾಸ್‌ರೂಂ ಕೋರ್ಸ್‌ಗಳ ಮೂಲಕ ಸಿಕ್ಸ್‌ ಸಿಗ್ಮಾ ಗ್ರೀನ್‌ಬೆಲ್ಟ್‌ ಕುರಿತು ಕಲಿತುಸರ್ಟಿಫಿಕೇಷನ್‌ ಪಡೆದುಕೊಳ್ಳಬಹುದಾಗಿದೆ. ಸಿಂಪ್ಲಿಲರ್ನ್‌, ಮಣಿಪಾಲ್‌ಪ್ರೊಲರ್ನ್‌ ಇತ್ಯಾದಿ ಆನ್‌ಲೈನ್‌ ಕಲಿಕಾ ತಾಣಗಳಲ್ಲಿ ಸೇರಿದಂತೆರಾಜ್ಯದ ಹಲವು ಶೈಕ್ಷಣಿಕ ಸಂಸ್ಥೆಗಳು ಈವಿಷಯದಲ್ಲಿ ಸರ್ಟಿಫಿಕೇಷನ್‌ ನೀಡುತ್ತವೆ. ಸರ್ಟಿಫೈಡ್‌ ಸಿಕ್ಸ್‌ ಸಿಗ್ಮಾ ಗ್ರೀನ್‌ ಬೆಲ್ಟ್‌ಗೆಸರಳವಾಗಿ ಸಿಎಸ್‌ಎಸ್‌ಜಿಬಿ ಎನ್ನಲಾಗುತ್ತದೆ. ಗುಣಮಟ್ಟದ ವಲಯದಲ್ಲಿ ಕರಿಯರ್‌ ರೂಪಿಸಲು ಬಯಸುವವರಿಗೆ ಇದು ಸೂಕ್ತವಾದಕೋರ್ಸ್‌. ಈ ಸರ್ಟಿಫಿಕೇಷನ್‌ ಪಡೆದವರಿಗೆಇಂಪ್ರೂವ್‌ಮೆಂಟ್‌ ಪ್ರಾಜೆಕ್ಟ್ ಅಥವಾ ಗ್ರೀನ್‌ ಬೆಲ್ಟ್‌ ಪ್ರಾಜೆಕ್ಟ್ನ ನಾಯಕತ್ವ ವಹಿಸಿಕೊಂಡುಕಾರ್ಯನಿರ್ವಹಿಸು ಅವಕಾಶ ದೊರಕುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಡಿಫೆನ್ಸ್‌ ಅಕಾಡೆಮಿ ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿ ಅಧಿಸೂಚನೆ ಪ್ರಕಟ

Sun Jan 1 , 2023
ಕೇಂದ್ರ ಲೋಕಸೇವಾ ಆಯೋಗವು 2023ನೇ ಸಾಲಿನ ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಮತ್ತು ನೇವಿ ಅಕಾಡೆಮಿ ಕೋರ್ಸ್‌ಗಳ ಟರ್ಮ್‌ 1 ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿದೆ. ಎನ್‌ಡಿಎ, ಎನ್‌ಎ ಕೋರ್ಸ್‌ಗಳಿಗೆ ಸೇರಲು ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು, ನಿಗದಿತ ಕೊನೆ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಎನ್‌ಡಿಎ (ಮಿಲಿಟರಿ) : 370 ನೌಕಾ ಅಕಾಡೆಮಿ: 25 ದ್ವಿತೀಯ ಪಿಯುಸಿ (10+2) ವಿದ್ಯಾರ್ಹತೆಯನ್ನು ಸ್ಕೂಲ್‌ ಎಜುಕೇಷನ್‌ ಬೋರ್ಡ್‌ ಅಥವಾ ಯಾವುದೇ […]

Advertisement

Wordpress Social Share Plugin powered by Ultimatelysocial