ಪ್ರಜಾಪ್ರಭುತ್ವ ವಿಶ್ವಾದ್ಯಂತ ಚೈತನ್ಯಶೀಲ ಶಕ್ತಿಯಾಗಲು ಸಿಪಿಎ ಅನುವು ಮಾಡಿಕೊಟ್ಟಿದೆ : ವಿಶ್ವೇಶ್ವರ ಹೆಗಡೆ ಕಾಗೇರಿ

ಕಾಮನ್ ವೆಲ್ತ್ ಸಂಸದೀಯ ಸಂಘಟನೆ ಸಂಸದೀಯ ಪ್ರಜಾಪ್ರಭುತ್ವ ಆಳವಾದ ಬೇರು ಬಿಡಲು ಮತ್ತು ವಿಶ್ವಾದ್ಯಂತ ಚೈತನ್ಯಶೀಲ ಶಕ್ತಿಯಾಗಲು ಅನುವು ಮಾಡಿಕೊಟ್ಟಿದೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.ಸುವರ್ಣ ವಿಧಾನಸೌಧದ ರಾಜ್ಯ ವಿಧಾನಮಂಡಲದ ಕೇಂದ್ರ ಸಭಾಂಗಣದಲ್ಲಿ ನಡೆದ ಸಿಪಿಎ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಪಿಎ ತನ್ನ ಎಲ್ಲಾ ಸಮ್ಮೇಳನಗಳಲ್ಲಿ ಶಾಸಕರ ಸಾಮಥ್ರ್ಯ ವರ್ಧನೆ, ಬಜೆಟ್ ಪ್ರಸ್ತಾವನೆಗಳು ಮತ್ತು ಪರಿಸರ ಸಮಸ್ಯೆಗಳಂತಹ ಮಹತ್ವದ ವಿಷಯಗಳನ್ನು ಕೈಗೆತ್ತಿಕೊಂಡು ವಿಶ್ಲೇಷಿಸುತ್ತಿದೆ. ಪ್ರತಿ ವಿಷಯ ಮತ್ತು ಪ್ರತಿ ಚರ್ಚೆಯು ಅರ್ಥಪೂರ್ಣವಾಗಿದೆ ಮತ್ತು ಅದರ ಫಲಿತಾಂಶವು ಸಮಗ್ರವಾಗಿದೆ ಎಂದು ಸ್ಪೀಕರ್ ಹೇಳಿದರು.

ಉಗಾಂಡಾದಲ್ಲಿ ನಡೆದ ಸಿಪಿಎ ಸಮ್ಮೇಳನದ ಸಮಯದಲ್ಲಿ ಆಯಾ ದೇಶಗಳ ಸಾರ್ವಭೌಮತ್ವವನ್ನು ರಕ್ಷಿಸುವುದು ಒಂದು ವಿಷಯವಾಗಿತ್ತು. ಕೆಲವು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ದೇಶದ ಉಗಾಂಡಾದಲ್ಲಿ ನಡೆದ ಸಿಪಿಎ ಸಮ್ಮೇಳನದಲ್ಲಿ ನಾನು ಮಾತನಾಡಿ, ನನ್ನ ದೇಶವನ್ನು ಸಮರ್ಥಿಸಿಕೊಂಡಿದ್ದೆ ಎಂದು ಹೇಳಿದರು.ಸಿಪಿಎಯ ಚಟುವಟಿಕೆಗಳಲ್ಲಿ ವಿಶೇಷವಾಗಿ ಚರ್ಚಾ ಕೌಶಲ್ಯವನ್ನು ಹೆಚ್ಚಿಸುವ ಮತ್ತು ದೀರ್ಘಕಾಲೀನ, ದೀರ್ಘ ಬಾಳಿಕೆ ಬರುವ ಸುಸ್ಥಿರ ಪರಿಹಾರಗಳೊಂದಿಗೆ ಸಾಮಾನ್ಯ ಜನರ ಸಮಸ್ಯೆಗಳನ್ನು ವಿಶ್ಲೇಷಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುವಂತೆ ಸದಸ್ಯರಿಗೆ ಅವರು ಕರೆ ನೀಡಿದರು.ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಕೋಟಾ ಶ್ರೀನಿವಾಸಪೂಜಾರಿ, ವಿಧಾನಮಂಡಲದ ಉಭಯ ಸದನಗಳ ಕಾರ್ಯದರ್ಶಿಗಳು ಮತ್ತು ಹಲವಾರು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪ್ರಕಟಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ:ಗೋವಿಂದ ಕಾರಜೋಳ 

Thu Dec 23 , 2021
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪ್ರಕಟಿಸಲು ಕೇಂದ್ರ ಸರ್ಕಾರದ ಮೇಲೆ ಎಲ್ಲಾ ರೀತಿಯ ಒತ್ತಡ ತರಲಾಗಿದೆ. ನ್ಯಾಯಾಲಯದ ವಾಜ್ಯ ಇತ್ಯರ್ಥವಾದ ಬಳಿಕವೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.ವಿಧಾನ ಪರಿಷತ್‍ನಲ್ಲಿ ಸದಸ್ಯ ಪ್ರಕಾಶ್ ರಾಥೋಡ್ ಅವರು ಪ್ರಶ್ನೆಗೆ ಉತ್ತರಿಸಿದ ಅವರು, ಕೃಷ್ಣಾ ನ್ಯಾಯಾೀಕರಣದ ತೀರ್ಪು ಅಸೂಚನೆ ಪ್ರಕಟವಾದ ಬಳಿಕ ಕೃಷ್ಣಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ […]

Advertisement

Wordpress Social Share Plugin powered by Ultimatelysocial