ಕಳೆದ ವರ್ಷಕ್ಕಿಂತಲೂ ಅಧಿಕ ಮದ್ಯ ಮಾರಾಟ;

Bengaluru- ನೈಟ್ ಕಫ್ರ್ಯೂ ಜಾರಿ, ಪೊಲೀಸರ ವಿಶೇಷ ನಿಗಾದ ನಡುವೆಯೂ ಮದ್ಯ ಮಾರಾಟದಲ್ಲಿ ಗ್ರಾಹಕರು ಕಳೆದ ಬಾರಿಯ ದಾಖಲೆಯನ್ನು ಮುರಿದಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮದ್ಯ ಬಾಕ್ಸ್ ಮಾರಾಟ ಹಾಗೂ ಆದಾಯ ಸಂಗ್ರಹದಲ್ಲಿ ಸಾಕಷ್ಟು ವೃದ್ಧಿಯಾಗಿದೆ.

ಕಳೆದ ವರ್ಷ ಡಿಸೆಂಬರ್ 31ರಂದು 2.25 ಲಕ್ಷ ಕಾರ್ಟನ್ ಬಾಕ್ಸ್‍ಗಳಲ್ಲಿ ಭಾರತೀಯ ನಿರ್ಮಿತ ಮದ್ಯ ಮಾರಾಟವಾಗಿದ್ದರೆ, ಈ ಬಾರಿ ಅದು 2.39 ಲಕ್ಷ ಪೆಟ್ಟಿಗೆಗಳಿಗೆ ಏರಿದೆ. ಕಳೆದ ಮೂರು ವರ್ಷಗಳ ಹಿನ್ನೆಲೆ ಗಮನಿಸಿದಾಗ ನಿನ್ನೆಯ ಮಾರಾಟ ಕೊಂಚ ಕಡಿಮೆಯಾಗಿದೆ. ಆದರೂ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂಬುದು ಗಮನಾರ್ಹ.

2019ರಲ್ಲಿ ಡಿಸೆಂಬರ್ 31ರಂದು 3.62 ಲಕ್ಷ ಮದ್ಯ ಬಾಕ್ಸ್ ಮಾರಾಟವಾಗಿವೆ. ಅದಕ್ಕಿಂತ ಹಿಂದಿನ ವರ್ಷ 3.82 ಲಕ್ಷ ಮಾರಾಟವಾಗಿದೆ. ಆದರೆ 2020ರಲ್ಲಿ ಕಡಿಮೆ ಮದ್ಯ ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಖರೀದಿಯಲ್ಲಿ ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರ ನೈಟ್ ಕಫ್ರ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮುಂಚಿತವಾಗಿಯೇ ಮದ್ಯವನ್ನು ಖರೀದಿಸಿಟ್ಟುಕೊಂಡಿದ್ದರು. ಪಬ್‍ಗಳಲ್ಲಿ ತಡರಾತ್ರಿಯವರೆಗೂ ಮದ್ಯಸೇವನೆ ಕಂಡು ಬಂದಿಲ್ಲ. ಆದರೆ ಇಲ್ಲಿ ಬರಬೇಕಿದ್ದ ಜನ ಬೇರೆ ಪರ್ಯಾಯ ಸ್ಥಳ ಹುಡುಕಿಕೊಂಡಿದ್ದಾರೆ ಹೊರತು ಮದ್ಯಪಾನ ಮಾತ್ರ ನಿಲ್ಲಿಸಿಲ್ಲ ಎಂದಿದ್ದಾರೆ.

ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳು ಅಂಕಿ-ಅಂಶ ಸಮೇತ ದಾಖಲೆ ಒದಗಿಸಿದ್ದಾರೆ. ಡಿಸೆಂಬರ್ 2021ರ ಮಾಹೆಯಲ್ಲಿ 17.18 ಲಕ್ಷ ಕಾಟನ್ ಬಾಕ್ಸ್ ಮದ್ಯ ಮಾರಾಟವಾಗಿದ್ದರೆ, ಸುಮಾರು 10.13 ಲಕ್ಷ ಕಾಟನ್ ಬಾಕ್ಸ್ ನಷ್ಟು ಬಿಯರ್ ಮಾರಾಟವಾಗಿದೆ. ಸರ್ಕಾರಕ್ಕೆ ಇದರಿಂದ ಹರಿದು ಬಂದಿರುವ ಆದಾಯದ ಮೊತ್ತ 977.37 ಕೋಟಿ ರೂ.ಗಳಾಗಿದೆ.

ಅಲ್ಲದೆ ಅಬಕಾರಿ ಇಲಾಖೆ ಆದಾಯ 639.05 ಕೋಟಿ ರೂ.ಗಳಷ್ಟಾಗಿದೆ. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ಕಡೆಯ ತಿಂಗಳಲ್ಲಿ ಬಂದಿರುವ ಆದಾಯದಲ್ಲಿ ಹೆಚ್ಚಳವೇ ಆಗಿದೆ. ಕಳೆದೆರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಶೇ.13ರಷ್ಟು ಮಾರಾಟದಲ್ಲಿ ವೃದ್ಧಿ ಕಂಡು ಬಂದಿದೆ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ 844.25 ಕೋಟಿ ರೂ.ಗಳಷ್ಟು ವಹಿವಾಟು ನಡೆದಿದ್ದು, ಈ ಬಾರಿ ನೈಟ್ ಕಫ್ರ್ಯೂ ಹಾಗೂ ನಿಷೇಧಾಜ್ಞಾ ನಡುವೆಯೂ ಮದ್ಯದ ಮಾರಾಟದಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ. ದಿನದ ಅಂತ್ಯದೊಳಗೆ 165 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಎಂ ನರೇಂದ್ರ ಮೋದಿ ಭಾಷಣ | Narendra Modi | Bjp | PM | Speed News Kannada |

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial