ರಣವೀರ್‌ ಸಿಂಗ್‌ಗೂ ಕೊಂಕಣಿ ಕಲಿಸಿದ ದೀಪಿಕಾ ಪಡುಕೋಣೆ !

 

ವಾಷಿಂಗ್ಟನ್‌: ಮಂಗಳೂರಿನಲ್ಲಿ ಹುಟ್ಟಿ ಈಗ ಬಾಲಿವುಡ್‌ನ‌ಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಅವರು ಪತಿ ರಣವೀರ್‌ ಸಿಂಗ್‌ಗೂ ಕೊಂಕಣಿ ಕಲಿಸಿದ್ದಾರೆ. ಈ ವಿಚಾರವು ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿದುಬಂದಿದೆ.

ಅಮೆರಿಕದಲ್ಲಿನ ಕೊಂಕಣಿ ಸಮುದಾಯವು ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದಕ್ಕೆ ದೀಪಿಕಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಅದರಲ್ಲಿ ರಣವೀರ್‌ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ರಣವೀರ್‌, ಕೊಂಕಣಿಯಲ್ಲಿ ‘ನಾನು ತುಂಬಾ ಖುಷಿಯಾಗಿದ್ದೇನೆ’ ಎಂದಿದ್ದಾರೆ.

ಹಾಗೆಯೇ ‘ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ’ ಎಂದಿದ್ದಾರೆ. ಅತ್ಯಂತ ಸುಲಲಿತವಾಗಿ ಕೊಂಕಣಿ ಮಾತನಾಡಿದ ರಣವೀರ್‌ಗೆ ಚಪ್ಪಾಳೆಯ ಸುರಿಮಳೆಯೇ ಸಿಕ್ಕಿದೆ. ದೀಪಿಕಾ ಕೂಡ ಚಪ್ಪಾಳೆ ಹೊಡೆದು ಪತಿಗೆ ಪ್ರೋತ್ಸಾಹಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹಾಗೆಯೇ ಅಮೆರಿಕದಲ್ಲಿ ನಡೆದ ಶಂಕರ್‌ ಮಹದೇವನ್‌ ಕನ್ಸ್‌ರ್ಟ್‌ನಲ್ಲೂ ಜೋಡಿ ಭಾಗವಹಿಸಿ, ಹೆಜ್ಜೆ ಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುತ್ ತಂತಿ ತಗುಲಿ ಶಾಲೆಯಲ್ಲಿಯೇ ವಿದ್ಯಾರ್ಥಿನಿ ಸಾವು,

Tue Jul 5 , 2022
ಮುಖ್ಯಶಿಕ್ಷಕ ಕರ್ತವ್ಯದಿಂದ ಅಮಾನತುಗೊಳಿಸಿ ಡಿಡಿಪಿಐ ಆದೇಶ, ಶೌಲಚಾಯದಲ್ಲಿರುವ ಕಂಬದ ಸಹಾಯ ಪಡೆದು ತಮ್ಮ ಮನೆಗೆ ವಿದ್ಯುತ್ ಕಲ್ಪಿಸಿಕೊಂಡಿದ್ದ ಸ್ಥಳೀಯರು, ಕಂಬದಲ್ಲಿ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವು, ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ, ಅನುಷ್ಕಾ ಸದಾಶಿವ ಬೆಂಡೆ(೯) ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಬಾಲಕಿ, ಕುಮಾರ್ ನಾಟೇಕರ್ ಅಮಾನತ್ತಾದ ಶಾಲಾ ಮುಖ್ಯ ಶಿಕ್ಷಕ, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಡೋಣೆವಾಡಿಯಲ್ಲಿ ನಡೆದ ಘಟನೆ, ಡೋಣೆವಾಡಿ ಗ್ರಾಮದ ಸರ್ಕಾರಿ ಮರಾಠಿ ಶಾಲೆಯಲ್ಲಿ […]

Advertisement

Wordpress Social Share Plugin powered by Ultimatelysocial