ಬೆಂಗಳೂರಿನ ಶಾಲಾ-ಕಾಲೇಜುಗಳ ಸುತ್ತಾ-ಮುತ್ತಾ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ̤

ಬೆಂಗಳೂರು: ಈಗಾಗಲೇ ರಾಜ್ಯಾಧ್ಯಂತ ತಾರಕಕ್ಕೇರಿರುವಂತ ಹಿಜಾಬ್ ವಿರೋಧಿಸಿ , ಕೇಸರಿ ಶಾಲು ವಿವಾದ, ಬೆಂಗಳೂರಿಗೆ ವ್ಯಾಪಿಸೋ ಮುನ್ನಲೇ, ಸರ್ಕಾರ ಎಚ್ಚೆತ್ತುಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಶಾಲಾ-ಕಾಲೇಜುಗಳ    ಸುತ್ತಾ-ಮುತ್ತಾ 144 ಸೆಕ್ಷನ್ ಅಡಿಯಲ್ಲಿ  ) ನಿಷೇಧಾಜ್ಞೆ ಜಾರಿಗೊಳಿಸಿ, ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.ಈ ಕುರಿತಂತೆ ಆದೇಶ ಹೊರಡಿಸಿರುವಂತ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್   ಅವರು, ಇಂದಿನಿಂದ ಫೆಬ್ರವರಿ 22, 2022ರವರೆಗೆ ಶಾಲಾ-ಕಾಲೇಜುಗಳ ಸುತ್ತಾಮುತ್ತಾ ಪ್ರತಿಭಟನೆ  , ಧರಣಿ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.ಬೆಂಗಳೂರಿನ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ಕುರಿತಂತೆ ಯಾವುದೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವಂತಿಲ್ಲ. ಹೆಚ್ಚು ವಿದ್ಯಾರ್ಥಿಗಳ ಗುಂಪು ಸೇರುವಂತಿಲ್ಲ. ಶಾಲೆ, ಪಿಯು ಕಾಲೇಜು, ಡಿಗ್ರಿ ಕಾಲೇಜು, ಇತರೆ ಶಿಕ್ಷಣ ಸಂಸ್ಥೆಗಳ ಬಳಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಿಯಮ ಮೀರಿದ್ರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರ ಶರ್ಟ್ ಬಟನ್‌ಗಳು ಎಡಭಾಗದಲ್ಲಿ ಮತ್ತು ಪುರುಷರಿಗೆ ಬಲಭಾಗದಲ್ಲಿ ಏಕೆ?

Wed Feb 9 , 2022
  ನೀವು ಮಹಿಳಾ ಶರ್ಟ್ ಅನ್ನು ತೆಗೆದುಕೊಂಡರೆ, ಗುಂಡಿಗಳು ಸಾಮಾನ್ಯವಾಗಿ ಎಡಭಾಗದಲ್ಲಿರುವುದನ್ನು ನೀವು ಗಮನಿಸಬಹುದು. ಆದರೆ ನೀವು ಪುರುಷರ ಶರ್ಟ್ ಅನ್ನು ಪರಿಶೀಲಿಸಿದರೆ, ಅವರು ಬಲಭಾಗದಲ್ಲಿದ್ದಾರೆ. ವಿವಿಧ ಕಡೆ ಗುಂಡಿಗಳು ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಸರಿ, ಇದಕ್ಕೆ ಯಾವುದೇ ದೃಢಪಡಿಸಿದ ಕಾರಣವಿಲ್ಲ, ಆದರೆ ಅದೇ ಸುತ್ತ ಅನೇಕ ಸಿದ್ಧಾಂತಗಳಿವೆ. ಆಯುಧವನ್ನು ತಲುಪಲು ಪುರುಷರಿಗೆ ಸುಲಭವಾಯಿತು ಅನೇಕ ಇತಿಹಾಸಕಾರರು ಪ್ರಬಲವಾದ ಕೈಯಿಂದ ಪುರುಷರು ತಮ್ಮ ಶಸ್ತ್ರಾಸ್ತ್ರಗಳನ್ನು ತಲುಪಲು ಸುಲಭವಾಗಿದೆ ಎಂದು […]

Advertisement

Wordpress Social Share Plugin powered by Ultimatelysocial