“ಕಂಗನಾ” ಇನ್​ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಶೇರ್ ಮಾಡಿದ್ದಾರೆ.

 ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಾಕಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅದು ಡಿಲೀಟ್ ಆಗಿದೆ. ಕಾರಣವೇನು? ಅದರಲ್ಲಿ ಏನಿತ್ತು?ಬಾಳಿವುಡ್ ಬೆಡಗಿ ಕಂಗನಾ ರಣಾವತ್ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡ ಬೆನ್ನಲ್ಲೇ ಡಿಲೀಟ್ ಮಾಡಿದ್ದರು.ಅದರಲ್ಲಿ ಹೊಸ ಸಮಾಚಾರ ಒಂದಿತ್ತು. ಅದೇನು ಎಂಬುದಕ್ಕೆ ಉತ್ತರ ಏಕ್ತಾ ಕಪೂರ್ ಶೇರ್ ಮಾಡಿದ ವಿಡಿಯೋದಲ್ಲಿದೆ. ಹೌದು. ಹಿಂದಿ ಕಿರುತೆರೆ ಹಾಗೂ ಬಾಲಿವುಡ್​​ನಲ್ಲಿ ಏಕ್ತಾ ಕಪೂರ್  ದೊಡ್ಡ ಹೆಸರು. ಹಲವು ಸೂಪರ್​ ಹಿಟ್ ಧಾರವಾಹಿಗಳನ್ನು ನಿರ್ಮಿಸಿದ ಕೀರ್ತಿ ಅವರಿಗಿದೆ. ಇದೀಗ ಹೊಸ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಸೂಚ್ಯವಾಗಿ ತಮ್ಮ ಹೊಸ ಪ್ರಯತ್ನದ ಕುರಿತು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಏಕ್ತಾ ತಮ್ಮ ವಿಡಿಯೋದಲ್ಲಿ ರಿಯಾಲಿಟಿ ಶೋ   ಮಾದರಿಯ ಶೋ ಅದು ಎಂಬುದನ್ನು ಹೇಳಿದ್ದಾರೆ. ಆದರೆ ನೃತ್ಯ ಅಥವಾ ಹಾಡುಗಾರಿಕೆ ಇವುಗಳಲ್ಲಿ ಅವರಿಗೆ ಆಸಕ್ತಿ ಇಲ್ಲವಂತೆ. ಹೊಸ ಪ್ರಯತ್ನ ಇದಾಗಿರಲಿದೆ ಎಂದು ಅವರು ಹೇಳಿದ್ದಾರೆ. ಈ ಹೊಸ ಪ್ರಾಜೆಕ್ಟ್​​ಗೆ ಹಲವರು ಕಾಯುತ್ತಿದ್ದಾರೆ. ಎಲ್ಲಾ ವಿಚಾರಗಳನ್ನು ಸದ್ಯದಲ್ಲೇ ಹಂಚಿಕೊಳ್ಳಲಾಗುವುದು ಎಂದು ಏಕ್ತಾ ಹೇಳಿದ್ದಾರೆ. ಹಲವು ಮೂಲಗಳ ಪ್ರಕಾರ ಈ ಶೋನಲ್ಲಿ ಬಾಲಿವುಡ್ ಬೆಡಗಿ ಕಂಗನಾ ರಣಾವತ್ಭಾಗಿಯಾಗಲಿದ್ದಾರೆ!ಕಂಗನಾ ಪ್ರಸ್ತುತ ಹಲವು ಸಿನಿಮಾ ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಅವರು ಹೊಸ ಪ್ರಯತ್ನಕ್ಕೆ ಕೈಜೋಡಿಸಲಿದ್ದಾರೆ ಎಂಬ ಮಾಹಿತಿ ಬಾಲಿವುಡ್ ಅಂಗಳದಿಂದ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಂಗನಾ ಕೂಡ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಜತೆಗೆ ಈ ಸುದ್ದಿಯನ್ನು ನಿಜ ಎಂದಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಪೋಸ್ಟ್ ಡಿಲೀಟ್ ಮಾಡಲಾಗಿದೆ.ಕಂಗನಾ ಡಿಲೀಟ್ ಮಾಡಿದ ಪೋಸ್ಟ್​​​ನಲ್ಲಿ ಏನಿತ್ತು?ಕಂಗನಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸುದ್ದಿ ಹಂಚಿಕೊಂಡಿದ್ದರು. ‘ಲೇಡಿ ಬಾಸ್ ಏಕ್ತಾ ಕಪೂರ್​ ನಿರ್ಮಾಣದ ಶೋವನ್ನು ನಡೆಸಿಕೊಡಲಿದ್ದೇನೆ’ ಎಂದು ಅವರು ಹೇಳಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಅಧಿಕೃತವಾಗಿ ಅನೌನ್ಸ್ ಆಗುವವರೆಗೆ ವಿಷಯ ಸರ್ಪ್ರೈಸ್ ಆಗಿರಲಿ ಎಂಬ ಕಾರಣಕ್ಕೆ ಅವರು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಅಸಲಿಗೆ ಅಭಿಮಾನಿಗಳಿಗೆ ಈಗಾಗಲೇ ವಿಷಯ ಮುಟ್ಟಿದ್ದು, ಸಖತ್ ಥ್ರಿಲ್ ಆಗಿದ್ದಾರೆ.ಏನಿದು ಹೊಸ ಶೋ? ಅದು ಹೇಗಿರಲಿದೆ?ಏಕ್ತಾ ಕಪೂರ್ ನಿರ್ಮಾಣದ ಈ ಹೊಸ ಶೋ ಸಖತ್ ಕುತೂಹಲ ಹುಟ್ಟಿಸುವಂತಿದೆ. ಕಾರಣ ಅಮೇರಿಕಾದ ಜನಪ್ರಿಯ ರಿಯಾಲಿಟಿ ಶೋವಾದ ‘ಟೆಂಪ್ಟೇಶನ್ ಐಲ್ಯಾಂಡ್​’ನಂತೆಯೇ ಇದೂ ಮೂಡಿಬರಲಿದೆ ಎನ್ನಲಾಗಿದೆ. ಯುವಕರು ಮತ್ತು ಯುವತಿಯರು ಐಲ್ಯಾಂಡ್ ಒಂದರಲ್ಲಿ ಲಾಕ್ ಆಗುತ್ತಾರೆ. ಅವರಿಗೆ ವಿವಿಧ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಅದನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನೋಡಲಾಗುತ್ತದೆ. ಇದು ಈ ಶೋನ ಮೂಲ ರೂಪ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು ಖರೀದಿಗೆ ಮುಗಿಬಿದ್ದ ಜನ.! ಕಾಯುವಿಕೆ ಬುಕ್ಕಿಂಗ್‌ ಅವಧಿ 6 ತಿಂಗಳು ವಿಸ್ತರಣೆ

Thu Feb 3 , 2022
ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಗಗನಮುಖಿಯಾಗಿ ಸಾಮಾನ್ಯ ಜನರ ಜೇಬನ್ನು ಸುಡುತ್ತಿರುವಾಗ ಮಧ್ಯಮ ವರ್ಗದವರು, ನಿತ್ಯ 10-20 ಕಿ.ಮೀ. ದ್ವಿಚಕ್ರಗಳಲ್ಲಿ ಸಂಚರಿಸುವವರು ಪೆಟ್ರೋಲ್‌ಗೆ ಪರ್ಯಾಯವಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮೊರೆಹೋಗುತ್ತಿದ್ದಾರೆ. ಇದು ಅನಿವಾರ್ಯತೆಯಿಂದ ಇಡಲಾಗುತ್ತಿರುವ ಹೆಜ್ಜೆ.ಹಾಗಂತ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬೆಲೆ ಸುಮಾರು 1 ಲಕ್ಷ ರೂ. ಗಿಂತ ಕಡಿಮೆ ಏನಿಲ್ಲ. ಜತೆಗೆ ಪ್ರತಿ 2-3 ವರ್ಷಕ್ಕೆ ಬ್ಯಾಟರಿ ಬದಲಾವಣೆ ಮಾಡಬೇಕು. ಅದಕ್ಕೆ 25-30 ಸಾವಿರ ರೂ. ಕೊಡಬೇಕು..!ಹಾಗಾಗಿ, ಬಹಳಷ್ಟು ಜನರು ಸಾಲ ಮಾಡಿಯಾದರೂ […]

Advertisement

Wordpress Social Share Plugin powered by Ultimatelysocial