ಪಡುಬಿದ್ರಿ ದೈವಸ್ಥಾನದಲ್ಲಿ ಕಾಂತಾರ ಮಾದರಿ ಕಾಳಗ

ಕಾಂತಾರ ಸಿನೆಮಾದಲ್ಲಿ  ದೈವ ಮತ್ತು ಮುಂಬೈನಿಂದ ಬಂದ ಸಾಹುಕಾರನ ವಾದ ವಿವಾದ ಬಹುತೇಕ ಎಲ್ಲಾ ನೋಡಿರುತ್ತೀರಿ. ದೈವದ ಜಾಗ ಕೇಳಿದಾಗ ನಾನು ಕೊಟ್ಟ ಸುಖ ನೆಮ್ಮದಿ ಮರಳಿ ನೀಡುತ್ತೀಯಾ ಕೇಳಿದ್ದಕ್ಕೆ, ಕೋರ್ಟ್ ವಿಚಾರ ಎತ್ತಿದ್ದ ಸಾಹುಕಾರ ಕೊನೆಗೆ ಕೋರ್ಟ್ ಆವರಣದಲ್ಲೇ ರಕ್ತ ಕಾರಿ ಸಾಯುತ್ತಾನೆ.ಅದೇ ರೀತಿಯ ಪ್ರಕರಣ ಉಡುಪಿ ಜಿಲ್ಲೆಯ ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನದಲ್ಲಿ ನಡೆದಿದೆ. ದೈವಸ್ಥಾನದ ವಿರುದ್ಧ ಮೊದಲ ಬಾರಿ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ನಿಂದ ತಡೆಯಾಜ್ಞೆ ತಂದ ಮರುದಿನವೇ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದು ಕಾಕತಾಳೀಯ ಎನಿಸಿದೆ.ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನ ಊರ ಸಮಸ್ತರಿಗೆ ಭಕ್ತಿ ಮತ್ತು ನಂಬಿಕೆಯ ಮೂಲವಾಗಿತ್ತು. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯ ನೇಮೋತ್ಸವ ನಡೆಯುತ್ತಿದ್ದು ಊರವರು ಭಾಗಿಯಾಗುತ್ತಾರೆ. ಈ ದೈವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರದ ಹಪಹಪಿಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ , ಇಲ್ಲಿಯ ಸಾನದ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಹೀಗೆ 5 ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇದರಲ್ಲಿ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸ್ತಾರೆ. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸುತ್ತಾರೆ.ಈ ನಡುವೆ, ವರ್ಷಂಪ್ರತಿಯಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ, ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸುತ್ತದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಜಯ ಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ‌ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗ್ತಾರೆ.ಆಶ್ಚರ್ಯದ ಸಂಗತಿ ಎಂದರೆ ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಇವರು, ಸಮೀಪದಲ್ಲಿ ನಡೆಯುತ್ತಿದ್ದ ತಂಬಿಲ ಸೇವೆ ಸಂದರ್ಭ ಎಲ್ಲರೆದುರೇ ಸಾವನ್ನಪ್ಪಿದ್ದನ್ನು ಊರಿನ ಜನ ಮೂಕವಿಸ್ಮಿತರಾಗಿ ನೋಡುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ನೆರೆರಾಜ್ಯ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಹಕ್ಕಿಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಗಡಿಭಾಗ ಮೂಳೆಹೊಳೆಯಲ್ಲಿ ಪಶುಪಾಲನೆ ಇಲಾಖೆ ಬಿಗಿ ಕಟ್ಟೆಚ್ಚರ ವಹಿಸಿದೆ.

Sat Jan 7 , 2023
ಕೇರಳದ ಕೊಟ್ಟಾಯಂ ಜಿಲ್ಲೆಯ ಎರಡು ಹಳ್ಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ದೃಢವಾಗಿರುವ ನಿಟ್ಟಿನಲ್ಲೇ ಜ್ವರ ಕಾಣಿಸಿಕೊಂಡಿರುವ ಕೋಳಿ ಮತ್ತು ಬಾತುಕೋಳಿಗಳನ್ನ ದಮನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗುಂಡ್ಲುಪೇಟೆಯು ಕೇರಳ ಮತ್ತು ತಮಿಳುನಾಡು ಗಡಿಗಳನ್ನ ಹೊಂದಿಕೊಂಡಿರುವ ಕಾರಣ ಗಡಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಕೇರಳ ರಾಜ್ಯದಿಂದ ಒಳಬರುವ ಗೂಡ್ಸ್ ವಾಹನಗಳಿಗೆ ಹೈಮೊಕ್ಲೋರೈಡ್ ಔಷಧಿ ದ್ರಾವಣವನ್ನ ಸಿಂಪಡಿಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗ್ತಿದ್ದು ಹಕ್ಕಿಜ್ವರ ಹತೋಟಿಗೆ ಬರುವ ತನಕ ಕೇರಳದಿಂದ ರಾಜ್ಯದೊಳಗೆ ಕೋಳಿ ಸಾಗಾಣಿಕೆಯನ್ನ ನಿಷೇಧಿಸಲಾಗಿದೆ ಎಂದು ಪಶುಪಾಲನ […]

Advertisement

Wordpress Social Share Plugin powered by Ultimatelysocial