“ಕುದ್ರು”ವಿನಲ್ಲಿ ಸಾಮರಸ್ಯ ಹಾಗೂ ಸಹಬಾಳ್ವೆ.

ಉತ್ತಮ ಸಂದೇಶ ಹೊತ್ತು ಬರುತ್ತಿದೆ ಮತ್ತೊಂದು ಕರಾವಳಿ ಭಾಗದ ಚಿತ್ರ.ಇತ್ತೀಚಿಗೆ ದಕ್ಷಿಣ ಕನ್ನಡದ ಭವ್ಯ ಪರಂಪರೆಯ ಕುರಿತಾದ ಚಿತ್ರಗಳು ಹೆಚ್ಚು ಬರುತ್ತಿದೆ‌. “ಕುದ್ರು” ಸಹ ಅದೇ ಸುಂದರ ಪರಿಸರದಲ್ಲಿ ನಡೆಯವ ಕಥೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು.ನಾನು ಮೂಲತಃ ಉಡುಪಿಯವನು. ನೀರಿನಿಂದ ಸುತ್ತುವರೆದ ದ್ವೀಪವನ್ನು ತುಳುವಿನಲ್ಲಿ “ಕುದ್ರು ಎನ್ನುತ್ತಾರೆ. ಈ ಚಿತ್ರದ ಕಥೆಯನ್ನು ನಾನೇ ಬರೆದಿದ್ದೇನೆ. ಮಧು ವೈ ಜಿ ಹಳ್ಳಿ ನಿರ್ದೇಶನ ಮಾಡಿದ್ದಾರೆ. “ಕುದ್ರು” ದ್ವೀಪದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ಪಂಗಡದವರು ವಾಸಿಸುತ್ತಿರುತ್ತಾರೆ. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಈ ರೀತಿಯಲ್ಲಿ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಡುಪಿ, ಬೆಂಗಳೂರು, ಗೋವಾ ಹಾಗೂ ಸೌದಿ ಅರೇಬಿಯಾದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇಂದು ಅಭಿಮಾನ್ ಸ್ಟುಡಿಯೋದಲ್ಲಿ ಹಾಡಿನ ಚಿತ್ರೀಕರಣ ಮಾಡಿತ್ತಿದ್ದೇವೆ. ಈ ಹಾಡಿಗೆ ಹೆಜ್ಜೆ ಹಾಕಲು ದೂರದ ದೆಹಲಿಯಿಂದ ನಟಿ ನಮ್ರತಾ ಮಲ್ಲ ಬಂದಿದ್ದಾರೆ ಎಂದರು ನಿರ್ಮಾಪಕ ಹಾಗೂ ಕಥೆಗಾರ ಭಾಸ್ಕರ್ ನಾಯಕ್.”ಕುದ್ರು” ನನ್ನ ಮೊದಲ ನಿರ್ದೇಶನದ ಚಿತ್ರ. ಒಂದು ಸಣ್ಣ ದ್ವೀಪದಲ್ಲಿ ಬೇರೆಬೇರೆ ಸಮುದಾಯದವರು ಸಾಮರಸ್ಯದಿಂದ ಬಾಳುತ್ತಿದಾಗ, ಒಂದು ವಾಟ್ಸಾಪ್ ಸಂದೇಶ ಹೇಗೆ ಅಶಾಂತಿಯನ್ನು ತಂದು ಹಾಕುತ್ತದೆ ಹಾಗೂ ಬಂದ ತೊಂದರೆಯನ್ನು ನಿವಾರಣೆ ಮಾಡಿಕೊಂಡು‌ ಮತ್ತೆ ಸಾಮರಸ್ಯದಿಂದ ಹೇಗೆ ಜೀವನ ನಡೆಸಬಹುದು ಎಂಬುದನ್ನು “ಕುದ್ರು” ಚಿತ್ರದಲ್ಲಿ ತೋರಿಸುತ್ತಿದ್ದೇವೆ. ಹರ್ಷಿತ್ ಶೆಟ್ಟಿ, ಗಾಡ್ವಿನ್ ಹಾಗೂ ಫರ್ಹಾನ್ ಚಿತ್ರದ ನಾಯಕರಾಗಿ ನಟಿಸಿದ್ದು, ಪ್ರಿಯಾ ಹೆಗ್ಡೆ, ವಿನುತ ಹಾಗೂ ಡೈನ ಡಿಸೋಜ ನಾಯಕಿಯಾಗಿ ಅಭಿನಯಿಸಿದ್ದಾರೆ. ಮೂವರು ನಾಯಕರು ನಮ್ರತಾ ಅವರೊಂದಿಗೆ ಅಭಿನಯಿಸುತ್ತಿರುವ ಈ ಹಾಡಿನ ಚಿತ್ರೀಕರಣದೊಂದಿಗೆ ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ.‌ ಪ್ರತೀಕ್ ಕುಂಡು ಸಂಗೀತ ನಿರ್ದೇಶನ ಹಾಗೂ ದೀಪು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎಪ್ಪತ್ತಕ್ಕೂ ಅಧಿಕ ಭಾಗದ ಚಿತ್ರೀಕರಣ ರೈನ್ ಎಫೆಕ್ಟ್ ನಲ್ಲೇ ನಡೆದಿರುವುದು ಚಿತ್ರದ ವಿಶೇಷ ಎಂದರು ನಿರ್ದೇಶಕ ಮಧು ವೈ ಜಿ ಹಳ್ಳಿ.ನಾನು ಈ ಚಿತ್ರದಲ್ಲಿ ತುಂಟ ಮುಸ್ಲಿಂ ಸಮುದಾಯದ ಹುಡುಗಿಯಾಗಿ ಸಕಲೇಶಪುರದ ಡೈನ ಡಿಸೋಜ, ಬ್ರಾಹ್ಮಣ ಹುಡುಗನಾಗಿ ಹರ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಕ್ರಿಶ್ಚಿಯನ್ ಹುಡುಗನ ಪಾತ್ರಧಾರಿ ಗಾಡ್ವಿನ್ ಹಾಗೂ ಮುಸ್ಲಿಂ ಹುಡುಗನ ಪಾತ್ರದಲ್ಲಿ ಪಾತ್ರದಲ್ಲಿ ಅಭಿನಯಿಸಿರುವ ಫರ್ಹಾನ್ ಹಾಗೂ ಚಿತ್ರದಲ್ಲಿ ಬ್ರಾಹ್ಮಣ ಹುಡುಗಿ ಪಾತ್ರಧಾರಿ ನಾಯಕಿ ಪ್ರಿಯಾ ಹೆಗ್ಡೆ ತಮ್ಮ ಪಾತ್ರದ ಕುರಿತು ಮಾತನಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಸವಕಲ್ಯಾಣ ಶಾಸಕ ಶರಣು ಸಲಗರ್ ಮುಂದೆಯೆ ನಗರಸಭೆ ಸದಸ್ಯರ ಪರಸ್ಪರ ಕಿತ್ತಾಟ‌‌..

Thu Dec 8 , 2022
ನಗರ ಸಭೆಯ ತುರ್ತು ಸಾಮಾನ್ಯ ಸಭೆಯಲ್ಲಿ ನಗರ ಸಭೆಯ ಸದಸ್ಯರ ಮಧ್ಯೆ ವಾಗ್ವಾದಎಸ್ ಎಫ್ ಸಿ ಮತ್ತು 15ನೆ ಹಣಕಾಸಿನ ಯೊಜನೆಯ ಕ್ರಿಯಾ ಯೊಜನಗೆ ಸಂಭಂದ ಸದಸ್ಯರ ಕಿತ್ತಾಟ ನಡೆದಿದೆಅನುದಾನವನ್ನು 31 ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು ಸೆರಿ 36 ವಾರ್ಡುಗಳಲ್ಲಿ ಸಮನಾಗಿ ಹಂಚಬೆಕು ಎಂದು ನಗರ ಸಭೆ ಅಧ್ಯಕ್ಷೆ ಶಹಜಾನ್ ಶೇಖ್ ತನ್ವೀರ್ ತಿಳಿಸಿದರುಆದರೆ ಇದಕ್ಕೆ ಕೆಲ ಸದಸ್ಯರು ಸಮ್ಮತಿ ನಿಡೀದರೆ ಇನ್ನು ಕೆಲವು ಸದಸ್ಯರು ಅಕ್ಷೆಪಿಸಿದರು ಈ […]

Advertisement

Wordpress Social Share Plugin powered by Ultimatelysocial