ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ.

ಕಾಂಗ್ರೆಸ್ ಪಕ್ಷದ ವತಿಯಿಂದ ಬರುವ ಜನೇವರಿ 11 ರಿಂದ ಪ್ರಜಾಧ್ವನಿ ಆರಂಭವಾಗಲಿದೆ ಎಂದು ಕಾಂಗ್ರೆಸ್’ನ ಹಿರಿಯ ನಾಯಕ ,ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಹೇಳಿದ್ದಾರೆ.

ಬಾಗಲಕೋಟೆಯ ನವನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು,ಈ ಮಾಹಿತಿಯನ್ಮ ನೀಡಿದ್ದಾರೆ.

ಜನವೇರಿ‌11 ರಂದು ಬೆಳಗಾವಿಯ ಟಿಳಕ್ ವಾಡಿಯಿಂದ ಬಸ್ ಮೂಲಕ ಈ ಅಭಿಯಾನ ಆರಂಭವಾಗಲಿದೆ ಎಂದು ತಿಳಿಸಿದ್ರು.

ಬೆಳಗಾವಿಯ ಟಿಳಕ್ ವಾಡಿಗಿ ಈ ಹಿಂದೆ 1924ರಲ್ಲಿ ಮಹಾತ್ಮಾಗಾಮಧಿಯವರು ಭೆಟಿ‌ನೀಡಿದ ಸ್ಥಳದಲ್ಲಿ ಮಹಾತ್ಮಾ ಗಾಂಧಯವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಅಂದು ಬ್ರಿಟಿಷರನ್ನ ತೊಲಗಿಸಿ ಎಂಬ ಘೋಷ ವಾಕ್ಯದಂತೆ,ಇಂದು ಬಿಜೆಪಿ ತೊಲಗಿಸಿ ಎಂಬ ಘೋಷದೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ರು.

ರಾಜ್ಯದೆಲೆಡೆ ಪ್ರಜಾಧ್ವನಿ ಅಭಿಯಾನ ಆರಂಭವಾಗಲಿದೆ ಎಂದು ತಳಿಸಿದ ಅವರಯ

ಜನೇವರಿ 18.ರಂದು ಬಾಗಲಕೋಟೆಯ ನವನಗರದ ಕಾಳಿದಾಸ ಮೈದಾನದಲ್ಲಿ ಸಮಾವೇಶವಮ್ನ ಆಯೋಜಿಸಲಾಗಿದೆ ಎಂದು ತಿಳಿಸಿದ್ರು..

ಮಾಜಿ ಸಿಎಂ ಸಿದ್ಧರಾಮಯ್ಯನವರು ಸೇರಿ, ರಾಜ್ಯದ ಘಟಾನುಘಟಿ ನಾಯಕರು ,ಎಲ್ಲ ಪ್ರಮುಖರು ಬಸ್ ಮೂಲಕ ಅಭಿಯಾನದಲ್ಲಿ ಭಾಗಿಯಾಗಿ ಜನೇವರಿ‌ 18‌ರಂದು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದ್ರು.

ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಪ್ರದರ್ಶನ ಹಾಗೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನ ಮನೆಮನೆಗಳಿಗೆ ತಲುಪಿಸಲು ಈ ಅಭಿಯಾನ ಆಯೋಜಿಸಲಾಗಿದೆ ಎಂದರು.

ಜನೇವರಿ‌28ರ ವರೆಗೆ ರಾಜ್ಯಾದ್ಯಂತ ಈ ಅಭಿಯಾನ ಜರುಗಲಿದೆ ಎಂದು ಮಾಹಿತಿ ನೀಡಿದ್ರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ್,ಮಾಜಿ ಸಚಿವ ಹೆಚ್.ವೈ.ಮೇಟಿ,ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ್,ಮಾಜಿ ಶಾಸಕ ಜೆ.ಟಿ.ಪಾಟೀಲ್,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಬಸ್ ಯಾತ್ರೆ ಆರಂಭ ವಿಚಾರ.

Mon Jan 9 , 2023
ಬಸ್ ಯಾತ್ರೆಯ ಸಮನ್ವಯ ಸಮೀತಿ ಅಧ್ಯಕ್ಷ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ. ಜನೇವರಿ ೧೧ ರಿಂದ ಪ್ರಜಾಧ್ವನಿ ಬಸ್ ಯಾತ್ರಾ ಅಭಿಯಾನ ಆರಂಭ. ಬೆಳಗಾವಿಯ ಟಿಳಕ್ ವಾಡಿಯಿಂದ ಬಸ್ ಯಾತ್ರೆ ಆರಂಭವಾಗಲಿಗೆ. ಬಸ್ ಮೂಲಕ ಈ ಯಾತ್ರೆ ಹೊರಡಲಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ಕೇಂದ್ರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿಂದೆ ೧೯೨೪ರಲ್ಲಿ ಮಹಾತ್ಮಾ ಗಾಂಧಿ, ಬೆಳಗಾವಿಯ ತಿಳಕವಾಡಿಗೆ ಭೇಟಿ ಕೊಟ್ಟ ಸ್ಥಳದಿಂದ ಅಭಿಯಾನ ಆರಂಭ ವಾಗಲಿದೆ […]

Advertisement

Wordpress Social Share Plugin powered by Ultimatelysocial