ಕಸದ ಬುಟ್ಟಿಯಲ್ಲೂ ಚಿನ್ನ, ಬೆಳ್ಳಿ – ಖಾಲಿ ಸೈಟ್ ನಲ್ಲೂ ಕಂತೆ ಕಂತೆ ಹಣ..

 

ಇಂದು ಬೆಳಿಗ್ಗೆ ರಾಜ್ಯದ 75 ಕಡೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೂರು ಸ್ಥಳ ಸೇರಿದಂತೆ ರಾಜ್ಯದ 75 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ 200ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

 

ಈ ದಾಳಿ ವೇಳೆ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುತ್ತಿದ್ದು, ರಾಯಚೂರಿನ ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್‌ ನ ಸಹಾಯಕ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿರುವ ಅಶೋಕ್‌ ರೆಡ್ಡಿ ಪಾಟೀಲ್‌ ಅವರ ಮನೆಯಲ್ಲಿ ಆಪಾರ ಪ್ರಮಾಣದ ನಗ – ನಗದು ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿವೆ ಎನ್ನಲಾಗಿದೆ.

ಅಶೋಕ್‌ ರೆಡ್ಡಿಯವರ ಮನೆಯಲ್ಲಿದ್ದ ಕಸದ ಬುಟ್ಟಿಯಲ್ಲೂ ಚಿನ್ನ – ಬೆಳ್ಳಿ ಪತ್ತೆಯಾಗಿದ್ದು, ರಾಯಚೂರಿನ ಬಸವೇಶ್ವರ ನಗರದಲ್ಲಿರುವ ಇವರ ಮನೆ ಪಕ್ಕದ ಖಾಲಿ ಸೈಟ್‌ ನಲ್ಲೂ 100 ರೂ. ಹಾಗೂ 500 ರೂ. ನೋಟುಗಳು ಸಿಕ್ಕಿವೆ ಎನ್ನಲಾಗಿದೆ.

ಅಶೋಕ್‌ ರೆಡ್ಡಿಯವರ ಪತ್ನಿ ಪದೇ ಪದೇ ಕಸದ ಬುಟ್ಟಿಯನ್ನು ನೋಡುತ್ತಿದ್ದ ಕಾರಣ ಅನುಮಾನಗೊಂಡ ಎಸಿಬಿ ಅಧಿಕಾರಿಗಳು ಅದನ್ನು ಪರಿಶೀಲಿಸಿದಾಗ ಚಿನ್ನ – ಬೆಳ್ಳಿ ಪತ್ತೆಯಾಯ್ತು ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು : ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ

Wed Mar 16 , 2022
ರಾಮನಗರ : ಹಿಜಾಬ್ ವಿಚಾರದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮನವಿ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದ ಕುರಿತಂತೆ ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.   ಕಾನೂನನ್ನು ಎಲ್ಲರೂ ಪಾಲಿಸಬೇಕು. ಧರ್ಮದ ಆಧಾರದ ಮೇಲೆ ಸರ್ಕಾರ ತಾರತಮ್ಯ ಮಾಡಿಲ್ಲ. ಸಮವಸ್ತ್ರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸ್ಪಷ್ಟ ಕಾನೂನು ರೂಪಿಸಲಾಗಿತ್ತು. ಇದಕ್ಕೆ ಕೆಲವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿನ್ನೆಲೆ ಗೊಂದಲ […]

Advertisement

Wordpress Social Share Plugin powered by Ultimatelysocial