ದೇಹದ ತೂಕ ಕಡಿಮೆ ಮಾಡುವಲ್ಲಿ ನಿಂಬೆಹಣ್ಣು ಸಹಕಾರ ಮಾಡುತ್ತದೆ!!!!!

ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ನಿಂಬೆರಸ ಬೆರೆಸಿ ಕುಡಿಯುತ್ತಾ ಬಂದರೆ ಶೀಘ್ರವಾಗಿ ಶರೀರದ ತೂಕ ಕಡಿಮೆಯಾಗುತ್ತದೆ. ನಿಂಬೆಹಣ್ಣಿನಲ್ಲಿ ಅಧಿಕವಾಗಿ ಸಿಟ್ರಿಕ್ ಆಸಿಡ್ ಇದೆ. ಈ ಸಿಟ್ರಿಕ್ ಆಸಿಡ್ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.ಕಬ್ಬಿನ ಹಾಲಿಗೆ ನಿಂಬೆರಸ ಮತ್ತು ಎಳನೀರು ಸೇರಿಸಿ ಕುಡಿದರೆ ಮೂತ್ರಕಟ್ಟು ನಿವಾರಣೆಯಾಗುತ್ತದೆ.ದೇಹದಿಂದ ಬರುವ ದುರ್ಗಂದವನ್ನು ನಿವಾರಿಸಲು ಕೆಲವು ದಿನ ಸ್ನಾನಕ್ಕೆ ಅರ್ಧಗಂಟೆಯ ಮೊದಲು ನಿಂಬೆರಸವನ್ನು ತೆಂಗಿನೆಎಣ್ಣೆಯಲ್ಲಿ    ಬೇರಸಿ ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಇನ್ನು ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಪೆಕ್ಟಿನ್ ಫೈಬರ್ ವಿಟಮಿನ್ ಎ ಹೆಚ್ಚು ಪ್ರಮಾಣದಲ್ಲಿದೆ.ನಿಂಬೆ ಹಣ್ಣಿನ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆ ದೂರಾಗುತ್ತದೆ.ವಿಟಮಿನ್ ಸಿ ಹೇರಳವಾಗಿರುವುದರಿಂದ ದೇಹದ ಶಕ್ತಿ ಹೆಚ್ಚಿಸುತ್ತದೆ. ಜೀರ್ಣ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ನಿಂಬೆಹಣ್ಣಿನ ರಸವನ್ನು ಮೊಣಕೈ ಕಪ್ಪಾಗಿರುವಲ್ಲಿ ತಿಕ್ಕಿದರೆ ಕಪ್ಪು ಹೊಗುತ್ತದೆ.ಬ್ಯಾಕ್ಟೀರಿಯಾದಿಂದ ಉಂಟಾಗುವ ಉದರ ಸಂಬಂಧಿ ರೋಗಗಳಿಗೆ ನಿಂಬೆ ಹಣ್ಣು ರಾಮಭಾಣ.ನಿಂಬೆಹಣ್ಣು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ.ನಿಂಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಿದುಳಿನ ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ನಿಂಬೆರಸ 1 ಚಮಚ, ಬೆಟ್ಟದ ನಿಲ್ಲಿಕಾಯಿರಸ 1ಚಮಚ ಇವೆರಡನ್ನು ಸೇರಿಸಿ ಪ್ರತಿ ದಿನ ಮಲಗುವ ಮುನ್ನ ತಲೆಯ ಬುಡಕ್ಕೆ ತಿಕ್ಕಿದರೆ ಕೂದಲು ಉದುರುವುದು, ಕೂದಲು ಬೆಳ್ಳಗಾಗುವುದು ನಿಲ್ಲುತ್ತದೆ. ಕೂದಲಿಗೆ ಹೊಳಪು ಬರುತ್ತದೆ.ನಿಂಬೆಹಣ್ಣಿನ ಬೀಜವನ್ನು ಅರೆದು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ, ಬಕ್ಕತಲೆ ಸಮಸ್ಯೆ ನಿವಾರಣೆಯಾಗುತ್ತದೆ.ಕೂದಲು ಸೊಂಪಾಗಿ ಬೆಳೆಯಲು ತೆಂಗಿನ ಎಣ್ಣೆಗೆ ನಿಂಬೆರಸವನ್ನು ಸೇರಿಸಿ  ಕುದಿಸಿ ನೀರಿನಂಶವೆಲ್ಲ ಇಂಗಿದ ನಂತರ ಪ್ರತಿದಿನ ಉಪಯೋಗಿಸಬೇಕು.ಇನ್ನು ಚರ್ಮ ಸಮಸ್ಯೆಗಳಿಗೂ ಕೂಡ ನಿಂಬೆಹಣ್ಣನ್ನು ಮನೆ ಮದ್ದಾಗಿ ಉಪಯೋಗಿಸಬಹುದು.ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ.ನಿಂಬೆಹಣ್ಣಿನ ಸಿಪ್ಪೆಯನ್ನು ಹಣೆಗೆ ತಿಕ್ಕುತಿದ್ದರೆ ತಲೆನೋವು ಕಡಿಮೆಯಾಗುತ್ತದೆ.ಜೇನುತುಪ್ಪವನ್ನು 1 ಚಮಚ ನಿಂಬೆರಸದೊಂದಿಗೆ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.ದೂರ ಪ್ರಯಾಣದ ಸಂದರ್ಭದಲ್ಲಿ ವಾಕರಿಕೆ ಮತ್ತು ತಲೆಸುತ್ತು ಸಮಸ್ಯೆಗೆ ನಿಂಬೆಹಣ್ಣನ್ನು ಮೂಸುತ್ತಿರಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಬುಲ್ಸ್​ಗೆ ದಾಖಲೆ ಗೆಲುವು :61-22 ಅಂಕಗಳಿಂದ ಸೋತ ಡೆಲ್ಲಿ...

Thu Jan 13 , 2022
ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಮೊದಲ ಬಾರಿಗೆ ಈ ಸೀಸನ್​ನಲ್ಲಿ ಪಂದ್ಯವೊಂದರಲ್ಲಿ 20 ಅಂಕಗಳ ಗಡಿದಾಟಿದರು  ಪವನ್ 27 ರೇಡ್​ಗಳಿಂದ 27 ಅಂಕ ಕಲೆಹಾಕಿದರು .. ನವೀನ್ ಅನುಪಸ್ಥಿತಿಯಲ್ಲಿ ಇಂದು ಬೆಂಗಳೂರು ಬುಲ್ಸ್ ವಿರುದ್ಧ ಆಡಿದ ದಬಂಗ್ ಡೆಲ್ಲಿ ಹೀನಾಯವಾಗಿ ಸೋಲಪ್ಪಿತು. ಮಿಂಚಿನಂತೆ ರೇಡ್ ಮಾಡಿ ಅಂಕಗಳ ಮೇಲೆ ಅಂಕಗಳನ್ನ ಕಲೆ ಹಾಕುತ್ತಿದ್ದ  ನವೀನ್ ಇಲ್ಲದೆ ದಬಂಗ್ ಡೆಲ್ಲಿ ಒಂದೊಂದು ಅಂಕ ಗಳಿಸಲೂ ಪರದಾಡುವಂತಾಗಿತ್ತು . ಈ ಮೂಲಕ […]

Advertisement

Wordpress Social Share Plugin powered by Ultimatelysocial