ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಾಬ್ ಮೊದಲಿನಿಂದಲೂ‌ ಹಾಕ್ತಿದ್ರು: ಸಿದ್ದರಾಮಯ್ಯ ಆಕ್ರೋಶ

 

ಬೆಂಗಳೂರು: ಉಡುಪಿಯಲ್ಲಿಯ ಹಿಜಾಬ್ ಮತ್ತು ಕೇಸರಿ ಸಂಘರ್ಷದ ಕುರಿತು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಗೇಟ್ ಹಾಕುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳನ್ನ ಕಾಲೇಜಿಗೆ ತಡೆದಿದ್ದಾರೆ.ಕೇಸರಿ ಶಾಲು ಹಾಕಿ ಬಿಜೆಪಿ ಬೇಕೆಂದೇ ಮಾಡಿದೆ. ವಿಷಯಾಂತರ ಮಾಡೋಕೆ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿತ ಮಾಡುವ ಹುನ್ನಾರ ಇದಾಗಿದೆ. ಸ್ಕಾರ್ಫ್ ಹಾಕೋದು ಅವರ ಧಾರ್ಮಿಕ ನಿಯಮ. ಎಷ್ಟೋ ವರ್ಷಗಳಿಂದ ನಡೆಯುತ್ತಾ ಬರ್ತಿದೆ. ಈಗ ಯಾಕೆ ಇದನ್ನ ತಂದಿರೋದು. ಸರ್ಕಾರಿ ಕಾಲೇಜ್ ಪ್ರಿನ್ಸಿಪಾಲ್ ತಡೆಯೋದು ಸರಿಯೇ ಎಂದು ಪ್ರಶ್ನೆ ಮಾಡಿದರು. ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡೋ ಪ್ರಯತ್ನ ಮಾಡಲಾಗುತ್ತಿದೆ. ಅವನ್ಯಾರೋ ರಘುಪತಿ ಭಟ್ ಹೇಳಿದ ಅಂತ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಾಬ್ ಮೊದಲಿನಿಂದಲೂ‌ ಹಾಕುತ್ತಿದ್ದರು. ಕೋರ್ಟ್ ನಲ್ಲಿ ವಿಚಾರಣೆಯಿದೆ. ನಾನು ಲಾಯರ್,ಪ್ರತಿಪಕ್ಷ ನಾಯಕನಾಗಿಯೇ ಹೇಳ್ತಿದ್ದೇನೆ. ಕೇಸರಿ ಶಾಲು ಹಾಕೋದು ನಿನ್ನೆ, ಮೊನ್ನೆಯಿಂದ ಬಂದಿರೋದು. ಹಿಜಾಬ್ ಹಿಂದಿನಿಂದಲೂ ಇದೆ. ಸಂಘ ಪರಿವಾರದ ಪ್ರಯೋಗಾಲಯ ಕರಾವಳಿ ಪ್ರದೇಶ, ಎಲೆಕ್ಷನ್ ಹತ್ತಿರ ಬಂದಾಗ ಇಂತಹ ವಿಷಯಗಳನ್ನು ಮುನ್ನಲೆ ತರಲಾಗುತ್ತದೆ. ಕೊರ್ಟ್ ನ ಡಿಸಿಷನ್ ನೋಡಿಕೊಂಡು ನಾವು ಅಸೆಂಬ್ಲಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

TEAM INDIA:"ಜನರು ನನಗೆ "ನೋಡು, ಅವರು ನಿಮ್ಮ ಎಲ್ಲ ಯುವಕರಲ್ಲಿ ಅತ್ಯಂತ ಭರವಸೆಯ ವ್ಯಕ್ತಿ" ಎಂದು ಹೇಳಿದರು: ಭಾರತದ 22 ವರ್ಷದ ಉದಯೋನ್ಮುಖ ತಾರೆ ಗವಾಸ್ಕರ್;

Fri Feb 4 , 2022
ಕಳೆದೆರಡು ವರ್ಷಗಳಲ್ಲಿ, ಭಾರತ ಕ್ರಿಕೆಟ್ ತಂಡವು ಹಲವಾರು ಚೊಚ್ಚಲ ಆಟಗಾರರಿಗೆ ಕ್ಯಾಪ್‌ಗಳನ್ನು ಹಸ್ತಾಂತರಿಸಿದೆ. ಮೊಹಮ್ಮದ್ ಸಿರಾಜ್‌ನಿಂದ ಸೂರ್ಯಕುಮಾರ್ ಯಾದವ್‌ನಿಂದ ಶುಭಮನ್ ಗಿಲ್‌ನಿಂದ ಶಾರ್ದೂಲ್ ಠಾಕೂರ್‌ವರೆಗೆ. ಭರವಸೆಯ ಭಾರತೀಯ ಯುವಕರು ತಮ್ಮ ಮೇಲೆ ಪ್ರಭಾವ ಬೀರುವ ಯಾವುದೇ ಸಾವು ಸಂಭವಿಸಿಲ್ಲ, ಅದು ಆಯ್ಕೆದಾರರಿಗೆ ತಲೆನೋವನ್ನು ಉಂಟುಮಾಡಲು ಪ್ರಾರಂಭಿಸಿದೆ. ಭಾರತದ ಬೆಂಚ್ ಬಲದಲ್ಲಿನ ಈ ಅಪಾರ ಆಳದಿಂದಾಗಿ, ಕಳೆದ ವರ್ಷದ ಆಗಸ್ಟ್‌ನಲ್ಲಿ, ಭಾರತವು ವಿಶ್ವದ ಎರಡು ವಿಭಿನ್ನ ಭಾಗಗಳಲ್ಲಿ ಪ್ರತ್ಯೇಕ ತಂಡಗಳನ್ನು ಕಣಕ್ಕಿಳಿಸಿತು, […]

Advertisement

Wordpress Social Share Plugin powered by Ultimatelysocial