ಕಾಲು ಜಾರಿ ಬಿದ್ದು ಯುವಕನ ಸಾವು

ಪಾರಿವಾಳ ಹಿಡಿಯಲು ಹೋಗಿ ದೇವಸ್ಥಾನದ ವಿಮಾನ ಗೋಪುರದ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದು ಯುವಕ ಸಾವು. ವಡ್ಡಗೆರೆ ಗ್ರಾಮದಲ್ಲಿರುವ ಶ್ರೀ ವೀರನಾಗಮ್ಮ ದೇವಾಲಯದ ವಿಮಾನ ಗೋಪುರದ ಮೇಲಿಂದ ಪಾರಿವಾಳ ಹಿಡಿಯಲು ಹೋದ ಯುವಕ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವಾಲಯದ ಆವರಣದಲ್ಲಿ ನಡೆದಿದೆ. ಯುವಕ ಕೊರಟಗೆರೆ ಪಟ್ಟಣದ ನಿವಾಸಿ ಆನಂದ್ 21 ವರ್ಷ ಎಂದು ತಿಳಿದುಬಂದಿದೆ.ಯುವಕನ ಶವವನ್ನು ಕೊರಟಗೆರೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ವಿಷಯ ತಿಳಿದ ತಕ್ಷಣ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ,ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :ಗುಡಿಸಲಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ

Please follow and like us:

Leave a Reply

Your email address will not be published. Required fields are marked *

Next Post

ಸ್ವಂತ ಭಾವನನ್ನೇ ಹತ್ಯೆಗೈದ ಭಾಮೈದ

Mon Feb 15 , 2021
ಅಕ್ಕನ ಜೊತೆ ಪದೇ ಪದೇ ಗಲಾಟೆ ಮಾಡುತ್ತಿದ್ದ ಬಾವನ ಮೇಲೆ ರೊಚ್ಚಿಗೆದ್ದ ಬಾಮೈದ ನಿನ್ನೆ ರಾತ್ರಿ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಗರದ ನಂದಿನಿ ಲೇಔಟ್ನಲ್ಲಿ ನಡೆದಿದೆ. ಖಾಸಗಿ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತಿದ್ದ ಅಜೀಮ್ ಹಲವು ವರ್ಷಗಳ ಹಿಂದೆ ಖಾದರ್ ಸಹೋದರಿಯನ್ನು ಮದುವೆಯಾಗಿದ್ದ. ದಂಪತಿಗಳ ನಡುವೆ ನಿನ್ನೆ ಜಗಳ ನಡೆದಿದ್ದು ಅಕ್ಕನ ಬಾವ ಗಲಾಟೆ ವಿಷಯ ಅರಿತ ಆರೋಪಿ ಖಾದರ್ ತಾನು ವಾಸವಿದ್ದ ಕೂಲಿ […]

Advertisement

Wordpress Social Share Plugin powered by Ultimatelysocial