ಅಕ್ಷಿತ್ ಶಶಿಕುಮಾರ್ ಅದಿತಿಪ್ರಭುದೇವ ಅಭಿನಯದ “ಖೆಯೊಸ್” ಚಿತ್ರ ಫೆಬ್ರವರಿ 17 ರಂದು ತೆರೆಗೆ.

 

THE BLACK PEBBLE ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ನಿರ್ಮಿಸಿರುವ “ಖೆಯೊಸ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಹಾಗೂ ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸಿದ್ದಾರೆ. ಶಶಿಕುಮಾರ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದು, ತಂದೆ – ಮಗ ಇಬ್ಬರೂ ಒಟ್ಟಿಗೆ ಅಭಿನಯಿಸಿರುವ ಮೊದಲ ಚಿತ್ರವಿದು. ಆರ್ ಕೆ ಚಂದನ್, ಸಿದ್ದು ಮೂಲಿಮನಿ ಮೊದಲಾದವರು ,ತಾರಾಬಳಗದಲ್ಲಿದ್ದಾರೆ.

ಡಾ.ಜಿ.ವಿ.ಪ್ರಸಾದ್ “ಖೆಯೊಸ್” ಚಿತ್ರದ ನಿರ್ದೇಶಕರು. ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಇದೊಂದು ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಮರ್ಡರ್ ಮಿಸ್ಟರಿ ಜಾನರ್ ಎನ್ನಬಹುದು. ಮನಸ್ಸಿನಲ್ಲಾಗುವ ಗೊಂದಲ, ಅಸ್ತವ್ಯಸ್ತ ಇವುಗಳಿಗೆ “ಖೆಯೊಸ್” ಎನ್ನುತ್ತಾರೆ. ಫೆಬ್ರವರಿ 17 ಚಿತ್ರ ತೆರೆಗೆ ಬರಲಿದೆ. ಜನವರಿ 26 ರಂದು “ಖೆಯೊಸ್” ಚಿತ್ರದ ತುಣುಕು ಬಿಡುಗಡೆಯಾಗಲಿದೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಜಿ.ವಿ.ಪ್ರಸಾದ್.

ವಿ.ನಾಗೇಂದ್ರ ಪ್ರಸಾದ್ ಹಾಗೂ ಜಿ.ವಿ.ಪ್ರಸಾದ್ ಬರೆದಿರುವ ಮೂರು ಹಾಡುಗಳು ಚಿತ್ರದಲ್ಲಿದ್ದು, ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ದಿಲೀಪ್ ಕುಮಾರ್, ಸಂದೀಪ್ ವಳ್ಳೂರಿ ಛಾಯಾಗ್ರಹಣ ಹಾಗೂ ಮಧು ತುಂಬಿಕೆರೆ, ವೆಂಕಿ ಯುಡಿವಿ ಸಂಕಲನವಿರುವ “ಖೆಯೊಸ್” ಚಿತ್ರಕ್ಕೆ ಚೇತನ್ ಡಿಸೋಜ , ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಿಥುನ ರಾಶಿ ಭವಿಷ್ಯ.

Mon Jan 23 , 2023
ನಿಮ್ಮ ಆರೋಗ್ಯ ಸುಧಾರಿಸವುದನ್ನು ಪ್ರಾರಂಭಿಸಲು ಅತ್ಯುತ್ತಮ ದಿನ. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ನಿಮ್ಮ ಸಂಗಾತಿ ಬೆಂಬಲ ನೀಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ. ನಿಮ್ಮ ಸಂಗಾತಿಗೆ ಸಾಕಷ್ಟು ಗಮನ ನೀಡಲಾಗದಿದ್ದಲ್ಲಿ ಅದು ಅವರ ಅಸಮಾಧಾನಕ್ಕೆ ಕಾರಣವಾಗಬಹುದು. ಸಣ್ಣ ವ್ಯಾಪಾರ ಮಾಡುವ ಈ ರಾಶಿಚಕ್ರದ ಜನರಿಗೆ ಇಂದು ನಷ್ಟವಾಗಬಹುದು. ಆದಾಗ್ಯೂ ನೀವು ಚಿಂತಿಸಬೇಕಾಗಿಲ್ಲ, ನಿಮ್ಮ ಪರಿಶ್ರಮ ಸರಿಯಾದ ದಿಕ್ಕಿನಲ್ಲಿ ಇದ್ದರೆ ನೀವು ಖಂಡಿತವಾಗಿಯೂ […]

Advertisement

Wordpress Social Share Plugin powered by Ultimatelysocial