ಸಂಕ್ಷಿಪ್ತ ಭಾವ ಅರ್ಜುನನು ವಿರಾಟನ ಗೋವುಗಳನ್ನು ಸೆರೆಯಿಂದ ಬಿಡಿಸಿದ್ದು.

 
ಯುದ್ಧಕ್ಕೆ ಸಿದ್ಧನಾಗಿ ಬಂದ ಅರ್ಜುನನನ್ನು ಕಂಡ ದ್ರೋಣರು ಭೀಷ್ಮನಿಗೆ ತಮ್ಮ ಕಡೆ ಆಗುತ್ತಿರುವ ಅಪಶಕುನಗಳ ಬಗ್ಗೆ ಹೇಳಿದರು. ನಾವು ಗೋವುಗಳನ್ನು ಸೆರೆ ಹಿಡಿದದ್ದೇ ತಪ್ಪು. ಈಗ ಪಾರ್ಥ ಬಂದಿದ್ದಾನೆ ಎಂದು ಚಿಂತಿತರಾದರು. ಆಗ ಕರ್ಣನು ಅವರನ್ನು ಮೂದಲಿಸಿದನು. ಪಾರ್ಥನನ್ನು ಹೊಗಳಿದ್ದು ಅವನಿಗೆ ಹಿಡಿಸಲಿಲ್ಲ. ಇವರುಗಳನ್ನು ಅವನು ಖೂಳರು, ದುಶ್ಚರಿತರು ಎಂದು ಬಯ್ದನು. ಆಗ ಕೋಪಗೊಂಡ ಕೃಪಾಚಾರ್ಯರು ಕರ್ಣನ ಮೇಲೆ ಹರಿಹಾಯ್ದರು. ಅದಕ್ಕೆ ಅವನು ನೀವುಗಳೇನಿದ್ದರೂ ಯಜ್ಞ, ಪೂಜೆ, ಹೋಮ ಅಂತ ದಾನ ದಕ್ಷಿಣೆ, ಭೋಜನ ಇಷ್ಟಕ್ಕೇ ಸರಿ ಎಂದು ಹೀಗಳೆದ. ಆಗ ಅಶ್ವತ್ಥಾಮ ಕೋಪಗೊಂಡು ಮುಂದೆ ಬಂದ. ಕುಲದ ಬಗ್ಗೆ ಮಾತುಗಳಾದವು.ಹೀಗೇ ವಾದ ವಿವಾದಗಳು ಬೆಳೆದವು.
ದುರ್ಯೋಧನ ಎಲ್ಲರನ್ನೂ ಸಮಾಧಾನ ಮಾಡಿ ಭೀಷ್ಮರ ಬಳಿ ಬಂದು ಆತನು ಪಾರ್ಥನೆಂದು ಗುರುತಾಯಿತು. ಮತ್ತೆ ವನವಾಸ ಎಂದು ಉತ್ಸಾಹದಿಂದ ಹೇಳಿದಾಗ ಭೀಷ್ಮರು ಅಧಿಕಮಾಸ, ಉಪರಿಗಳು ಇವೆಲ್ಲದರ ಲೆಕ್ಕದ ಪ್ರಕಾರ ನಿನ್ನೆಗೇ ಅಜ್ಞಾತವಾಸದ ಅವಧಿ ಮುಗಿಯಿತು. ನಿನ್ನಿನ ಹಗಲು ನಿನ್ನದು. ಇಂದಿನದು ಅವರದು ಎಂದು ಹೇಳಿದಾಗ ಕೌರವನು ಪೆಚ್ಚಾದನು.
ಗೋವುಗಳೊಂದಿಗೆ ಹಸ್ತಿನಾಪುರದತ್ತ ನಡೆ. ಇಲ್ಲಿನದು ನಾವು ನೋಡುತ್ತೇವೆ ಎಂದು ಸೇನೆಯನ್ನು ಎರಡು ಭಾಗ ಮಾಡಿಸಿದ ಭೀಷ್ಮ. ಅದರಂತೆ ದುರ್ಯೋಧನ ನಡೆದ. ಇದನ್ನು ಕಂಡು ಅರ್ಜುನ ಒಳ್ಳೆಯದು ಎಂದು ಹೇಳಿ ಉತ್ತರನಿಗೆ ರಥವನ್ನು ದುರ್ಯೋಧನನ ಕಡೆಗೆ ತಿರುಗಿಸಲು ಹೇಳಿದ. ಮೊದಲು ಗೋವುಗಳ ರಕ್ಷಣೆಗೆ ಆದ್ಯತೆ ಕೊಟ್ಟನು. ಇತ್ತ ಯುದ್ಧಕ್ಕೆ ಕರೆದ ದ್ರೋಣಾದಿಗಳಿಗೆ ಬಾಣಗಳಿಂದಲೇ ನಮಸ್ಕರಿಸಿ ದುರ್ಯೋಧನನ ಕಡೆ ತಿರುಗಿದ. ಭಯಂಕರವಾದ ಯುದ್ಧವಾಯಿತು. ಚದುರಂಗ ಸೇನೆಯೂ ಪುಡಿಯಾಯಿತು. ಗೋವುಗಳನ್ನು ಗೋಪಾಲಕರು ಒಂದುಗೂಡಿಸಿ ಮರಳಿ ವಿರಾಟನಗರದತ್ತ ನಡೆಸಿದರು. ಅದುವರೆಗೂ ಭಯಭೀತವಾಗಿದ್ದ ಗೋವುಗಳ ಹಿಂಡು ಈಗ ಪರಿಚಿತ ದಾರಿಯಲ್ಲಿ ಸಂತಸದಿಂದ ಹೊರಟವು. ಅರ್ಜುನನ ಪರಾಕ್ರಮವನ್ನು ಕಂಡು ಹನುಮನು ಕೊಂಡಾಡಿದನು. ಉತ್ತರನಿಗೂ ಉತ್ಸಾಹ ಮೂಡಿತು.

ಗೋವುಗಳನ್ನು ಬಿಡಿಸಿ ಕಳಿಸಿದ ನಂತರ ಈಗ ಯುದ್ಧಕ್ಕೆ ಬರುವವರೆಲ್ಲ ಬನ್ನಿರಿ ಎಂದು ಗಾಂಡೀವವನ್ನು ತೂಗುತ್ತಾ ನಿಂತ ಅರ್ಜುನ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ ಉಕ್ರೇನ್ನಲ್ಲಿ ನಾಗರಿಕರನ್ನು ಅಪಹರಿಸುತ್ತಿದೆ!

Fri Mar 25 , 2022
ರಷ್ಯಾದ ನಿಯಂತ್ರಿತ ಪ್ರದೇಶಗಳಲ್ಲಿ ಉಕ್ರೇನಿಯನ್ನರನ್ನು ನಿರಂಕುಶವಾಗಿ ಬಂಧಿಸಲಾಗಿದೆ ಮತ್ತು ಬಲವಂತದ ನಾಪತ್ತೆಗಳಿಗೆ ಒಳಪಡಿಸಲಾಗುತ್ತಿದೆ ಎಂದು ಯುಎನ್ ಬಿಬಿಸಿಗೆ ತಿಳಿಸಿದೆ. ಕನಿಷ್ಠ 36 ನಾಗರಿಕ ಬಂಧನ ಪ್ರಕರಣಗಳನ್ನು ಯುಎನ್ ಪರಿಶೀಲಿಸಿದೆ ಎಂದು ಬಿಬಿಸಿ ವರದಿ ಮಾಡಿದೆ, ಕುಟುಂಬಗಳು ಸಾಮಾನ್ಯವಾಗಿ ಬಂಧನದಲ್ಲಿರುವವರ ಭವಿಷ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ನಿರಾಕರಿಸುತ್ತವೆ. ಕೈವ್ ಬಿಟ್ಟುಕೊಡುವಂತೆ ಒತ್ತಡ ಹೇರಲು ಛಿದ್ರಗೊಂಡ ಉಕ್ರೇನಿಯನ್ ನಗರಗಳಿಂದ ರಷ್ಯಾಕ್ಕೆ ನೂರಾರು ಸಾವಿರ ನಾಗರಿಕರನ್ನು ಬಲವಂತವಾಗಿ ತೆಗೆದುಹಾಕಿದೆ ಎಂದು ಉಕ್ರೇನ್ ಮೊದಲು ಆರೋಪಿಸಿತು, […]

Advertisement

Wordpress Social Share Plugin powered by Ultimatelysocial