..ಕಿರೀಟಿ ಸ್ಟಂಟ್..ಆಕ್ಟಿಂಗ್..ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅದ್ಧೂರಿಯಾಗಿ ಗಾಂಧಿನಗರದ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಾಹುಬಲಿ ಸೂತ್ರಧಾರ ಎಸ್.ಎಸ್ ರಾಜಮೌಳಿಯ ಅಭಯ ಹಸ್ತದಿಂದ ಕಿರೀಟಿ ಚೊಚ್ಚಲ ಚಿತ್ರಕ್ಕೆ ಆರಂಭ ಸಿಕ್ಕಿದೆ. ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಲಿರುವ ಈ ಸಿನಿಮಾದ ಮುಹೂರ್ತ ಇವತ್ತು ಅದ್ಧೂರಿಯಾಗಿ ನೆರವೇರಿದೆ.

ಕಿರೀಟಿ ಚೊಚ್ಚನ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ ರಾಜಮೌಳಿ ಹೀರೋ ಇಂಟ್ರೂಡಕ್ಷನ್ ಟೀಸರ್ ನೋಡಿ ಕಿರೀಟಿ ಬೆನ್ನುತಟ್ಟಿದರು. “ನನಗೆ ಪ್ರಾಮಿಸಿಂಗ್ ಆಗಿರುವ ಯುವ ಪ್ರತಿಭೆಯನ್ನು ಲಾಂಚ್ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇವರು ನಟನೆ ಮಾಡಬಹುದು, ಡ್ಯಾನ್ಸ್ ಮಾಡಬಹುದು, ಇವರು ಸ್ಟಂಟ್ಸ್ ಅನ್ನೂ ಮಾಡಬಹುದು. ಇದೇ ಸಂದರ್ಭದಲ್ಲಿ ಯುವ ಪ್ರತಿಭೆಗೆ ಒಳ್ಳೆ ಲಾಂಚ್ ಕೂಡಬೇಕು.

ಕ್ರೇಜಿಸ್ಟಾರ್ ರವಿಚಂದ್ರನ್ ಕಿರೀಟಿ ಸಿನಿಮಾದಲ್ಲಿ ಸ್ಪೆಷಲ್ ರೋಲ್ ವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಕಿರೀಟಿ ತಂದೆಯಾಗಿ ಕಾಣಿಸಿಕೊಳ್ಳಲಿರುವ ರವಿಮಾವ ಸಿನಿಮಾ ಬಗ್ಗೆ ಸ್ಟಾರ್ ಕಾಸ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಲೀಲಾ ಇದ್ದಾರೆ, ಜನೀಲಿಯಾ ಇದ್ದಾರೆ. ನಾನೂ ಇದ್ದೀನಿ. ಇದಕ್ಕಿಂತ ಒಳ್ಳೆಯ ಪ್ಯಾಕೇಜ್ ಬೇಕಾ ನಿಮಗೆ? ಎಂದರು.

ಕಿರೀಟಿ ಸಿನಿಮಾದ ಮುಹೂರ್ತದ ವೇಳೆ ಹೀರೋ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಲಾಯಿತು. ಆಕ್ಷನ್, ಸ್ಟಂಟ್, ಡ್ಯಾನ್ಸ್, ಬೊಂಬಾಟ್ ಆಕ್ಟಿಂಗ್ ಎಲ್ಲರ ಮಿಶ್ರಣದ ಟೀಸರ್ ಝಲಕ್ ನೋಡಿ ಎಲ್ಲರೂ ಹುಬ್ಬೇರಿಸ್ತಿದ್ದಾರೆ. ಕಿರೀಟಿ ರೈಸಿಂಗ್ ಸ್ಟಾರ್ ಅಂತಾ ಕೊಂಡಾಡ್ತಿದ್ದಾರೆ.

ಕಿರೀಟಿ ಸಿನಿಮಾ ತೆಲುಗಿನ ಖ್ಯಾತ ಪ್ರೊಡಕ್ಷನ್ ಹೌಸ್ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15ನೇ ಸಿನಿಮಾ. ಮಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣರೆಡ್ಡಿ ನಿರ್ದೇಶನ, ಬಾಹುಬಲಿ ಛಾಯಾಗ್ರಾಹ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈ ಚಳಕದ, ಖ್ಯಾತ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀಪ್ರಸಾದ್ ಮ್ಯೂಸಿಕ್ ಇಂಪು , ಭಾರತದ ಬಹುಬೇಡಿಕೆಯ ಸ್ಟಂಟ್‌ ಮಾಸ್ಟರ್ ಪೀಟರ್ ಹೇನ್ ಆಕ್ಷನ್ ಸೀನ್ಸ್, ಕಲಾ ನಿರ್ದೇಶನ ಮಾಡಿರುವ ರವೀಂದರ್ ಈ ಸಿನಿಮಾದ ಕಲಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ಸಾಯುತ್ತೇನೆ ಎಂದು ಭಾವಿಸಿದ್ದೆ: ಕೈವ್‌ನಲ್ಲಿ ಗುಂಡು ಹಾರಿಸಿದ ಭಾರತೀಯ ವಿದ್ಯಾರ್ಥಿ

Fri Mar 4 , 2022
  ಹರ್ಜೋತ್ ಸಿಂಗ್ ಎಂಬ ವಿದ್ಯಾರ್ಥಿಯು ಗುಂಡಿನ ಮಧ್ಯದಲ್ಲಿ ಸಿಕ್ಕಿಬಿದ್ದನು ಮತ್ತು ಉಕ್ರೇನ್‌ನಲ್ಲಿ ಅನೇಕ ಬಾರಿ ಹೊಡೆದನು. ಗಾಯಗೊಂಡ ವಿದ್ಯಾರ್ಥಿಯನ್ನು ನಂತರ ಕೈವ್‌ನ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಹರ್ಜೋತ್ ಸಿಂಗ್ ಅವರು ಮೆಟ್ರೋ ಮೂಲಕ ಕೈವ್ ನಗರದಿಂದ ಎಲ್ವಿವ್‌ಗೆ ಹೋಗಲು ಪ್ರಯತ್ನಿಸುತ್ತಿದ್ದರು, ಆದರೆ ಅಲ್ಲಿ ನೆಲೆಸಿದ್ದ ಉಕ್ರೇನಿಯನ್ ಪಡೆಗಳು ಭಾರತೀಯ ವಿದ್ಯಾರ್ಥಿಗಳನ್ನು ರೈಲು ಹತ್ತಲು ಅನುಮತಿಸಲಿಲ್ಲ. ಅವರು ಇಬ್ಬರು ವಿದ್ಯಾರ್ಥಿಗಳನ್ನು ಭೇಟಿಯಾದರು ಮತ್ತು ಅವರು ಟ್ಯಾಕ್ಸಿ […]

Advertisement

Wordpress Social Share Plugin powered by Ultimatelysocial