ಮಳೆಗೆ ಮನೆಯೊಂದರಲ್ಲಿ ಬ್ರಹ್ಮಕಮಲ ಅರಳಿವೆ.

ಕೊಪ್ಪಳದಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಮಳೆಗೆ ಮನೆಯೊಂದರಲ್ಲಿ ಬ್ರಹ್ಮಕಮಲ ಅರಳಿವೆ. ಹೌದು! ಕೊಪ್ಪಳದ ಸಿಂಪಿಲಿಂಗಣ್ಣ ರಸ್ತೆಯಲ್ಲಿರುವ ಶಿವಕುಮಾರ ಕೋಣಂಗಿ ಎನ್ನುವವರ ಮನೆಯಲ್ಲಿ ಶನಿವಾರ 5 ಬ್ರಹ್ಮ ಕಮಲಗಳು ಅರಳಿದ್ರೆ ಭಾನುವಾರ ರಾತ್ರಿ 6 ಕಮಲಗಳು ಅರಳಿವೆ. ಇದು ಒಂದು ರಾತ್ರಿಯ ವಿಸ್ಮಯ ಹೂವು. ವರುಷಕ್ಕೊಮ್ಮೆ ಅರಳುವ ಈ ಅದ್ಭುತ ಹೂ ಬ್ರಹ್ಮಕಮಲ. ರಾತ್ರಿಯ ಗಾಢ ಕತ್ತಲಿನಲ್ಲಿ ಬೆಳಗುವ ಈ ಅಪ್ಪಟ ಬಿಳಿ ಬಣ್ಣದ, ನಕ್ಷತ್ರ ದಳಗಳ ಹೂ ಮನಮೋಹಕ. ಕೃಷಿತಜ್ಞರ ಪ್ರಕಾರ ರಾತ್ರಿ ಸುಮಾರು 8 ಗಂಟೆಯ ನಂತರ ಹಂತಹಂತವಾಗಿ 8 ಇಂಚು ಅರಳುವ ಈ ಹೂವನ್ನು ನೋಡುವುದೇ ಸಂಭ್ರಮ.
ಹಿಮಾಲಯದ ಕಣಿವೆಗಳಲ್ಲಿ ಹಲವೆಡೆಗಳಲ್ಲಿ ಬೆಳೆಯುವ ಈ ಅಪರೂಪದ ಹೂ ಕೊಪ್ಪಳದ ಶಿವಕುಮಾರ ಕೋಣಂಗಿ ಎನ್ನುವವರ ಮನೆಯಲ್ಲಿ ಅರಳಿದೆ. ಬ್ರಹ್ಮಕಮಲದ ಸಸ್ಯಶಾಸ್ತ್ರೀಯ ಹೆಸರು ಸಾಸುರಿಯಾ ಒಬ್ವಾಲಟಾ. ಈ ಹೂ ಅರಳುವಾಗ ಗಾಢ ವಾಸನೆ ಹೊರಹೊಮ್ಮುತ್ತದೆ.
ಆರ್ಕಿಡ್ ಕಳ್ಳಿ ಗಿಡ ಎಂಬ ಹೆಸರೂ ಇದೆ. ಇದು ದೇವಭೂಮಿ ಉತ್ತರಖಂಡದ ರಾಜ್ಯದ ಹೂವು ಎಂದು ಕರೆಯಲ್ಪಡುತ್ತದೆ.
ಬ್ರಹ್ಮಕಮಲದ ಹೂವು ಕೆಲ ಕಾಯಿಲೆಗಳಿಗೂ ಉಪಯೋಗ ಎನ್ನುವುದು ಪೂರ್ವಜರ ಮಾತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಟ್ಟದಲ್ಲಿ ಸಿಲುಕಿದ್ದ ತಂದೆ ಮಗನನ್ನು ಪೊಲೀಸರು ಹಾಗೂ ಸ್ಥಳೀಯರು ಸುರಕ್ಷಿತವಾಗಿ ರಕ್ಷಣೆ

Mon Jul 18 , 2022
ಬೆಟ್ಟದಲ್ಲಿ ಸಿಲುಕಿದ್ದ ತಂದೆ ಮಗನನ್ನು ಪೊಲೀಸರು ಹಾಗೂ ಸ್ಥಳೀಯರು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿಂದ ತುಮಕೂರು ಜಿಲ್ಲೆಯ ಮಧುಗಿರಿಗೆ ಏಕಶಿಲಾ ಬೆಟ್ಟ ನೋಡಲು ಬಂದಿದ್ದರು. ತಂದೆ ಮಗ ಬೆಟ್ಟ ಹತ್ತು ವೇಳೆ ಜೋರು ಮಳೆ ಶುರುವಾಗಿದೆ. ಇದರಿಂದ ಆತಂಕಗೊಂಡ ಇಬ್ಬರು ಮೇಲೆ ಹತ್ತಲು‌ ಆಗದೆ ಕೆಳಗೆ ಇಳಿಯಲು‌ ಆಗದೆ ಸಂಕಟಕ್ಕೆ ಸಿಲುಕಿದ್ದರು. ತ್ರಿಶಂಕು ಸ್ಥಿತಿಯಲ್ಲಿ ಇದ್ದ ತಂದೆ ಮಧುಗಿರಿ ಪೊಲೀಸರಿಗೆ ಕರೆ ಮಾಡಿ ರಕ್ಷಣೆ‌ಗೆ ಮನವಿ‌ ಮಾಡಿದ್ದಾರೆ ತಕ್ಷಣ […]

Advertisement

Wordpress Social Share Plugin powered by Ultimatelysocial