ಕಾಂಗ್ರೆಸ್​​​ ವಿಧಾನಸಭಾಕ್ಷೇತ್ರವಾರು ಬಸ್​ ಯಾತ್ರೆ ಪ್ರಾರಂಭಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ​.

ಕಾಂಗ್ರೆಸ್​​​ ವಿಧಾನಸಭಾಕ್ಷೇತ್ರವಾರು ಬಸ್​ ಯಾತ್ರೆ ಪ್ರಾರಂಭಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ​ ನೇತೃತ್ವದ ಬಸ್​ ಯಾತ್ರೆ ಮುಳಬಾಗಿಲು ಮತ್ತು ಕೆಜಿಎಫ್​​ಗೆ ತೆರಳಿದೆ.ಬೆಂಗಳೂರು: ರಾಜ್ಯ ಕಾಂಗ್ರೆಸ್  ನಾಯಕರು ಪ್ರಜಾಧ್ವನಿ ಹೆಸರಿನಲ್ಲಿ ಬಸ್​ ಯಾತ್ರೆ ಮಾಡುತ್ತಿದ್ದು ಜಿಲ್ಲಾವಾರು ಬಸ್​ ಯಾತ್ರೆ ಪೂರ್ಣಗೊಂಡಿದೆ.

ಈಗ ಎರಡು ತಂಡಗಳಾಗಿ ವಿಧಾನಸಭಾಕ್ಷೇತ್ರವಾರು ಬಸ್​ ಯಾತ್ರೆ ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆ ಇಂದು (ಫೆ.3) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾ ನೇತೃತ್ವದ ಬಸ್​ ಯಾತ್ರೆ ಮುಳಬಾಗಿಲು ಹಾಗೂ ಕೆಜಿಎಫ್​​ಗೆ ಹೊರಡಲಿದೆ. ಈ ಸಂಬಂಧ ಡಿಕೆ ಶಿವಕುಮಾರ್ ನೇತೃತ್ವದ ತಂಡ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಸಲೀಂ ಅಹಮದ್, ದಿನೇಶ್ ಗೂಳಿಗೌಡ, ಯೂತ್ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಹೊರಡಲಿದ್ದಾರೆ. ಪ್ರಜಾಧ್ವನಿ ಬಸ್ ಯಾತ್ರೆ ಕೆಪಿಸಿಸಿ ಕಚೇರಿಯಿಂದ ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ತಲುಪಿದೆ.

ಈ ಕುರಿತು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತನಾಡಿ ಪ್ರಜಾಧ್ವನಿ ಯಾತ್ರೆಯನ್ನು ವಿಧಾನಸಭಾ ಕ್ಷೇತ್ರವಾರು ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳನ್ನು ಮುಗಿಸಿದ್ದೇವೆ. ನಾವು ಏನು ನಿರೀಕ್ಷೆ ಮಾಡಿದ್ವೋ ಅದರ ಎರಡರಷ್ಟು ಜನ ಸೇರಿದ್ದಾರೆ. ಇದರ ಅರ್ಥ ಜನರ ಸಮಸ್ಯೆ ಇತ್ತಿಚೀಗೆ ದುಪ್ಪಟ್ಟಾಗಿದೆ. ಹಾಸನ ಮತ್ತು ಮಂಡ್ಯದಲ್ಲಿ ಒಬ್ಬರೇ ಒಬ್ಬರು ನಮ್ಮ ಶಾಸಕರಿಲ್ಲ. ಆದರೂ ಅಲ್ಲಿ ಜನ ಸೇರಿದ್ದು ನೋಡಿ ನನಗೆ ಅಶ್ಚರ್ಯವಾಗಿದೆ. ಶಾಸಕರು ಇಲ್ಲದೆ ಇರುವ ಜಿಲ್ಲೆಯಲ್ಲಿ ಅಷ್ಟು ಜನ ಸೇರಿದ್ದು ದಾಖಲೆ ಎಂದು ಹೇಳಿದ್ದಾರೆ.

ಬಸವಣ್ಣನವರ ಕರ್ಮ ಭೂಮಿಯಿಂದ ಸಿದ್ಧರಾಮಯ್ಯ ಹೊರಡುತ್ತಿದ್ದಾರೆ

ಬಸವಣ್ಣನವರ ಕರ್ಮ ಭೂಮಿಯಿಂದ ಸಿದ್ಧರಾಮಯ್ಯನವರು ಹೊರಡುತ್ತಿದ್ದಾರೆ. ಬರೆದಿಟ್ಟು ಕೊಳ್ಳಿ ಬಿಜೆಪಿ ಸರ್ಕಾರ ಇನ್ನು 50 ದಿನ ಮಾತ್ರ. ನಾನು ಎರಡು ಬಾರಿ ಸರ್ವೇ ಮಾಡಿದ್ದೇನೆ 160 ಸೀಟು ನಮಗೆ ಸಿಗುತ್ತೆ. 135 ಸೀಟು ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಿಡಿಸಿದರು.

ಪ್ರಣಾಳಿಕೆ ವಿಚಾರದಲ್ಲಿ ಪರಮೇಶ್ವರ್ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು ಪರಮೇಶ್ವರ್ ನಮ್ಮ ಪಕ್ಷದ ಆಸ್ತಿ. ಅವರು ಬಹಳ ಸುದೀರ್ಘವಾಗಿ ಪಕ್ಷ ಕಟ್ಟಿದವರು. ಬೆಂಗಳೂರಿಗೆ ಒಂದು ವಿಶೇಷವಾದ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ತರಬೇಕಿದೆ. ಬೆಂಗಳೂರು ಟ್ರಾಫಿಕ್ ಮ್ಯಾನ್ಮೆಂಜ್ಮೆಂಟ್​​ಗೆ ಸಂಬಂಧಿಸಿ ಸುರ್ಜೆವಾಲಾ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆ ಪರಮೇಶ್ವರ್ ನೇತೃತ್ವದಲ್ಲಿ ಒಂದು ತಂಡ ಸಿಂಗಾಪುರಕ್ಕೆ ಹೋಗಲಿದೆ. ಸಿಂಗಾಪುರಕ್ಕೆ ಒಂದು ಟೀಂ ಕಳಿಸಲು ನಿರ್ಧಾರ ಮಾಡಿದ್ದೇವೆ. ಅದರ ಬಗ್ಗೆ ಪರಮೇಶ್ವರ್ ಸುರ್ಜೆವಾಲಾ ಅವರ ಜೊತೆ ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಬಂದಿರೋ ಕಳಂಕ ತಪ್ಪಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಸರ್ಕಾರ ಭ್ರಷ್ಟಚಾರದಲ್ಲೇ ಮುಳುಗಿ ಹೋಗಿದೆ. ಈ ಯಾತ್ರೆ ಜನರ ಸಮಸ್ಯೆಗಳನ್ನ ತಿಳಿಯಲು. ನಾವು ಸುಳ್ಳು ಅಶ್ವಾಸನೆ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.

ಭಿನ್ನಾಭಿಪ್ರಾಯಗಳು ಇರಬಹುದು, ಅಸಮಾಧಾನ ಅಂತ ಅರ್ಥೈಸುವುದು ಸರಿಯಲ್ಲ

ನಾನು 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈ ಅನುಭವ ಆಧಾರದ ಮೇಲೆ ಸುರ್ಜೇವಾಲ ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಕೆಲವು ಮಹತ್ವದ ವಿಚಾರಗಳನ್ನು ಸುರ್ಜೇವಾಲ ಜತೆ ಚರ್ಚಿಸಿದ್ದೇನೆ. ಕೆಲವು ಭಿನ್ನಾಭಿಪ್ರಾಯಗಳು ಇರಬಹುದು. ಹಾಗಂತ ಅಸಮಾಧಾನ ಅಂತ ಅರ್ಥೈಸುವುದು ಸರಿಯಲ್ಲ. ನನ್ನ ಅಭಿಪ್ರಾಯಗಳನ್ನು ರಣದೀಪ್​ ಸುರ್ಜೇವಾಲ ಬಳಿ ಹೇಳಿದ್ದೇನೆ ಎಂದು ಬೆಂಗಳೂರಿನಲ್ಲಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅತ್ತ ಟಿಕೆಟ್​​ ಫೈನಲ್​​ ಮಾಡಲು ಕಸರತ್ತು ನಡೆಯುತ್ತಿದೆ.

Fri Feb 3 , 2023
ಅತ್ತ ಟಿಕೆಟ್​​ ಫೈನಲ್​​ ಮಾಡಲು ಕಸರತ್ತು ನಡೆಯುತ್ತಿದೆ. ಇತ್ತ ದಕ್ಷಿಣ ಉತ್ತರ ಧ್ರುವದಲ್ಲಿ ಮತ್ತೊಂದು ಯಾತ್ರೆಗೆ ಕೈಪಡೆಗೆ ಸಿದ್ಧತೆ ನಡೆಸ್ತಿದೆ. ಇಂದಿನಿಂದ ಸಿದ್ದು-ಡಿಕೆಶಿ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆಯಲ್ಲಿ ಕಹಳೆ ಮೊಳಗಿಸಲಿದ್ದಾರೆ. ಉತ್ತರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಯಾತ್ರೆ ಕೈಗೊಂಡ್ರೆ,, ದಕ್ಷಿಣದಿಂದ ಕೆಪಿಸಿಸಿ ಸಾರಥಿ ಡಿ.ಕೆ.ಶಿವಕುಮಾರ್ ದಂಡಯಾತ್ರೆಗೆ ಹೊರಡಲಿದ್ದಾರೆ. ಈ ಬಾರಿ ಗದ್ದುಗೆ ಹಿಡಿಯಲೇಬೇಕು ಅಂತ ಕಾಂಗ್ರೆಸ್ ಶಪಥ ತೊಟ್ಟಿದೆ. ಕಳೆದ ಒಂದು ವರ್ಷಗಳಿಂದ ಸಾಲು ಸಾಲು ಯಾತ್ರೆಗೆ ಪುರಾತನ ಪಾರ್ಟಿ […]

Advertisement

Wordpress Social Share Plugin powered by Ultimatelysocial