ಕುತುಬ್ ಮಿನಾರ್ ಸ್ಥಳದಲ್ಲಿ ದೇವಾಲಯ ಪುರುಜ್ಜೀವನಗೊಳಿಸುವ ಬೇಡಿಕೆಗೆ ಪುರಾತತ್ವ ಇಲಾಖೆ ವಿರೋಧ

ನವದೆಹಲಿ,ಮೇ 24- ಕುತುಬ್ ಮಿನಾರ್ ಸ್ಮಾರಕ ಸ್ಥಳದಲ್ಲಿ ದೇವಸ್ಥಾನವನ್ನು ಪುನರುಜ್ಜೀವನಗೊಳಿಸುವ ಬೇಡಿಕೆಗೆ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ವಿರೋಧ ವ್ಯಕ್ತಪಡಿಸಿದೆ. ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಹಿಂದೂ ಸಂಘಟನೆಗಳ ಪರವಾಗಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಪುನರ್ ಆರಂಭವಾಗಿದೆ.

ವಕೀಲ ಹರಿಶಂಕರ್ ಜೈನ್ ಅರ್ಜಿದಾರರ ಪರವಾಗಿ ಹಾಜರಾಗಿ ಕುತುಬ್ ಮಿನಾರ್ ಗೋಪುರ ಮತ್ತು ಮಸೀದಿ ಆವರಣದಲ್ಲಿ ಹಿಂದೂ ದೇವಸ್ಥಾನಗಳು ಮತ್ತು ವಿಗ್ರಹಗಳು ಇದ್ದವು. ಅವುಗಳನ್ನು ನಾಶಗೊಳಿಸಿದ್ದರು. ದೈವತ್ವದ ಪಾವಿತ್ರತೆ ನಾಶವಾಗುವುದಿಲ್ಲ. ಮಸೀದಿಯ ಸಂಕೀರ್ಣದಲ್ಲಿ ವಿಗ್ರಹಗಳು ಇರುವಾಗ ಪೂಜೆ ಮಾಡಲು ಅವಕಾಶ ಇರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ವಾದಿಸಿದರು.

ಭಾರತೀಯ ಸರ್ವೇಕ್ಷಣಾ ಇಲಾಖೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದು, ಅರ್ಜಿದಾರರ ಮನವಿಗೆ ವಿರೋಧ ವ್ಯಕ್ತಪಡಿಸಿದೆ.
ಮಸೀದಿ ಆವರಣದಲ್ಲಿ ದೇವಸ್ಥಾನವನ್ನು ಪುನರುಜ್ಜೀವನಗೊಳಿಸುವುದು ಸರಿಯಲ್ಲ ಎಂದು ತಿಳಿಸಿದೆ. 1914ರಲ್ಲಿ ಕುತುಬ್ ಮಿನಾರ್‍ನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದಾಗ ಅಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಾವು ಇರಲಿಲ್ಲ. ಯಾವ ವಿಗ್ರಹಗಳು ಕೂಡ ಪತ್ತೆಯಾಗಿರಲಿಲ್ಲ. ಹಾಗಾಗಿ ಈಗ
ಅಲ್ಲಿ ಪೂಜೆಗೆ ಅವಕಾಶ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ವಾದ-ವಿವಾದದ ನಡುವೆ ನ್ಯಾಯಾೀಧಿಶರು ಪೂಜೆಯ ಹಕ್ಕನ್ನು ನೀಡಲು ನಿರಾಕರಿಸಿದ್ದಾರೆ. 800 ವರ್ಷಗಳಿಂದಲೂ ವಿಗ್ರಹಗಳು ಪೂಜೆ ಇಲ್ಲದೆ ಉಳಿದಿವೆ. ಅದೇ ರೀತಿ ಇರಲು ಬಿಡಿ. ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಅಥವಾ ಪೂಜೆಯ ಹಕ್ಕನ್ನು ನಿರ್ಬಂಸಲು ಅವಕಾಶವಿದೆ ಎಂದು ನ್ಯಾಯಾೀಶರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರದ್ದುಗೊಳಿಸುವಂತೆ ಎಚ್.ವಿಶ್ವನಾಥ್

Tue May 24 , 2022
ಬೆಂಗಳೂರು,ಮೇ 24- ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ರಚಿಸಲಾಗಿರುವ ಸಮಿತಿಯನ್ನು ರದ್ದುಗೊಳಿಸುವಂತೆ ಬಿಜೆಪಿಯ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಅಡುಗೂರು ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯ ಪರಿಕ್ಷಕರಣ ಸಮಿತಿಯನ್ನು ರದ್ದುಗೊಳಿಸಬೇಕು. ಅದರಲ್ಲಿ ಸರಿಯಾದ ಶಿಕ್ಷಣ ತಜ್ಞರಿಲ್ಲ. ಧರ್ಮಾಧಾರಿತವಾಗಿ ಪಠ್ಯಪುಸ್ತಕ ಪರಿಷ್ಕರಣೆ ಸರಿಯಲ್ಲ ಎಂದು ವ್ಯಾಖ್ಯಾನಿಸಿದ್ದಾರೆ. ಹಿಂದೆ ರಚಿಸಲಾದ ಪಠ್ಯ ಪುಸ್ತಕಗಳು ಸಂಪೂರ್ಣವಾಗಿ ಸರಿಯಿವೆ ಎಂದು ನಾನು ಹೇಳುವುದಿಲ್ಲ. ಅದರಲ್ಲಿಯೂ […]

Advertisement

Wordpress Social Share Plugin powered by Ultimatelysocial