ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರದ್ದುಗೊಳಿಸುವಂತೆ ಎಚ್.ವಿಶ್ವನಾಥ್

ಬೆಂಗಳೂರು,ಮೇ 24- ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ರಚಿಸಲಾಗಿರುವ ಸಮಿತಿಯನ್ನು ರದ್ದುಗೊಳಿಸುವಂತೆ ಬಿಜೆಪಿಯ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಅಡುಗೂರು ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯ ಪರಿಕ್ಷಕರಣ ಸಮಿತಿಯನ್ನು ರದ್ದುಗೊಳಿಸಬೇಕು.

ಅದರಲ್ಲಿ ಸರಿಯಾದ ಶಿಕ್ಷಣ ತಜ್ಞರಿಲ್ಲ. ಧರ್ಮಾಧಾರಿತವಾಗಿ ಪಠ್ಯಪುಸ್ತಕ ಪರಿಷ್ಕರಣೆ ಸರಿಯಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.

ಹಿಂದೆ ರಚಿಸಲಾದ ಪಠ್ಯ ಪುಸ್ತಕಗಳು ಸಂಪೂರ್ಣವಾಗಿ ಸರಿಯಿವೆ ಎಂದು ನಾನು ಹೇಳುವುದಿಲ್ಲ. ಅದರಲ್ಲಿಯೂ ತಪ್ಪುಗಳಿರಬಹುದು. ಅವುಗಳನ್ನು ಸರಿಪಡಿಸಲು ಯಾವುದೇ ಅಡ್ಡಿಯಿಲ್ಲ. ಆದರೆ ಈ ವೇಳೆ ನಿಯಮ ಪಾಲನೆ ಅಗತ್ಯ. ನಿಯಮ ಕಡೆಗಣಿಸಿ ರಚಿಸಿರುವ ಸಮಿತಿಯನ್ನು ರದ್ದು ಮಾಡಬೇಕು. ಹೊಸದಾಗಿ ಸಮಿತಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆನರಾ ಬ್ಯಾಂಕಿನ ಎಟಿಎಂ ದರೋಡೆಗೆ ವಿಫಲ ಯತ್ನ: ಎಟಿಎಂಗೆ ಕಾವಲುಗಾರನ ಜೊತೆ ಭದ್ರತೆಯು ಮರೀಚಿಕೆ : ಸಿಸಿಟಿವಿ ಮತ್ತು ಬಾಗಿಲು ಇಲ್ಲದಿರುವ ಎಟಿಎಂ ಕೇಂದ್ರ

Tue May 24 , 2022
ಕೊರಟಗೆರೆ:- ಕೆನರಾ ಬ್ಯಾಂಕಿನ ಕಚೇರಿ ಮತ್ತು ಆವರಣದ ಸಿಸಿಟಿವಿಯೇ ಮಾಯ.. ಬ್ಯಾಂಕಿನ ಕಟ್ಟಡದ ಕೌಪೌಂಡು ಮತ್ತು ಕಿಟಿಕಿಯೇ ಇಲ್ಲದಾಗಿದೆ.. ಇನ್ನೂ ಎಟಿಎಂ ಕೇಂದ್ರಕ್ಕೆ ಕಾವಲುಗಾರನ ಭದ್ರತೆಯ ಜೊತೆ ಬಾಗಿಲು ಇಲ್ಲದಿರುವ ಪರಿಣಾಮ ರಾತ್ರೋರಾತ್ರಿ ಕಳ್ಳನೋರ್ವ ಎಟಿಎಂ ಕೇಂದ್ರದೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದಲ್ಲಿಯೇ ಈಗಾಗಲೇ ಪೇಟ್ರೊಲ್ ಬಂಕ್, ಮಧ್ಯದ ಅಂಗಡಿ, ಬೇಕರಿ, ಕುರಿಮೇಕೆ ಕಳ್ಳತನ, ಸರಣಿ […]

Advertisement

Wordpress Social Share Plugin powered by Ultimatelysocial