ಪ್ಯಾನ್​ ಇಂಡಿಯಾ ಸ್ಟಾರ್​ ಆದ್ರೂ ಪ್ರಭಾಸ್​ಗೆ ಇದೆ ಭಾಷೆ ಸಮಸ್ಯೆ; ಹೌದೆಂದು ಒಪ್ಪಿಕೊಂಡ ನಟ

‘ಸಾಹೋ’ ಬಿಡುಗಡೆ ಸಂದರ್ಭದಲ್ಲಿ ಪ್ರಭಾಸ್​ ಅವರ ಹಿಂದಿ ಉಚ್ಛಾರಣೆಯನ್ನು ಕೇಳಿ ಅನೇಕರು ಟ್ರೋಲ್​ ಮಾಡಿದ್ದರು. ಹಾಗಂತ ಪ್ರಭಾಸ್​ ಅವರು ತಮ್ಮ ಪ್ರಯತ್ನದಿಂದ ಹಿಂದೆ ಸರಿದಿಲ್ಲ.ನಟ ಪ್ರಭಾಸ್​ (Prabhas) ಅವರಿಗೆ ಇರುವ ಜನಪ್ರಿಯತೆ ಸಣ್ಣದೇನಲ್ಲ.

ಅವರನ್ನು ಇಷ್ಟಪಡುವ ಅಭಿಮಾನಿಗಳು ದೇಶಾದ್ಯಂತ ಇದ್ದಾರೆ. ‘ಬಾಹುಬಲಿ’ ಸಿನಿಮಾದ ಯಶಸ್ಸಿನ ಬಳಿಕ ಪ್ರಭಾಸ್​ ಇಮೇಜ್​ ಬದಲಾಯಿತು. ಅವರ ಪ್ಯಾನ್​ ಇಂಡಿಯಾ ಹೀರೋ (Pan India Hero) ಆಗಿ ಗುರುತಿಸಿಕೊಂಡಿದ್ದಾರೆ. ಉತ್ತರ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಪ್ರಭಾಸ್​ ಹೊಂದಿದ್ದಾರೆ. ಆದರೂ ಕೂಡ ಅವರು ಟ್ರೋಲ್​ ಆಗುವುದು ತಪ್ಪಲಿಲ್ಲ. ಅದಕ್ಕೆ ಕಾರಣ ಹಲವು. ಪ್ರಭಾಸ್​ ಅವರು ಫಿಟ್ನೆಸ್​ ಕಳೆದುಕೊಂಡಿದ್ದಾರೆ ಎಂಬ ವಿಷಯ ಇಟ್ಟುಕೊಂಡು ಕೆಲವೇ ತಿಂಗಳ ಹಿಂದೆ ಅವರನ್ನು ಟ್ರೋಲ್​ ಮಾಡಲಾಗಿತ್ತು. ಅದಕ್ಕೂ ಮುನ್ನ ‘ಸಾಹೋ’ ಸಿನಿಮಾದ ಸಂದರ್ಭದಲ್ಲಿ ಪ್ರಭಾಸ್​ ಅವರ ಹಿಂದಿ ಉಚ್ಛಾರಣೆ ಬಗ್ಗೆ ತಕರಾರು ತೆಗೆಯಲಾಗಿತ್ತು. ಪ್ರಭಾಸ್​ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದರೂ ಕೂಡ ಭಾಷೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಸರಿಯಾಗಿ ಹಿಂದಿ ಉಚ್ಛಾರಣೆ ಬರುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಈಗಲೂ ಕೆಲವರು ಟ್ರೋಲ್​ ಮಾಡುತ್ತಿದ್ದಾರೆ. ಸದ್ಯ ಪ್ರಭಾಸ್​ ‘ರಾಧೆ ಶ್ಯಾಮ್​’ ಸಿನಿಮಾದ (Radhe Shyam Movie) ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರಿಗೆ ಮತ್ತೆ ಡಬ್ಬಿಂಗ್​ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ.

ಪ್ರೇಕ್ಷಕರಿಗೆ ಸ್ಟಾರ್​ ನಟರ ಧ್ವನಿ ಚೆನ್ನಾಗಿ ಪರಿಚಯ ಆಗಿರುತ್ತದೆ. ಅವರ ಸಿನಿಮಾಗಳು ಬೇರೆ ಭಾಷೆಗೆ ಡಬ್​ ಆದಾಗ ಬೇರೆ ಕಲಾವಿದರಿಂದ ಧ್ವನಿ ಕೊಡಿಸಿದರೆ ಸರಿಯಾಗಿ ಹೊಂದಿಕೆ ಆಗುವುದಿಲ್ಲ. ಹಾಗಾಗಿ ಆಯಾ ನಟರೇ ಡಬ್​ ಮಾಡಲು ಪ್ರಯತ್ನಿಸುತ್ತಾರೆ. ಪರಭಾಷೆಯ ಮೇಲೆ ಸ್ಟಾರ್​ ನಟರಿಗೆ ಹಿಡಿತ ಇಲ್ಲ ಎಂದಾದರೆ ಅವರು ಡಬ್​ ಮಾಡಿದ್ದು ಕೃತಕವಾಗಿ ಕೇಳಿಸುತ್ತದೆ. ಸದ್ಯ ಪ್ರಭಾಸ್​ ಅವರಿಗೂ ಈ ಸಮಸ್ಯೆ ಎದುರಾಗಿದೆ.

‘ಸಾಹೋ’ ಸಂದರ್ಭದಲ್ಲಿ ಅವರ ಹಿಂದಿ ಉಚ್ಛಾರಣೆಯನ್ನು ಕೇಳಿ ಅನೇಕರು ಟ್ರೋಲ್​ ಮಾಡಿದ್ದರು. ಹಾಗಂತ ಪ್ರಭಾಸ್​ ಅವರು ತಮ್ಮ ಪ್ರಯತ್ನದಿಂದ ಹಿಂದೆ ಸರಿದಿಲ್ಲ. ಈಗ ‘ರಾಧೆ ಶ್ಯಾಮ್​’ ಚಿತ್ರಕ್ಕೂ ಸ್ವತಃ ಅವರೇ ಹಿಂದಿಯಲ್ಲಿ ಡಬ್​ ಮಾಡಿದ್ದಾರೆ. ಆದರೆ ತಮ್ಮ ಹಿಂದಿ ಉಚ್ಛಾರಣೆಯಲ್ಲಿ ಸಮಸ್ಯೆ ಇದೆ ಎಂಬುದನ್ನು ಅವರ ಒಪ್ಪಿಕೊಂಡಿದ್ದಾರೆ. ‘ನನ್ನ ಹಿಂದಿ ಉಚ್ಛಾರಣೆಯಲ್ಲಿ ಇರುವ ಏಕೈಕ ಸಮಸ್ಯೆ ಎಂದರೆ ಹೈದರಾಬಾದ್​ ಟಚ್​ ಇರುವುದು. ರಾಧೆ ಶ್ಯಾಮ್​ ಮತ್ತು ಆದಿಪುರುಷ್​ ಸಿನಿಮಾಗಳಲ್ಲಿ ನನ್ನ ಉಚ್ಛಾರಣೆ ಸ್ವಲ್ಪ ಸುಧಾರಿಸಿದೆ ಅಂತ ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಪರ್ಫೆಕ್ಟ್​​ ಆಗುತ್ತೇನೆ’ ಎಂದು ಪ್ರಭಾಸ್​ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿದಿನ ಬೆಲ್ಲ ಸೇವಿಸುವುದರಿಂದ ದೇಹಕ್ಕಾಗುವ ಲಾಭಗಳೇನು ಗೊತ್ತಾ..?

Sat Mar 5 , 2022
ಸಾಮಾನ್ಯವಾಗಿ ನಾವೆಲ್ಲರೂ ಸಿಹಿ ಪದಾರ್ಥಗಳಲ್ಲಿ ಸಕ್ಕರೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಬೆಲ್ಲ ಸಕ್ಕರೆಗಿಂತ ಹೆಚ್ಚು ರುಚಿಕರ ಹಾಗೂ ಪೌಷ್ಠಿಕವಾಗಿದೆ ಎಂಬುದು ನಿಮಗೆ ತಿಳಿದಿದೆಯೇ. ಬೆಲ್ಲದ ಸೇವನೆ ಶರೀರದಿಂದ ಹಲವು ರೋಗಗಳನ್ನು ತೊಲಗಿ ಸುತ್ತದೆ ಎಂದು ಸಾಬೀತಾಗಿದೆ. ಹೀಗಾಗಿ ಬೆಲ್ಲ ಸೇವಿಸಿ ಯಾವ ಯಾವ ರೋಗಗಳಿಂದ ಮುಕ್ತಿ ಪಡೆಯಬಹುದು ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ. ಬೆಲ್ಲದಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಅಂಶ ಇರುತ್ತದೆ. ಇದು ಪಚನ ಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಬೆಲ್ಲದ […]

Advertisement

Wordpress Social Share Plugin powered by Ultimatelysocial