ತನ್ನಂತೆಯೇ ಕಾಣುತ್ತಿದ್ದ ಮಹಿಳೆಯನ್ನ ಹತ್ಯೆ ಮಾಡಿದ ಲೇಡಿ.

23 ವರ್ಷದ ಜರ್ಮನ್-ಇರಾಕಿ ಮಹಿಳೆಯೊಬ್ಬರು ತನ್ನ ಮರಣವೆಂದು ಬಿಂಬಿಸಲು ತನ್ನನ್ನೇ ಹೋಲುವ ಮಹಿಳೆಯನ್ನ ಹತ್ಯೆ ಮಾಡಿದ್ದಾಳೆ. ಶರಬನ್ ಕೆ ಎಂಬಾಕೆ ತನ್ನಂತೆಯೇ ಕಾಣುವ ಮಹಿಳೆಯನ್ನು ಕೊಂದ ಆರೋಪವನ್ನು ಎದುರಿಸುತ್ತಿದ್ದಾರೆ.ಆಗಸ್ಟ್ 2022 ರಲ್ಲಿ ನಡೆದ ಈ ಕೊಲೆಯನ್ನು ಶೇಕಿರ್ ಕೆ ಎಂಬ ಕೊಸೊವನ್ ವ್ಯಕ್ತಿಯ ಸಹಾಯದಿಂದ ನಡೆಸಲಾಗಿದೆ ಕೌಟುಂಬಿಕ ವಿವಾದದ ಕಾರಣದಿಂದ ಶರಬನ್ ತನ್ನ ಸ್ವಂತ ಮರಣವನ್ನು ನಕಲಿ ಮಾಡಲು ಬಯಸಿದ್ದಳು. ಅದಕ್ಕಾಗಿ ಆಕೆ ತನ್ನನ್ನೇ ಹೋಲುವ ಅಲ್ಜೀರಿಯಾದ ಮಹಿಳೆ ಖಾದಿಡ್ಜಾ ಒ ನನ್ನು ಕೊಂದು ಇದೀಗ ಬಂಧನಕ್ಕೊಳಗಾಗಿದ್ದಾಳೆ.ಕೊಲೆಗೆ ಬಳಸಿದ ಆಯುಧ ಇನ್ನೂ ಪತ್ತೆಯಾಗಿಲ್ಲ. ಆದರೆ ಖದೀಜಾ ಖಾದಿಡ್ಜಾ ಓನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳು ಅಗಾಧವಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಖಾದಿಜಾಳನ್ನು 50ಕ್ಕೂ ಹೆಚ್ಚು ಚಾಕು ಇರಿತದಿಂದ ಸಾಯಿಸಿ ಆಕೆಯ ಮುಖವನ್ನು ವಿರೂಪಗೊಳಿಸಲಾಗಿದೆ.ಅವಳನ್ನು ಕೊಂದ ನಂತರ ಇಬ್ಬರು ಆರೋಪಿಗಳು ಆಕೆಯ ಶವವನ್ನು ತಮ್ಮ ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟು ಇಂಗೋಲ್‌ಸ್ಟಾಡ್‌ಗೆ ತೆರಳಿದ್ದಾರೆ. ಅಲ್ಲಿ ಶರಬನ್ ಅವರ ಪೋಷಕರು ಶವವನ್ನು ನೋಡಿ ಅದು ಆಕೆಯದ್ದೇ ಶವವೆಂದು ನಂಬಿದ್ದರು. ಆದರೆ ಆನಂತರ ಕೆಲವು ಪ್ರಶ್ನೆಗಳು ಹುಟ್ಟಿಕೊಂಡವು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶವ ಖದೀಜಾರದ್ದು ಎಂದು ಗುರುತಿಸಿದರು. ಶರಬನ್ ಹತ್ಯೆಯ ಹಿಂದಿನ ವಾರದಲ್ಲಿ ಸಾಮಾಜಿಕ ಮಾಧ್ಯಮಗಳ ವಿವಿಧೆಡೆ ತನ್ನಂತೆ ಕಾಣುವ ಮಹಿಳೆಯರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕಾಸ್ಮೆಟಿಕ್ಸ್ ಆಫರ್‌ನಿಂದ ಆಮಿಷಕ್ಕೊಳಗಾಗಿ ಅವಳನ್ನು ಭೇಟಿಯಾಗಲು ಖಾದಿಡ್ಜಾ ಒಪ್ಪಿಕೊಂಡಿದ್ದರು. ಇಬ್ಬರು ಆರೋಪಿಗಳು ಆಕೆಯನ್ನು ಆಕೆಯ ಅಪಾರ್ಟ್‌ಮೆಂಟ್‌ನಿಂದ ಕರೆದೊಯ್ದು ಹೀಲ್‌ಬ್ರಾನ್ ಮತ್ತು ಇಂಗೋಲ್‌ಸ್ಟಾಡ್ ನಡುವಿನ ಅರಣ್ಯ ಪ್ರದೇಶದಲ್ಲಿ ಕೊಂದಿದ್ದಾರೆ ಎಂದು ನಂಬಲಾಗಿದೆ.ಜನವರಿ 2023 ರಲ್ಲಿ ಶೇಕಿರ್ ಮತ್ತು ಶರಬನ್ ವಿರುದ್ಧ ಬಂಧನ ವಾರಂಟ್‌ಗಳನ್ನು ಹೊರಡಿಸಲಾಗಿದ್ದು ಪ್ರಕರಣದಲ್ಲಿ ಅವರು ಅಪರಾಧಿಗಳೆಂದು ಸಾಬೀತಾದ ಬಳಿಕ ಜೋಡಿಯು ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈಲು ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈಲ್ವೆ ಇನ್ಸ್ ಪೆಕ್ಟರ್.

Wed Feb 1 , 2023
ಮುಂಬೈನಲ್ಲಿ ಮುಖ್ಯ ಲೋಕೋ ಇನ್ಸ್ ಪೆಕ್ಟರ್ ಒಬ್ಬರು ರೈಲು ಬರ್ತಿದ್ದಂತೆ ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಇನ್ಸ್ ಪೆಕ್ಟರ್ ಸ್ಥಳೀಯ ರೈಲು ಬರುವಿಕೆಗಾಗಿ ಕಾಯುತ್ತಿರುವುದನ್ನು ತೋರಿಸಿದೆ.ಪ್ಲಾಟ್‌ಫಾರ್ಮ್‌ನಲ್ಲಿದ್ದ ಇತರ ಪ್ರಯಾಣಿಕರು ಭಯಭೀತರಾಗಿ ನೋಡುತ್ತಿರುವಾಗ ಇನ್ಸ್ ಪೆಕ್ಟರ್ ರೈಲು ಸಮೀಪಿಸುತ್ತಿದ್ದಂತೆ ಹಳಿ ಮೇಲೆ ಹಾರಿದರು. ಈ ಸಂಬಂಧ ಜಿಆರ್‌ಪಿ ವ್ಯಾಪ್ತಿಯ ವಿಲೇಪಾರ್ಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ಸ್ ಪೆಕ್ಟರ್‌ ಆತ್ಮಹತ್ಯೆ ನಿರ್ಧಾರ ಕೆಲಸದ ಒತ್ತಡಕ್ಕೆ ಸಂಬಂಧಿಸಿದ್ದಲ್ಲ […]

Advertisement

Wordpress Social Share Plugin powered by Ultimatelysocial