ಲಕ್ಷ್ಮೇಶ್ವರ :ಗ್ರಾಮ ಪಂಚಾಯತಿ ಸದಸ್ಯರ ಧರಣಿ

ಜನಸಾಮಾನ್ಯರು ತಮ್ಮ ಹಕ್ಕಿಗಳಿಗಾಗಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪಂಚಾಯತಿ ಅಧಿಕಾರಿಗಳ, ಸದಸ್ಯರ, ಅಧ್ಯಕ್ಷರ ವಿರುದ್ಧ ಪ್ರತಿಭಟನೆ ಮಾಡುವುದು ಸಾಮನ್ಯ, ಆದರೆ ಇಲ್ಲಿ ಅಧ್ಯಕ್ಷರ ಕೆಲವು ಸದಸ್ಯರ, ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯತಿ ಸದಸ್ಯರೆ ಪ್ರತಿಭಟನೆ ಗೆ ಕುಳಿತುಕೊಂಡಿದ್ದಾರೆ. ಏನಪ್ಪ ಇದು , ಎಲ್ಲಿ ನಡೆದಿದ್ದು ಅಂತ ನೋಡ್ತಾಯಿದಿರಾ ಹಾಗಾದ್ರೆ ಈ ಸ್ಟೋರಿ ನೋಡಿ.

ಯಸ್…. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ , ದೌರ್ಜನ್ಯ ನಡೆದಿದೆ, ಅಧ್ಯಕ್ಷ, ಉಪಾಧ್ಯಕ್ಷ ಕೆಲ ಸದಸ್ಯರು, ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸೂರಣಗಿ ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಪ್ರತಿಭಟನೆ ಕುಳಿತುಕೊಂಡಿರುವ ಘಟನೆ ನಡೆದಿದೆ.

ಮಾತನಾಡಿದ ಸದಸ್ಯ ಪ್ರವೀಣ ಸೂರಣಗಿ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಪತಿಯಿಂದ ಹಸ್ತಕ್ಷೇಪ ನಡೆಯುತ್ತಿದೆ, ಮೇಲಾಧಿಕಾರಿಗಳು ಒಳಗೊಂಡು ಕೆಲ ಸದಸ್ಯರು ಭ್ರಷ್ಟಾಚಾರ, ದುರಾಡಳಿತ,ದೌರ್ಜನ್ಯ, ಮಾಹಿತಿ ಕದ್ದಾಲಿಕೆ ಮಾಡುತ್ತಿದ್ದಾರೆ. ಇವೆಲ್ಲ ನಡೆದಿದ್ದರೂ ಮೇಲ್ಮಟ್ಟದ ಅಧಿಕಾರಿಗಳು ಗಮನಹರಿಸದಿರುವುದು ವಿಪರ್ಯಾಸ. ಅಧ್ಯಕ್ಷರ ಹಾಗೂ ಕೆಲ ಸದಸ್ಯರ ಸರ್ವಾಧಿಕಾರಿ ವರ್ತನೆ ಹಾಗೂ ಅವ್ಯವಹಾರವನ್ನು ಖಂಡಿಸಿ ನಾವು ಸ್ವತಃ ಗ್ರಾಮಪಂಚಾಯಿತಿಯ ಸದಸ್ಯರೇ ಪಂಚಾಯಿತಿಯ ದುರಾಡಳಿತಕ್ಕೆ ಧಿಕ್ಕಾರ ಹಾಕುತ್ತಿದ್ದೆವೆ.

14ನೇ, 15ನೇ ಹನಕಾಸಿನಲ್ಲಿ ಮತ್ತು ವರ್ಗ 1 ರಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದರಲ್ಲದೇ, ನಮ್ಮ ಗ್ರಾಮ ಪಂಚಾಯತಿಯಲ್ಲಿ ಕೆಲ ನಾಲ್ಕೈದು ಜನ ಸದಸ್ಯರನ್ನು ಹೊರತು ಪಡಸಿ ಉಳಿದವರಿಗೆ ಅಸ್ಪಷ್ಟ ಮಾಹಿತಿ ನೀಡಿತ್ತಾರೆ. ಪಂಚಾಯತ್ ರಾಜ್ ಇಲಾಖೆಯ ಕಾನೂನು ಗಾಳಿಗೆ ತುರಿ ಹಿಟ್ಲರ್ ಆಳ್ವಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಇವರಿಗೆ ಕಾನೂನು ಕ್ರಮ ಜರಗಿಸುವರೆಗು ನಾವು ಪ್ರತಿಭಟನೆ ಕೈ ಬಿಡುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ,

ಸಂಪೂರ್ಣ ತನಿಖೆ ನಡೆಸಿ ಇವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಿ.ಇ.ಒ ಹಾಗೂ ಇಒ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಪಟ್ಟುಹಿಡಿದರು.

ಪ್ರವೀಣ ಸೂರಣಗಿ, ಪ್ರತಿಭಟನೆಗೆ ಕುಳಿತುಕೊಂಡ ಗ್ರಾಮ ಪಂಚಾಯತಿ ಸದಸ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗದಗ:ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ಸಿದ್ದರಾಗಬೇಕು: ವಸಂತ ಪಡಗದ

Thu Jul 21 , 2022
ನರಗುಂದ : ಕಳಸಾ – ಬಂಡೂರಿ ಯೋಜನೆ ಶೀಘ್ರವಾಗಿ ಪ್ರಾರಂಭಮಾಡದೆ ಹೋದರೆ 1981 ರ ಹೋರಾಟ ದಿನಗಳು ಮತ್ತೆ ಮರುಕಳಿಸುತ್ತದೆ ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಬೇಕು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ವಸಂತ ಪಡಗದ ಹೇಳಿದರು.ಅವರು 42 ನೇ ರೈತ ಹುತಾತ್ಮ ದಿನದ ಅಂಗವಾಗಿ ಗುರುವಾರ ಚಿಕ್ಕನರಗುಂದ ಗ್ರಾಮದ ಹುತಾತ್ಮ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ರೈತ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಹುತಾತ್ಮ ರೈತನಿಗೆ […]

Advertisement

Wordpress Social Share Plugin powered by Ultimatelysocial