ಲ್ಯಾಪ್‌ ಟಾಪ್‌ ಅವ್ಯವಹಾರವನ್ನು ಎಬಿವಿಪಿ ಖಂಡಿಸಿ ಮಂಗಳೂರು ವಿವಿಯ ಆಡಳಿತ ಸೌಧದ ಎದುರು ಪ್ರತಿಭಟನೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯು ಲ್ಯಾಪ್ ಟಾಪ್ ನೀಡಲು ಖರೀದಿಯನ್ನು ನಡೆಸಿದ್ದು, ಈ ಖರೀದಿಯಲ್ಲಿ ಅವ್ಯವಹಾರವು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈಗಾಗಲೇ ಪತ್ರಿಕೆಗಳಲ್ಲಿ ಈ ವಿಷಯವು ಪ್ರಕಟಗೊಂಡಿದೆ. ಈ ಅವ್ಯವಹಾರವನ್ನು ಎಬಿವಿಪಿ ಖಂಡಿಸಿ ಮಂಗಳೂರು ವಿವಿಯ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿತು.ರಾಷ್ಟ್ರದಾದ್ಯಂತ ಉತ್ತಮ ಹೆಸರನ್ನು ಹೊಂದಿರುವ ಮಂಗಳೂರು ವಿ.ವಿ ಈ ರೀತಿಯ ಭ್ರಷ್ಟಚಾರದ ಹಾಗೂ ಅವ್ಯವಹಾರದಿಂದ ಕೂಡಿದ ನಡೆಗಳಿಂದ ತನ್ನ ಘನತೆಯನ್ನು ಕಳೆದು ಕೊಳ್ಳುತ್ತಿರುವುದು ಶೋಚನಿಯ ವಿಷಯವಾಗಿದೆ. ಆಡಳಿತ ವರ್ಗವು ಈ ಕೂಡಲೇ ಎಚ್ಚೆತ್ತು ಕೊಂಡು ವಿ.ವಿ ಯ ಘನತೆ ಗೌರವವನ್ನು ಎತ್ತಿ ಹಿಡಿಯುವ ಅಗತ್ಯವಿದೆ.
ಈ ಲ್ಯಾಪ್ ಟಾಪ್ ಖರೀದಿಯಲ್ಲಿ ಸರಿ ಸುಮಾರು 1.21 ಕೋಟಿಯ ಹಗರಣ ನಡೆದಿರುವುದು ಬಾಹ್ಯ ನೋಟಕ್ಕೆ ಕಂಡು ಬರುತ್ತಿದೆ, ಈ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆಯು ನಡೆಯ ಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳಬೇಕೆಂದು ಎಬಿವಿಪಿ ಆಗ್ರಹಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ.ಇ.ಎಸ್.ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇಧಗೊಳಿಸಿ  ಗಡಿಪಾರಿಗೆ ಒತ್ತಾಯ

Mon Dec 20 , 2021
ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿದ ಎಂ.ಇ.ಎಸ್.ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇಧಗೊಳಿಸಿ ಹಾಗೂ ಆರೋಪಗಳನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಟೈಯರಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ಮಾಡಿ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿಗೆ ಮನವಿ ಸಲ್ಲಿಸಿದರು.ನಂತರ ಮಾತನಾಡಿದ ಗದಗ ಜಿಲ್ಲಾ ಅಧ್ಯಕ್ಷ ಬಸವರಾಜ ಹಿರೇಮನಿ ಬೆಳಗಾವಿ ಜಿಲ್ಲೆ ಅನಗೋಳ ಗ್ರಾಮದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಭಗ್ನಗೊಳಿಸಿದ […]

Advertisement

Wordpress Social Share Plugin powered by Ultimatelysocial