ಲವಂಗ ಮಸಾಲೆ;

ಲವಂಗ ಗರಂ ಮಸಾಲೆ ತಯಾರಿಸುವಾಗ ಬಳಸುವ ಒಂದು ಸಾಮಾಗ್ರಿ. ಯಾವುದೇ ಮಸಾಲೆಗೆ ಲವಂಗ ಬಳಸಿದರೆ ವಿಭಿನ್ನ ಘಮ ಪಡೆಯಬಹುದು.

ಹಲ್ಲು ನೋವಾದರೂ ಹಲ್ಲಿನೆಡೆಗೆ ಲವಂಗ ತುಂಡನ್ನು ಇಟ್ಟುಕೊಂಡು ನೋವು ನಿವಾರಕವಾಗಿ ಬಳಸುತ್ತೇವೆ. ಲವಂಗವನ್ನು ಸೇವಿಸುವುದರಿಂದ ಹಲವಾರು ಉಪಯೋಗಗಳಿವೆ.

ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಲವಂಗ ಹೆಚ್ಚಿಸುತ್ತದೆ. ಬಿಳಿ ರಕ್ತಕಣಗಳ ಪ್ರಮಾಣವನ್ನು ಹೆಚ್ಚಿಸುವ ಇವು ವಿಟಮಿನ್ ಸಿಯನ್ನೂ ಒಳಗೊಂಡಿದೆ. ಮಧುಮೇಹಿಗಳು ಬೆಳಗೆದ್ದು ಚಿಟಿಕೆ ಲವಂಗ ಹುಡಿಯನ್ನು ಬಾಯಿಗೆ ಹಾಕಿಕೊಳ್ಳುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಕೊಲೆಸ್ಟ್ರಾಲ್ ಇಳಿಸುವಲ್ಲಿಯೂ ಇದರ ಪಾತ್ರ ಮಹತ್ವದ್ದು.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಪೋಷಕಾಂಶಗಳು ಇದರಲ್ಲಿದ್ದು ಆಯುರ್ವೇದ ಔಷಧ ಪ್ರಕಾರಗಳಲ್ಲಿ ಲವಂಗಕ್ಕೆ ಮೇಲ್ದರ್ಜೆಯ ಸ್ಥಾನವಿದೆ. ಮಲಬದ್ಧತೆಯನ್ನು ತಡೆಯಲು ಇದು ನೆರವಾಗುತ್ತದೆ. ಇದನ್ನು ಪುಡಿ ಮಾಡಿ ಜೇನಿನೊಂದಿಗೆ ಸೇವಿಸಬೇಕು.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು ರಕ್ತವನ್ನು ತೆಳುವಾಗಿಸುವ ಗುಣ ಹೊಂದಿದೆ. ಆಹಾರದ ರೂಪದಲ್ಲಿ ವಾರಕ್ಕೆರಡು ಬಾರಿ ಲವಂಗ ಸೇವಿಸುವುದರಿಂದ ದೇಹವನ್ನು ಬೆಚ್ಚಗಿಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

US ನಲ್ಲಿ ಅತಿ ಎತ್ತರದ ಹನುಮಾನ್ ದೇವರನ್ನು ಡೆಲವೇರ್ನಲ್ಲಿ ಸ್ಥಾಪಿಸಲಾಗಿದೆ

Mon Jan 24 , 2022
ಡೆಲವೇರ್‌ನ ನ್ಯೂ ಕ್ಯಾಸಲ್ ಕೌಂಟಿಯಲ್ಲಿರುವ ಹಾಕೆಸಿನ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ (ಯುಎಸ್) ಅತ್ಯಂತ ಎತ್ತರದ ಹನುಮಾನ್ ಪ್ರತಿಮೆಯ ನೆಲೆಯಾಗಿದೆ. ಸೋಮವಾರ, ನಗರವು ತನ್ನ ಅತಿದೊಡ್ಡ ಹಿಂದೂ ದೇವಾಲಯದಲ್ಲಿ 25 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಸ್ಥಾಪಿಸಿತು. “ಇದು ಸುಮಾರು 45 ಟನ್‌ಗಳಷ್ಟು ತೂಗುತ್ತದೆ” ಎಂದು ಹಿಂದೂ ಟೆಂಪಲ್ ಆಫ್ ಡೆಲವೇರ್ ಅಸೋಸಿಯೇಶನ್‌ನ ಅಧ್ಯಕ್ಷ ಪತಿಬಂಡಾ ಶರ್ಮಾ ಹೇಳಿದ್ದಾರೆ, ಎಎನ್‌ಐ ವರದಿ ಮಾಡಿದೆ. “ಇದನ್ನು ತೆಲಂಗಾಣದ ವಾರಂಗಲ್‌ನಿಂದ ಡೆಲವೇರ್‌ಗೆ ರವಾನಿಸಲಾಗಿದೆ” ಎಂದು ಅವರು […]

Advertisement

Wordpress Social Share Plugin powered by Ultimatelysocial