ಮಕ್ಕಳು, ಯುವಜನರಿಗಾಗಿ `ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ’ಗಳ ಸ್ಥಾಪನೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಇಂದು 2023-24 ನೇ ಸಾಲಿನ ಬಜೆಟ್ (Budget 2023) ಮಂಡಿಸುತ್ತಿದ್ದಾರೆ. ಇದು ವಿತ್ತ ಸಚಿವರ ಐದನೇ ಬಜೆಟ್ ಆಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.ಇದೇ ವೇಳೆ ಬಜೆಟ್‌ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತ, ಇದು ಅಮೃತಕಾಲದ ಅವರ ಮೊದಲ ಬಜೆಟ್. ಅಂತರರಾಷ್ಟ್ರೀಯ ಆರ್ಥಿಕ ಕುಸಿತದ ಹೊರತಾಗಿಯೂ, ಆರ್ಥಿಕ ಬೆಳವಣಿಗೆಯ ದರವು ಶೇಕಡಾ 7 ರಷ್ಟಿತ್ತು. ಈ ಬಜೆಟ್ ಅಗತ್ಯವಿರುವ ಜನರಿಗಾಗಿ ಇದೆ. ಅನೇಕ ಅದ್ಭುತ ಹೆಜ್ಜೆಗಳಿಂದಾಗಿ ವಿಶ್ವದಲ್ಲಿ ಭಾರತದ ಸ್ಥಾನಮಾನ ಹೆಚ್ಚಾಗಿದೆ. ಕೋವಿಡ್ ಸಮಯದಲ್ಲಿ, ಉಚಿತ ಪಡಿತರದೊಂದಿಗೆ ಯಾರೂ ಹಸಿವಿನಿಂದ ಮಲಗದಂತೆ ನಾವು ಖಚಿತಪಡಿಸಿದ್ದೇವೆ.ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ ಯುವಕರು, ಮಹಿಳೆಯರು, ಒಬಿಸಿ ಈ ಸಮುದಾಯಕ್ಕೆ ಬಜೆಟ್ ನಲ್ಲಿ ಪೋಕಸ್ ಮಾಡಲಾಗಿದೆ. ಆಧಾರ್, ಯುಪಿಐ, ಕೊವಿನ್ ವಿಶ್ವಮಾನ್ಯತೆ ಸಿಕ್ಕಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಗೆ 2 ಲಕ್ಷ ಕೋಟಿ ರೂ. ಮಿಸಲಿಡಲಾಗಿದೆ. ಒಂದು ವರ್ಷ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.ಮಹಿಳೆಯರ ಆರ್ಥಿಕ ಸಬಲೀಕರಣದ ಗುರಿ ಹೊಂದಲಾಗಿದ್ದು, ಕರಕುಶಲಕರ್ಮಿಗಳಿಗೆ ನುತನ ಯೋಜನೆ ಘೋಷಣೆ ಮಾಡಲಾಗಿದ್ದು, ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಉಜ್ವಲ ಯೋಜನೆಯಡಿ 6 ಕೋಟಿ ಜನರಿಗೆ ಸಂಪರ್ಕ, ಆರ್ಥಿಕತೆಯು ಹೆಚ್ಚು ಔಪಚಾರಿಕವಾಗಿದೆ. ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಶ್ರೀ ಅನ್ನ ಜೋಳ, ಶ್ರೀ ಅನ್ನ ರಾಗಿ, ಸಜ್ಜೆ ಸಿರಿಧಾನ್ಯಗಳ ಯೋಜನೆ ಜಾರಿ, ಹಸಿರು ಕ್ರಾಂತಿ ಸರ್ವರನ್ನು ಒಳಗೊಂಡ ಅಭಿವೃದ್ಧಿ, ಮಹಿಳೆಯರ ಆರ್ಥಿಕ ಸಬಲೀಕರಣ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತನ್ನಂತೆಯೇ ಕಾಣುತ್ತಿದ್ದ ಮಹಿಳೆಯನ್ನ ಹತ್ಯೆ ಮಾಡಿದ ಲೇಡಿ.

Wed Feb 1 , 2023
23 ವರ್ಷದ ಜರ್ಮನ್-ಇರಾಕಿ ಮಹಿಳೆಯೊಬ್ಬರು ತನ್ನ ಮರಣವೆಂದು ಬಿಂಬಿಸಲು ತನ್ನನ್ನೇ ಹೋಲುವ ಮಹಿಳೆಯನ್ನ ಹತ್ಯೆ ಮಾಡಿದ್ದಾಳೆ. ಶರಬನ್ ಕೆ ಎಂಬಾಕೆ ತನ್ನಂತೆಯೇ ಕಾಣುವ ಮಹಿಳೆಯನ್ನು ಕೊಂದ ಆರೋಪವನ್ನು ಎದುರಿಸುತ್ತಿದ್ದಾರೆ.ಆಗಸ್ಟ್ 2022 ರಲ್ಲಿ ನಡೆದ ಈ ಕೊಲೆಯನ್ನು ಶೇಕಿರ್ ಕೆ ಎಂಬ ಕೊಸೊವನ್ ವ್ಯಕ್ತಿಯ ಸಹಾಯದಿಂದ ನಡೆಸಲಾಗಿದೆ ಕೌಟುಂಬಿಕ ವಿವಾದದ ಕಾರಣದಿಂದ ಶರಬನ್ ತನ್ನ ಸ್ವಂತ ಮರಣವನ್ನು ನಕಲಿ ಮಾಡಲು ಬಯಸಿದ್ದಳು. ಅದಕ್ಕಾಗಿ ಆಕೆ ತನ್ನನ್ನೇ ಹೋಲುವ ಅಲ್ಜೀರಿಯಾದ ಮಹಿಳೆ ಖಾದಿಡ್ಜಾ […]

Advertisement

Wordpress Social Share Plugin powered by Ultimatelysocial