Helth Tips :ʼಆರೋಗ್ಯʼಕ್ಕೆ ಉತ್ತಮ ಮಡಕೆ ನೀರು

ಬೇಸಿಗೆಯ ಬೇಗೆ ಆರಂಭವಾಗಿದೆ. ಎಷ್ಟು ನೀರು ಕುಡಿದರೂ ಸಾಕೆನಿಸದ ದಾಹ ಕಾಡುತ್ತಿದೆ. ಆರೋಗ್ಯದ ದೃಷ್ಟಿಯಿಂದಲೂ ದೇಹ ನಿರ್ಜಲೀಕರಣಗೊಳ್ಳುವುದು ಉತ್ತಮವಲ್ಲ. ಇವುಗಳಿಂದ ರಕ್ಷಣೆ ಪಡೆಯಲು ಇಲ್ಲಿದೆ ಒಂದು ಉಪಾಯ.ಮಡಕೆಯಲ್ಲಿ ನೀರನ್ನು ಸಂಗ್ರಹಿಸಿಟ್ಟು ಕುಡಿಯುವುದರಿಂದ ಆರೋಗ್ಯವೂ ವೃದ್ಧಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.ಮಣ್ಣಿನ ಮಡಿಕೆಯಲ್ಲಿ ಅಥವಾ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರು ಸ್ಟೀಲ್, ಪ್ಲಾಸ್ಟಿಕ್ ಅಥವಾ ಗಾಜಿನ ಜಾಡಿಗಳಲ್ಲಿ ಇಟ್ಟ ನೀರಿಗಿಂತ ಉತ್ತಮವಾದುದು. ಮಡಕೆಯ ನೀರು ಅಪ್ಪಟವಾಗಿದ್ದು ಜೀವ ರಾಸಾಯನಿಕ ಕ್ರಿಯೆ ಸುಲಭವಾಗಿಸುತ್ತದೆ.ಬಾಟಲ್ ಗಳು ಬಿಸಿಯಾದಾಗ ಬಿಡುವ ರಾಸಾಯನಿಕಗಳು ದೇಹಕ್ಕೆ ಉತ್ತಮವಾದುದಲ್ಲ. ಅದೇ ಮಡಕೆಯ ನೀರು ಮಣ್ಣಿನಂಶದಿಂದ ಕೆಂಪಾದರೂ ಅದನ್ನು ಕುಡಿದು ಜೀರ್ಣಿಸಿಕೊಳ್ಳುವ ಶಕ್ತಿ ದೇಹಕ್ಕಿದೆ.ಇಂದು ಸಂಜೆ ಮಡಕೆಯಲ್ಲಿ ನೀರು ಹಾಕಿ ನಾಳೆ ಅದನ್ನು ಸೇವಿಸುವುದು ಅತ್ಯುತ್ತಮ ವಿಧಾನ. ಇದರಿಂದ ಗಂಟಲು ತುರಿಕೆ, ಸೀನುವಿಕೆಗಳೂ ಕಡಿಮೆಯಾಗುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ ವಾಹನವನ್ನೇ ಕದ್ದ ಕಿಲಾಡಿ ಕಳ್ಳ ಅರೆಸ್ಟ್!

Wed Feb 2 , 2022
ಧಾರವಾಡ : ಅಣ್ಣಿಗೇರಿ ಪಟ್ಟಣದ ಅಂಬಿಕಾ ನಗರ ನಿವಾಸಿ ನಾಗಪ್ಪ ಹಡಪದ ಎಂಬುವವರು ಪೊಲೀಸ್ ಠಾಣೆಯ ಕೆಲಸಕ್ಕೆ ಬಳಸುತ್ತಿದ್ದ ಬೊಲೆರೋ ವಾಹನದೊಂದಿಗೆ ಬ್ಯಾಡಗಿವರೆಗೂ ಹೋಗಿದ್ದಾರೆ. ಸಿಬ್ಬಂದಿ ವಾಹನ ಬಳಸಿ ವಾಹನದಲ್ಲೇ‌ ಕೀ ಬಿಟ್ಟಿದ್ದರು.ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಪೊಲೀಸ್ ವಾಹನ ಕಳ್ಳತನವಾಗಿರುವ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಪೊಲೀಸ್ ಠಾಣೆ ಎದುರು ನಡೆದಿದೆ.ನಾಗಪ್ಪ ಹಡಪದ ಎಂಬ ವ್ಯಕ್ತಿ ಪೊಲೀಸ್ ವಾಹನ ಎಗರಿಸಿಕೊಂಡು ಪೊಲೀಸ್ ವಾಹನದಲ್ಲಿ ಬ್ಯಾಡಗಿವರೆಗೂ ಹೋಗಿದ್ದಾರೆ. ಸದ್ಯ ಪೊಲೀಸರು ಹಾವೇರಿ […]

Advertisement

Wordpress Social Share Plugin powered by Ultimatelysocial